Asianet Suvarna News Asianet Suvarna News

ಕಚೇರಿಗೆ ಬರುವ ಉದ್ಯೋಗಿಗಳಿಗೆ ವಾರಕ್ಕೊಮ್ಮೆ ಕೋವಿಡ್ 19 ಟೆಸ್ಟ್‌ ಕಡ್ಡಾಯ: ಗೂಗಲ್

ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಮಾತ್ರ ಗೂಗಲ್ ಉದ್ಯೋಗಿಗಳಿಗೆ ಕಚೇರಿ ಆವರಣವನ್ನು ಪ್ರವೇಶಿಸಲು ಅನುಮತಿಸಲಾಗುವುದು ಎಂದು ಕಂಪನಿಯ ಇತ್ತೀಚಿನ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.

Google makes weekly Covid 19 tests mandatory for employees entering offices mnj
Author
Bengaluru, First Published Jan 16, 2022, 10:53 AM IST

Tech Desk: ಯುಎಸ್ ಕಚೇರಿಗಳಿಗೆ ಪ್ರವೇಶಿಸುವ ಉದ್ಯೋಗಿಗಳಿಗೆ ವಾರಕೊಮ್ಮೆ ಕೋವಿಡ್-19 ಪರೀಕ್ಷೆಗಳನ್ನು ಗೂಗಲ್ (Google) ಕಡ್ಡಾಯಗೊಳಿಸುತ್ತಿದೆ. ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್‌ (Covid 19 Negative) ಆಗಿದ್ದರೆ ಮಾತ್ರ ಗೂಗಲ್ ಉದ್ಯೋಗಿಗಳಿಗೆ ಕಚೇರಿ ಆವರಣವನ್ನು ಪ್ರವೇಶಿಸಲು ಅನುಮತಿಸಲಾಗುತ್ತದೆ. ಪರೀಕ್ಷೆಯ ನೆಗೆಟಿವ್ ಜೊತೆಗೆ, ಉದ್ಯೋಗಿಗಳು ಕಚೇರಿಗಳಲ್ಲಿ ಸರ್ಜಿಕಲ್ ದರ್ಜೆಯ ಮಾಸ್ಕ್‌ಗಳನ್ನು (Mask) ಧರಿಸಬೇಕಾಗುತ್ತದೆ. ಓಮಿಕ್ರಾನ್ ಪ್ರಕರಣಗಳ (Omicron Variant) ಉಲ್ಬಣದ ಮಧ್ಯೆ ಗೂಗಲ್ ಈ ಹಿಂದೆ ಉದ್ಯೋಗಿಗಳು ಕಚೇರಿಗೆ ಹಿಂದಿರುಗುವ ಗಡುವನ್ನು ಮುಂದೂಡಿತ್ತು. ಕೋವಿಡ್ -19 ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದ ಉದ್ಯೋಗಿಗಳ ವಿರುದ್ಧ ಕಂಪನಿಯು ಕಠಿಣ ಕ್ರಮಗಳನ್ನು ಘೋಷಿಸಿದೆ.

ಕೋವಿಡ್ ಹರಡುವುದನ್ನು ತಡೆಯಲು ತಾತ್ಕಾಲಿಕ ಆರೋಗ್ಯ ಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದು ಗೂಗಲ್ ಹೇಳಿದೆ. "ಈ ಅಪಾಯದ ಅವಧಿಯಲ್ಲಿ COVID-19 ಮತ್ತಷ್ಟು ಹರಡುವುದನ್ನು ತಡೆಯಲು , ನಾವು ಯುಎಸ್‌ನಲ್ಲಿ ನಮ್ಮ ಕಚೇರಿಗಳನ್ನು ಪ್ರವೇಶಿಸುವವರ ಸುರಕ್ಷತೆಗಾಗಿ  ತಾತ್ಕಾಲಿಕ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುತ್ತಿದ್ದೇವೆ" ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ. ಕಂಪನಿಯು ತನ್ನ ಉದ್ಯೋಗಿಗಳು, ಅವರ ಅವಲಂಬಿತರು ಮತ್ತು ಮನೆಯ ಸದಸ್ಯರಿಗೆ ಉಚಿತ ಮನೆಯಲ್ಲಿ ಪರೀಕ್ಷೆ ಮತ್ತು ವೈಯಕ್ತಿಕ ಪರೀಕ್ಷೆಯ ಆಯ್ಕೆಗಳನ್ನು ಒದಗಿಸುತ್ತದೆ ಎಂದು ಬಹಿರಂಗಪಡಿಸಿದೆ.‌

ಇದನ್ನೂ ಓದಿ: Covid 19 Booster ಡೋಸ್‌ ಪಡೆಯದೆ ಕಚೇರಿಗೆ ಮರಳಬೇಡಿ: ಉದ್ಯೋಗಿಗಳಿಗೆ Facebook ತಾಕೀತು!

ಲಸಿಕೆ ಪಡೆಯದ ಉದ್ಯೋಗಿಗಳ ವಿರುದ್ಧ ಗೂಗಲ್ ಕಠಿಣ ಕ್ರಮ: ಇದಕ್ಕೂ ಮೊದಲು, ಕೋವಿಡ್ -19 ವಿರುದ್ಧ ಲಸಿಕೆ ಹಾಕದ ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಗೂಗಲ್ ಘೋಷಿಸಿತ್ತು. ಜನವರಿ 18 ರೊಳಗೆ ಲಸಿಕೆ ನಿಯಮಗಳನ್ನು ಅನುಸರಿಸಲು ವಿಫಲರಾದ ಉದ್ಯೋಗಿಗಳನ್ನು 30 ದಿನಗಳವರೆಗೆ "paid administrative leave" ಯಲ್ಲಿ ಇರಿಸಲಾಗುವುದು ಎಂದು ಸರ್ಚ್ ದೈತ್ಯ ಉದ್ಯೋಗಿಗಳಿಗೆ ಮೆಮೊವನ್ನು ಬಿಡುಗಡೆ ಮಾಡಿದೆ ಎಂದು  ವರದಿಗಳು ತಿಳಿಸಿದ್ದವು. 

ಇದಾದ  ನಂತರವು ಲಸಿಕೆ ಪಡೆಯಲು ವಿಫಲರಾಗುವವರನ್ನು  ಆರು ತಿಂಗಳವರೆಗೆ "unpaid personal leave" ಯಲ್ಲಿ ಇರಿಸಲಾಗುತ್ತದೆ. ಈ ಅವಧಿ ಮುಗಿದ ಬಳಿಕ ಅವರು ಲಸಿಕೆಯನ್ನು ಪಡೆಯದಿದ್ದರೆ, ಅವರನ್ನು ಕಂಪನಿಯನ್ನು ತೊರೆಯಲು ಕೇಳಲಾಗುತ್ತದೆ ಎಂದು ಮೂಲಗಳು ತಿಳಿಸಿದ್ದವು.

ಇದನ್ನೂ ಓದಿ: Covid 19 Third Wave: ಒಮಿಕ್ರೋನ್‌ ಭೀತಿ: ಆಕ್ಸಿಮೀಟರ್‌, ಟೆಸ್ಟಿಂಗ್ ಕಿಟ್‌, ಮಾಸ್ಕ್‌ಗಳಿಗೆ ಮತ್ತೆ ಭಾರೀ ಬೇಡಿಕೆ!

"ನಾವು ಮೊದಲೇ ಹೇಳಿದಂತೆ, ನಮ್ಮ ವ್ಯಾಕ್ಸಿನೇಷನ್ ಅವಶ್ಯಕತೆಗಳು ನಮ್ಮ ಉದ್ಯೋಗಿಗಳನ್ನು ಸುರಕ್ಷಿತವಾಗಿರಿಸಲು ಮತ್ತು ನಮ್ಮ ಸೇವೆಗಳನ್ನು ಚಾಲನೆಯಲ್ಲಿಡಲು ಇದು ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಲಸಿಕೆ ಹಾಕಿಸಿಕೊಳ್ಳುವ ನಮ್ಮ ಉದ್ಯೋಗಿಗಳಿಗೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ನಮ್ಮ ಲಸಿಕೆ ನೀತಿಯ ಹಿಂದೆ ದೃಢವಾಗಿ ನಿಲ್ಲುತ್ತೇವೆ, ”ಎಂದು ಕಂಪನಿಯ ವಕ್ತಾರ ಲೋರಾ ಲೀ ಎರಿಕ್ಸನ್ The Vergeಗೆ ತಿಳಿಸಿದ್ದರು.

ಡೋಸ್‌ ಪಡೆಯದೆ ಕಚೇರಿಗೆ ಮರಳಬೇಡಿ: ಫೇಸ್‌ಬುಕ್‌ನ ಮಾತೃ ಕಂಪನಿಯಾದ ಮೆಟಾ (Meta) ತನ್ನ ಉದ್ಯೋಗಿಗಳು ಕಚೇರಿಗೆ ಹಿಂದಿರುಗುವ ಯೋಜನೆಗಳಲ್ಲಿ ಕೊಂಚ ಬದಲಾವಣೆ ಮಾಡಿದೆ. ಫೇಸ್‌ಬುಕ್ ಉದ್ಯೋಗಿಗಳನ್ನು (Facebook Employees) ಕಚೇರಿಗೆ ಕರೆಸಿಕೊಳ್ಳುವ ತನ್ನ ಯೋಜನೆಗಳನ್ನು ಮೂಂದುವುಡುದರ ಜತಗೆ ಮೆಟಾ ಒಡೆತನದ ಕಂಪನಿ ಕೋವಿಡ್ ಬೂಸ್ಟರ್ ಡೋಸ್‌ಅನ್ನು (Covid 19 Booster)‌ ಕಡ್ಡಾಯಗೊಳಿಸಿದೆ.  ಫೇಸ್‌ಬುಕ್ ಈ ಹಿಂದೆ ಜನವರಿ 31 ರೊಳಗೆ ಕಚೇರಿಯನ್ನು ಪುನಃ ತೆರೆಯಲು ಯೋಜಿಸಿತ್ತು. ಅದರೆ  ಒಮಿಕ್ರೋನ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ದಿನಾಂಕವನ್ನು ಈಗ ಮಾರ್ಚ್ 28 ಕ್ಕೆ ಮುಂದೂಡಿದೆ.

Follow Us:
Download App:
  • android
  • ios