Search Engine ವ್ಯವಹಾರದಿಂದ Apple ದೂರವಿಡಲು Googleನಿಂದ ಬಿಲಿಯನ್‌ಗಟ್ಟಲೆ ಹಣ ಸಂದಾಯ!

ಆ್ಯಪಲ್ ಸರ್ಚ್ ಇಂಜಿನ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಗೂಗಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ, ಇದು ಗೂಗಲ್‌ಗೆ ಮಾರುಕಟ್ಟೆಯಲ್ಲಿ ತನ್ನ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
 

Google is paying apple to no get involved in search business says report mnj

Tech Desk:  ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಹೂಡಲಾಗಿರುವ ಹೊಸ ಕಾನೂನು ಮೊಕದ್ದಮೆಯೊಂದು ಆ್ಯಪಲ್ (Apple) ಸರ್ಚ್ ಇಂಜಿನ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಮತ್ತು ಅದರ ಸಾಧನಗಳು ಸಫಾರಿಯಲ್ಲಿ (Safari) ಡೀಫಾಲ್ಟ್ ಆಯ್ಕೆಯಾಗಿ ಗೂಗಲ್ಅನ್ನು (Google) ನೀಡುವುದನ್ನು ಮುಂದುವರಿಸಲು ಗೂಗಲ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಬಹಿರಂಗಪಡಿಸಿದೆ.ಆ್ಯಪಲ್ ಮತ್ತು ಗೂಗಲ್ ಎರಡರ ವಿರುದ್ಧದ ಮೊಕದ್ದಮೆಯು, ಈ ಟೆಕ್ ಕಂಪನಿಗಳು ಯುಎಸ್ ಆಂಟಿಟ್ರಸ್ಟ್ (Anti Trust) ಕಾನೂನುಗಳನ್ನು ಉಲ್ಲಂಘಿಸುವ ಸರ್ಚ್ ಎಂಜಿನ್ ವ್ಯವಹಾರದ ವಿಷಯದಲ್ಲಿ ಸ್ಪರ್ಧಾತ್ಮಕವಲ್ಲದ ಒಪ್ಪಂದವನ್ನು ಹೊಂದಿವೆ ಎಂದು ಹೇಳಿಕೊಂಡಿದೆ. 

ಈ ಬೆನ್ನಲ್ಲೆ ಆ್ಯಪಲ್‌ಗೆ ಗೂಗಲ್‌ ದೊಡ್ಡ ಮೊತ್ತದ ಹಣ ಪಾವತಿಸಿದೆ ಎಂದು ಹೇಳಲಾಗಿದೆ. ಇದರ ನಿಖರವಾದ ಮೊತ್ತವು ತಿಳಿದಿಲ್ಲವಾದರೂ, ಇದು ವಾರ್ಷಿಕ ಆಧಾರದ ಮೇಲೆ ಬಹು-ಬಿಲಿಯನ್-ಡಾಲರ್ ಪಾವತಿಗಳನ್ನು ಮಾಡುತ್ತದೆ ಎಂದು ಮೊಕದ್ದಮೆಯು ಪ್ರತಿಪಾದಿಸುತ್ತದೆ. ದಿ ನ್ಯೂಯಾರ್ಕ್ ಟೈಮ್ಸ್‌ನ 2020ರಲ್ಲಿನ ವರದಿ ಕೂಡ ಇದೇ ಉದ್ದೇಶಕ್ಕಾಗಿ ಆ್ಯಪಲ್ ಗೂಗಲ್‌ನಿಂದ ವರ್ಷಕ್ಕೆ ಅಂದಾಜು $8-12 ಬಿಲಿಯನ್ ಪಡೆಯುತ್ತದೆ ಎಂದು ತಿಳಿಸಿತ್ತು.

ಡೀಫಾಲ್ಟ್ ಸರ್ಚ್ ಎಂಜಿನ್ ಗೂಗಲ್!

ಸಾಫ್ಟ್‌ವೇರ್ ದೈತ್ಯ ಯಾವುದೇ ಪ್ರಮುಖ ಪ್ರತಿಸ್ಪರ್ಧಿ ಸರ್ಚ್‌ ಇಂಜೀನ್ ಕಂಪನಿಗಳನ್ನು ಮಾರುಕಟ್ಟೆ ಪ್ರವೇಶಿಸಲು ಬಯಸುವುದಿಲ್ಲ ಎಂದು ಮೊಕದ್ದಮೆ ಸೂಚಿಸುತ್ತದೆ. ಆಂಡ್ರಾಯ್ಡ್ ಫೋನ್‌ಗಳು ಈಗಾಗಲೇ ಗೂಗಲ್‌ನೊಂದಿಗೆ ರವಾನೆಯಾಗುತ್ತವೆ ಮತ್ತು ಆ್ಯಪಲ್ ಸಾಧನಗಳು ಸಹ ಅದನ್ನೇ ನೀಡುತ್ತವೆ. ಈ ಮೂಲಕ ಗೂಗಲ್ ತನ್ನ ಸರ್ಚ್‌ ಇಂಜೀನ್‌ ಟ್ರಾಫಿಕ್‌ನ ದೊಡ್ಡ ಪಾಲನ್ನು ಪಡೆಯುತ್ತದೆ. ಹೀಗಾಗಿ, ಕಂಪನಿಯು ಹೆಚ್ಚಿನ ಜಾಹೀರಾತುಗಳನ್ನು ಪಡೆಯುತ್ತದೆ ಮತ್ತು ವಿಶಾಲ ಪ್ರೇಕ್ಷಕರ ಮುಂದೆ ಜಾಹೀರಾತುಗಳನ್ನು ಇರಿಸುತ್ತದೆ.

ಇದನ್ನೂ ಓದಿPlay Store Billing Policy: ಗೂಗಲ್‌ ವಿರುದ್ಧದ ವಿಚಾರಣೆ 60 ದಿನದಲ್ಲಿ ಪೂರ್ಣ: ಸಿಸಿಐ

ಅಲ್ಲದೇ ಬಹಳಷ್ಟು ಜನರು ಸಾಮಾನ್ಯವಾಗಿ ತಮ್ಮ ಸಾಧನದಲ್ಲಿ ಪಡೆಯುವ ಡೀಫಾಲ್ಟ್ ಸರ್ಚ್ ಎಂಜಿನ್ ಅನ್ನು ಬದಲಾಯಿಸುವುದಿಲ್ಲ ಎಂದು ಗೂಗಲ್‌ಗೆ ತಿಳಿದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಗೂಗಲ್‌  ದೊಡ್ಡ ಮೊತ್ತದ ಹಣವನ್ನು ವ್ಯಯಿಸುತ್ತಿರುವುದರ ಹಿಂದಿನ ಕಾರಣ ಏನೆಂಬುದನ್ನು ಇದು ವಿವರಿಸುತ್ತದೆ.‌

ಲಾಭ ಹಂಚಿಕೆ ಒಪ್ಪಂದ!

ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಈ ಮೊಕದ್ದಮೆ ಹೂಡಲಾಗಿದ್ದಯ "ಗೂಗಲ್ ಈ ವ್ಯವಹಾರದೊಂದಿಗೆ ಪಡೆಯುವ ಲಾಭವನ್ನು ಆ್ಯಪಲ್ ಜತೆ ಹಂಚಿಕೊಳ್ಳಲು ಸಹ ಒಪ್ಪಿಕೊಂಡಿದೆ ಮತ್ತು ಆಪಲ್ ಪ್ರತಿಯಾಗಿ iPhone ಮತ್ತು iPad ನಂತಹ ಸಾಧನಗಳಲ್ಲಿ ಗೂಗಲ್ ಆದ್ಯತೆಯ ನೀಡುತ್ತದೆ" ಎಂದು ಅದು ಆರೋಪಿಸಿದೆ. ಈ ಎರಡು ಟೆಕ್ ಕಂಪನಿಗಳ ನಡುವಿನ ಈ ಒಪ್ಪಂದವು ಸಣ್ಣ ಸ್ಪರ್ಧಿಗಳನ್ನು ನಿಗ್ರಹಿಸುವ ಮತ್ತು ನಿಜವಾದ ಮತ್ತು ಸಂಭಾವ್ಯ ಪ್ರತಿಸ್ಪರ್ಧಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಗಳನ್ನು ಸಹ ಒಳಗೊಂಡಿದೆ ಎಂದು ಅದು ಆರೋಪಿಸಿದೆ. ಗೂಗಲ್ಅನ್ನು ಪ್ರತ್ಯೇಕ ಮತ್ತು ಸ್ವತಂತ್ರ ಕಂಪನಿಗಳಾಗಿ ವಿಭಜಿಸಲು ಮತ್ತು ಆಪಲ್ ಅನ್ನು ಪ್ರತ್ಯೇಕ ಮತ್ತು ಸ್ವತಂತ್ರ ಕಂಪನಿಗಳಾಗಿ ವಿಭಜಿಸಲು ಸಹ ದೂರು ಒತ್ತಾಯಿಸುತ್ತದೆ. 

ಇದನ್ನೂ ಓದಿ: Make in India: ವಾರ್ಷಿಕ $50 ಬಿಲಿಯನ್ ಮೌಲ್ಯದ ಆ್ಯಪಲ್‌ ಸರಕು ಉತ್ಪಾದನೆಗೆ ಕೇಂದ್ರ ಪ್ರಸ್ತಾಪ!‌

ಯುಕೆ ಸ್ಪರ್ಧೆ ಮತ್ತು ಮಾರುಕಟ್ಟೆಗಳ ಪ್ರಾಧಿಕಾರವು (Competition and Markets Authority ) ಸರ್ಚ್ ಇಂಜಿನ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಇತರ ಸ್ಪರ್ಧಿಗಳಿಗೆ "ಪ್ರವೇಶ ಮತ್ತು ವಿಸ್ತರಣೆಗೆ ಗಮನಾರ್ಹ ತಡೆ" ಎಂದು ಹೇಳಿದೆ ಎಂದು ಮ್ಯಾಕ್ ರೂಮರ್ಸ್ ವರದಿ ಮಾಡಿದೆ. ಇದನ್ನು ಅನುಸರಿಸಿ, ಸಫಾರಿಯಲ್ಲಿ ಇತರ ಸರ್ಚ್ ಇಂಜಿನ್‌ಗಳನ್ನು ಆಯ್ಕೆ ಮಾಡಲು ಬಳಕೆದಾರರು ಸ್ವತಂತ್ರರು ಎಂದು Apple ಮತ್ತು Google ವಾದಿಸುವ ಸಾಧ್ಯತೆಗಳಿವೆ. ಇವುಗಳಲ್ಲಿ Microsoft ನ Bing, Yahoo, DuckDuckGo ಮತ್ತು ಹೆಚ್ಚಿನವು ಸೇರಿವೆ.

Latest Videos
Follow Us:
Download App:
  • android
  • ios