Asianet Suvarna News Asianet Suvarna News

Google Doodle ಮೂಲಕ ಕೋವಿಡ್-19 ಲಸಿಕೆ, ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಟೆಕ್ ದೈತ್ಯ!

*ಪ್ರಪಂಚದಾದ್ಯಂತ ಕೊರೋನಾ ಪ್ರಕರಣಗಳಲ್ಲಿ ಏರಿಕೆ
*ಕೋವಿಡ್-19 ಲಸಿಕೆ,  ಮಾಸ್ಕ್ ಬಗ್ಗೆ ಸರ್ಚ್‌ ದೈತ್ಯ ಜಾಗೃತಿ ‌
*ಆನಿಮೆಟೆಡ್‌ ಗೂಗಲ್‌ ಡೂಡಲ್‌ನಲ್ಲಿದೆ ಸಂದೇಶ

Google Doodle Encourages People to Get COVID 19 Vaccine Wear Face Masks Amid Corona Spike mnj
Author
Bengaluru, First Published Jan 17, 2022, 2:26 PM IST

Tech Desk: ಪ್ರಪಂಚಾದಾದ್ಯಂತ ಕೊರೋನಾ  ಪ್ರಕರಣಗಳ ಸಂಖ್ಯೆ ದಿನದಿಂದ ಏರಿಕೆಯಾಗುತ್ತಿದೆ. ಈ ಮಧ್ಯೆ ಲಸಿಕೆಯನ್ನು ಪಡೆಯಲು‌ (Vaccine) ಮತ್ತು ಮಾಸ್ಕ್‌ಗಳನ್ನು ಧರಿಸಲು (Face Mask) ಜನರನ್ನು ಮತ್ತೊಮ್ಮೆ ಪ್ರೋತ್ಸಾಹಿಸಲು ಟೆಕ್‌ ದೈತ್ಯ ಗೂಗಲ್ (google) ಸೋಮವಾರ ತನ್ನ ವೆಬ್‌ಸೈಟ್‌ನಲ್ಲಿ ಅನಿಮೇಟೆಡ್ ಡೂಡಲ್ (Animated Doodle) ರಚಿಸಿದೆ. ನೀವು ಸರ್ಚ್ ಇಂಜಿನ್‌ನ ಮುಖಪುಟಕ್ಕೆ (Home Page) ಒಮ್ಮೆ ಭೇಟಿ ನೀಡಿದಾಗ ಗೂಗಲ್ ಡೂಡಲ್ ಕಾಣಿಸಿಕೊಳ್ಳುತ್ತದೆ. ಡೂಡಲ್ ಮೇಲೆ ಕ್ಲಿಕ್ ಮಾಡುವುದರಿಂದ ನಿಮ್ಮ ಹತ್ತಿರದ ಸ್ಥಳದಲ್ಲಿ ಕೋವಿಡ್‌ 19 ಲಸಿಕೆಗಳ ಲಭ್ಯತೆಯ ಫಲಿತಾಂಶಗಳನ್ನು ತೋರಿಸುತ್ತದೆ. ಕಳೆದ ವರ್ಷ ಮಾರಣಾಂತಿಕ ವೈರಸ್‌ನ ಎರಡನೇ ಅಲೆಯು ಭಾರತ ಸೇರಿದಂತೆ ಇತರ ದೇಶಗಳಲ್ಲಿ ಹಬ್ಬಿದ್ದ ಸಂದರ್ಭದಲ್ಲಿ ಗೂಗಲ್ ಈ ಡೂಡಲ್ ಅನ್ನು ಪರಿಚಯಿಸಿತ್ತು.

ಡೂಡಲ್ “Get Vaccinated. Wear a Mask. Save Lives” (ಲಸಿಕೆ ಪಡೆಯಿರಿ. ಮಾಸ್ಕ್ ಧರಿಸಿ. ಜೀವಗಳನ್ನು ಉಳಿಸಿ) ಎಂಬ ಸಂದೇಶವನ್ನು ಹೊಂದಿದೆ.  ಡೂಡಲ್ ಚಿತ್ರದ ಮೇಲೆ ಕರ್ಸರ್ ಮೇಲೆ ಇಡುವ ಮೂಲಕ ಇದನ್ನು ಓದಬಹುದು.  ಕೋವಿಡ್ ಲಸಿಕೆಗಾಗಿ ಜಾಗೃತಿ ಮೂಡಿಸಲು ಮತ್ತು ಮುಖವಾಡಗಳನ್ನು ಧರಿಸುವುದನ್ನು ಉತ್ತೇಜಿಸಲು ಅನಿಮೇಟೆಡ್ ಎಫೆಕ್ಟ್ ಜೊತೆಗೆ ಫೇಸ್ ಮಾಸ್ಕ್ ಮತ್ತು ಬ್ಯಾಂಡೇಜ್‌ಗಳೊಂದಿಗೆ  ಗೂಗಲ್ ಲೋಗೋದ ಅಕ್ಷರಗಳನ್ನು ಡೂಡಲ್ ತೋರಿಸುತ್ತದೆ.

ಇದನ್ನೂ ಓದಿ: ಕಚೇರಿಗೆ ಬರುವ ಉದ್ಯೋಗಿಗಳಿಗೆ ವಾರಕ್ಕೊಮ್ಮೆ ಕೋವಿಡ್ 19 ಟೆಸ್ಟ್‌ ಕಡ್ಡಾಯ: ಗೂಗಲ್

ಗೂಗಲ್ ಡೂಡಲ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಡೂಡಲ್ ಭಾರತದ ಜೊತೆಗೆ ಕೆನಡಾ, ಇಟಲಿ, ಲಿಥುವೇನಿಯಾ ಮತ್ತು ಕೆರಿಬಿಯನ್‌ನ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಕೂಡ ಇದೇ ರೀತಿ ಕಾಣಿಸಿಕೊಳ್ಳುತ್ತಿದೆ. ಬಳಕೆದಾರರು ಒಮ್ಮೆ ಡೂಡಲ್ ಮೇಲೆ ಕ್ಲಿಕ್ ಮಾಡಿದರೆ, ಹತ್ತಿರದ ಸ್ಥಳದಲ್ಲಿ ಕೋವಿಡ್ ಲಸಿಕೆಗಳ ಲಭ್ಯತೆಯನ್ನು ತೋರಿಸಲು “COVID vaccine near me” ಎಂಬ ಪ್ರಶ್ನೆಗೆ ಹುಡುಕಾಟ ಫಲಿತಾಂಶಗಳನ್ನು (Search Results) ತೋರಿಸುತ್ತದೆ

ಕಳೆದ ವರ್ಷ ಮೇ ತಿಂಗಳಲ್ಲಿ, ಯುಎಸ್, ಯುಕೆ, ಕೆನಡಾ, ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಸೇರಿದಂತೆ ದೇಶಗಳಲ್ಲಿ ಗೂಗಲ್ ಇದೇ ಡೂಡಲ್ ಅನ್ನು ಹೊರತಂದಿತ್ತು. ಈಗ ಕೋವಿಡ್‌ 19 ರೂಪಾಂತರಿ ಒಮಿಕ್ರೋನ್‌  ಪ್ರಕರಣಗಳ ಹೆಚ್ಚಾದ ಬೆನ್ನಲ್ಲೇ ಅನಿಮೇಟೆಡ್ ಡೂಡಲ್ ಗೂಗಲ್ ಸೈಟ್‌ನಲ್ಲಿ ಮತ್ತೆ ಕಾಣಿಸಿಕೊಂಡಿದೆ.‌

ಇದನ್ನೂ ಓದಿSearch Engine ವ್ಯವಹಾರದಿಂದ Apple ದೂರವಿಡಲು Googleನಿಂದ ಬಿಲಿಯನ್‌ಗಟ್ಟಲೆ ಹಣ ಸಂದಾಯ!

ಸಕ್ರಿಯ ಪ್ರಕರಣಗಳು 15.5 ಲಕ್ಷಕ್ಕೇರಿಕೆ: 7.5 ತಿಂಗಳ ಗರಿಷ್ಠ: ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 2,71,202 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಕೇರಳದ 106 ಮತ್ತು ಪಶ್ಚಿಮ ಬಂಗಾಳದ 39 ಸೋಂಕಿತರು ಸಾವಿಗೀಡಾಗುವುದರೊಂದಿಗೆ ಒಟ್ಟು 314 ಜನ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 1.32 ಲಕ್ಷ ಸಕ್ರಿಯ ಪ್ರಕರಣಗಳು ಏರಿಕೆಯಾಗಿವೆ. ಇದರೊಂದಿಗೆ ಸಕ್ರಿಯ ಕೇಸು 15.5 ಲಕ್ಷಕ್ಕೆ ಏರಿಕೆಯಾಗಿದ್ದು, ಇದು 7.5 ತಿಂಗಳ (225 ದಿನಗಳ) ಗರಿಷ್ಠವಾಗಿದೆ. ಗುಣಮುಖ ಪ್ರಮಾಣವು ಶೇ.94.51ಕ್ಕೆ ಕುಸಿದಿದೆ.

ದೈನಂದಿನ ಪಾಸಿಟಿವಿಟಿ ದರ ಶೇ.16.28ರಷ್ಟಿದ್ದು, ಇದು ಶನಿವಾರದ ಶೇ.16.66ಕ್ಕಿಂತ ಕೊಂಚ ಉತ್ತಮ. ವಾರದ ಪಾಸಿಟಿವಿಟಿ ದರ ಶೇ.13.69ರಷ್ಟಿದೆ. ಒಟ್ಟು ಪ್ರಕರಣ 3.71 ಕೋಟಿಗೆ, ಒಟ್ಟು ಸಾವು 4.86 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 156.76 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.

Follow Us:
Download App:
  • android
  • ios