Asianet Suvarna News Asianet Suvarna News

Foxconn Factory Reopen: ತಮಿಳುನಾಡಿನ ಐಫೋನ್‌ ಕಾರ್ಖಾನೆ ಜನವರಿ 12ರಿಂದ ಪುನಾರಂಭ!

ಜನವರಿ 12 ರ ಬುಧವಾರದಂದು ಫಾಕ್ಸ್‌ಕಾನ್ ಕಾರ್ಖಾನೆ ಮತ್ತೆ ತೆರೆಯಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿಧಾನಸಭೆಗೆ ತಿಳಿಸಿದರು ಎಂದು ಶ್ರೀಪೆರಂಬದೂರ್ ಶಾಸಕ ಕೆ ಸೆಲ್ವಪೆರುಂತಗೈ ತಿಳಿಸಿದ್ದಾರೆ

Foxconn factory making iPhones in Tamil Nadu to reopen from January 12 mnj
Author
Bengaluru, First Published Jan 10, 2022, 8:30 PM IST

Tech Desk: ಆ್ಯಪಲ್ ಪೂರೈಕೆದಾರ ಫಾಕ್ಸ್‌ಕಾನ್ (Foxconn Factory) ದಕ್ಷಿಣ ಭಾರತದಲ್ಲಿ ಬುಧವಾರ, ಜನವರಿ 12 ರಂದು ಐಫೋನ್ ಉತ್ಪಾದನಾ ಸೌಲಭ್ಯವನ್ನು ಪುನಃ ತೆರೆಯಲಿದೆ ಎಂದು ಸರ್ಕಾರಿ ಅಧಿಕಾರಿಗಳು ಮತ್ತು ಶ್ರೀಪೆರಂಬದೂರ್  ಶಾಸಕರು ತಿಳಿಸಿದ್ದಾರೆ. ಡಿಸೆಂಬರ್‌ನಲ್ಲಿ ತಮಿಳುನಾಡಿನ್ ಚೆನ್ನೈ ಸಮೀಪವಿರುವ ಶ್ರೀಪೆರಂಬದೂರ್ ಪಟ್ಟಣದಲ್ಲಿ ಐಫೋನ್‌ಗಳನ್ನು (iPhone) ತಯಾರಿಸುವ ಫಾಕ್ಸ್‌ಕಾನ್ ಕಾರ್ಖಾನೆಯಲ್ಲಿ (Foxconn Plant) ಕೆಲಸ ಮಾಡುವ ಮತ್ತು ವಸತಿ ನಿಲಯವೊಂದರಲ್ಲಿ ವಾಸಿಸುವ 250 ಕ್ಕೂ ಹೆಚ್ಚು ಮಹಿಳೆಯರು ಕಲುಷಿತ  ಆಹಾರ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬೆನ್ನಲ್ಲೇ  ಸಿಬ್ಬಂದಿಗಳು ಹಾಗೂ ಕುಟುಂಬದವರು ಪ್ರತಿಭಟನೆ ಕೂಡ ನಡೆಸಿದ್ದರು. ಫಾಕ್ಸ್‌ಕಾನ್ ಕಾರ್ಖಾನೆಯಲ್ಲಿ ದೈತ್ಯ ಘಟಕದಲ್ಲಿ ಉತ್ಪಾದನೆಯನ್ನು ಡಿಸೆಂಬರ್ 18 ರಂದು ಸ್ಥಗಿತಗೊಳಿಸಲಾಗಿತ್ತು.

"ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ( M K Stalin) ಶುಕ್ರವಾರ ತಡರಾತ್ರಿ ಸ್ಥಾವರವನ್ನು ಮತ್ತೆ ತೆರೆಯುವುದಾಗಿ ವಿಧಾನಸಭೆಗೆ ತಿಳಿಸಿದರು" ಎಂದು ಶ್ರೀಪೆರಂಬದೂರ್  ಶಾಸಕರಾದ ಕೆ ಸೆಲ್ವಪೆರುಂತಗೈ (K. Selvaperunthagai) ತಿಳಿಸಿದ್ದಾರೆ, ಸ್ಥಾವರವು ಜನವರಿ 12 ರಂದು 100 ಕ್ಕಿಂತ ಹೆಚ್ಚು ಜನರೊಂದಿಗೆ ಉತ್ಪಾದನೆಯನ್ನು ಪುನರಾರಂಭಿಸುತ್ತದೆ ಮತ್ತು ಪೂರ್ಣ ಉತ್ಪಾದನೆಯನ್ನು ಪುನರಾರಂಭಿಸಲು ಎರಡು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. 

ಕಠಿಣ ಮೇಲ್ವಿಚಾರಣಾ ವ್ಯವಸ್ಥೆ!

ವಸತಿ ನಿಲಯಗಳ ಗುಣಮಟ್ಟ ಮತ್ತು ಊಟದ ಸೌಲಭ್ಯಗಳ  ಸಮಸ್ಯೆ ಪರಿಹರಿಸಲು ವಿವಿಧ ಕೈಗಾರಿಕೆಗಳ ಹತ್ತಾರು ಸಾವಿರ ಕಾರ್ಮಿಕರಿಗೆ ವಸತಿ ಸೌಕರ್ಯವಿರುವ ಹಾಸ್ಟೆಲ್ ಸೌಲಭ್ಯವನ್ನು ರಾಜ್ಯ ಸರ್ಕಾರ ನಿರ್ಮಿಸಲಿದೆ ಎಂದು ಸೆಲ್ವಪೆರುಂತಗೈ ತಿಳಿಸಿದ್ದಾರೆ.

ಇದನ್ನೂ ಓದಿ: Apple Market Value: 3 ಲಕ್ಷ ಕೋಟಿ ಮೌಲ್ಯದ ಗಡಿ ಮುಟ್ಟಿದ ವಿಶ್ವದ ಮೊದಲ ಕಂಪನಿ!

"ಪ್ರತಿ ನಿಲಯ ಮತ್ತು ಊಟದ ಪ್ರದೇಶದಲ್ಲಿ ನಮ್ಮ ಮಾನದಂಡಗಳನ್ನು ಪೂರೈಸಲಾಗುತ್ತಿದೆ ಎಂದು ನಮಗೆ ಖಚಿತವಾದ ತಕ್ಷಣ ಕೆಲಸಗಾರರು ಕ್ರಮೇಣ ಮರಳಲು ಪ್ರಾರಂಭಿಸುತ್ತಾರೆ" ಎಂದು ಆಪಲ್ ಹೇಳಿಕೆಯಲ್ಲಿ ತಿಳಿಸಿದೆ. "ಇದು ಮತ್ತೆ ಸಂಭವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಹಲವಾರು  ಕ್ರಮಗಳನ್ನು ಜಾರಿಗೆ ತಂದಿದ್ದೇವೆ ಮತ್ತು ಕಾರ್ಮಿಕರು ತಾವು ಎದುರಿಸುವ ಯಾವುದೇ ಸಮಸ್ಯೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಕಠಿಣವಾದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ." ಎಂದು ಫಾಕ್ಸ್‌ಕಾನ್ ಅನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಮೇಲ್ವಿಚಾರಕರನ್ನು ಕಳುಹಿಸಿದ್ದ ಆ್ಯಪಲ್!

ಕಳೆದ ತಿಂಗಳು, ಕಾರ್ಖಾನೆಯ ಹಲವಾರು ಕಾರ್ಮಿಕರು ಆಹಾರ ವಿಷಪೂರಿತವಾದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಳಿಕ ಐಫೋನ್-ತಯಾರಕ ಆ್ಯಪಲ್‌ (Apple) ತಾನು ಫಾಕ್ಸ್‌ಕಾನ್‌ನ ಶ್ರೀಪೆರಂಬದೂರ್ ಸೌಲಭ್ಯವನ್ನು ಪರೀಕ್ಷೆಗೆ ಒಳಪಡಿಸಿದೆ ಮತ್ತು ಫಾಕ್ಸ್‌ಕಾನ್ ಶ್ರೀಪೆರಂಬದೂರ್‌ನಲ್ಲಿ ಆಹಾರ ಸುರಕ್ಷತೆ ಮತ್ತು ವಸತಿ ಪರಿಸ್ಥಿತಿಗಳ ಹೆಚ್ಚುವರಿ ವಿವರವಾದ ಮೌಲ್ಯಮಾಪನಗಳನ್ನು ಕೈಗೊಳ್ಳಲು ಸ್ವತಂತ್ರ ಲೆಕ್ಕಪರಿಶೋಧಕರನ್ನು (Independent Auditors) ಕಳುಹಿಸಿದೆ ಎಂದು ತಿಳಿಸಿತ್ತು.

ಇದನ್ನೂ ಓದಿ: Apple CEO Earnings 2021ರಲ್ಲಿ ಊಹೆಗೂ ನಿಲುಕದ ಆದಾಯ ಗಳಿಸಿದ ಆ್ಯಪಲ್ ಸಿಇಒ ಟಿಮ್ ಕುಕ್!

ಶ್ರೀಪೆರಂಬದೂರ್ ಕಾರ್ಖಾನೆ ಐಫೋನ್ 12 ಮಾದರಿಗಳನ್ನು ಸಿದ್ಧಪಡಿಸುತ್ತದೆ. ಆಪಲ್ ಭಾರತದ ಫಾಕ್ಸ್‌ಕಾನ್ ಕಾರ್ಖಾನೆಯಲ್ಲಿ ಐಫೋನ್ 11 ಮತ್ತು ಬೆಂಗಳೂರಿನ ವಿಸ್ಟ್ರಾನ್ ಸ್ಥಾವರದಲ್ಲಿ ಎರಡನೇ ತಲೆಮಾರಿನ iPhone SE ಅನ್ನು ಸಹ ಉತ್ಪಾದಿಸುತ್ತದೆ. ವರದಿಗಳ ಪ್ರಕಾರ, ಆಪಲ್ ಭಾರತದಲ್ಲಿ ಮಾರಾಟ ಮಾಡುವ ಸ್ಮಾರ್ಟ್‌ಫೋನ್‌ಗಳಲ್ಲಿ 70 ಪ್ರತಿಶತವನ್ನು ಇಲ್ಲಿಯೇ ತಯಾರಿಸುತ್ತದೆ, ಇದರಲ್ಲಿ iPhone XR, iPhone 11, iPhone 12, iPhone XR ಮತ್ತು iPhone SE ಸೇರಿದಂತೆ ಹೆಚ್ಚು ಮಾರಾಟವಾಗುವ ಮಾದರಿಗಳು ಸೇರಿವೆ. 

Follow Us:
Download App:
  • android
  • ios