Asianet Suvarna News Asianet Suvarna News

Apple Market Value: 3 ಲಕ್ಷ ಕೋಟಿ ಮೌಲ್ಯದ ಗಡಿ ಮುಟ್ಟಿದ ವಿಶ್ವದ ಮೊದಲ ಕಂಪನಿ!

2022ರ ವರ್ಷದ ಮೊದಲ ಟ್ರೇಡಿಂಗ್ ದಿನದಂದೇ ಸಾಧನೆ
3 ಲಕ್ಷ ಕೋಟಿ ಮೌಲ್ಯದ ಗಡಿ ಮುಟ್ಟಿ ಬಳಿಕ ಕೆಳಗಿಳಿದ ಕಂಪನಿ
3 ಲಕ್ಷ ಕೋಟಿ ಮೌಲ್ಯದ ಗಡಿ ಮುಟ್ಟಿದ ವಿಶ್ವದ ಮೊಟ್ಟ ಮೊದಲ ಕಂಪನಿ

Apple Inc on Monday became the first company to hit USD 3 trillion stock market value san
Author
Bengaluru, First Published Jan 4, 2022, 12:29 PM IST

ನವದೆಹಲಿ (ಜ.4): ಟೆಕ್ ಜಗತ್ತಿನ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ಆ್ಯಪಲ್‌ ಇಂಕ್ (Apple Inc ) ಉದ್ಯಮ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ. ವಿಶ್ವದಲ್ಲಿಯೇ 3 ಲಕ್ಷ ಕೋಟಿ ಷೇರು ಮಾರುಕಟ್ಟೆ ಮೌಲ್ಯದ ( $3 trillion stock market value)ಗಡಿ ಮುಟ್ಟಿದ ಮೊಟ್ಟಮೊದಲ ಕಂಪನಿ ಎನ್ನುವ ಖ್ಯಾತಿಗೆ ಸಿಲಿಕಾನ್ ವ್ಯಾಲಿಯ ಆ್ಯಪಲ್‌ ಇಂಕ್ ಪಾತ್ರವಾಗಿದೆ. 2022ರ ವರ್ಷದ ಮೊದಲ ಟ್ರೇಡಿಂಗ್ ದಿನದಂದೇ ಆ್ಯಪಲ್‌ ಈ ಮೈಲಿಗಲ್ಲು ಸಾಧಿಸಿರುವುದು ವಿಶೇಷವಾಗಿದೆ. ಇಂಟ್ರಾ ಡೇ ಟ್ರೇಡಿಂಗ್ ನಲ್ಲಿ ಕಂಪನಿಯ ಷೇರುಗಳು ದಾಖಲೆಯ ಗರಿಷ್ಠ 182.88 ಯುಎಸ್ ಡಾಲರ್ ಗೆ ಏರಿದ್ದರಿಂದ ಕಂಪನಿಯ ಒಟ್ಟಾರೆ ಮೌಲ್ಯ ಕೆಲ ಸಮಯದವರೆಗೆ 3 ಟ್ರಿಲಿಯನ್ ಯುಎಸ್ ಡಾಲರ್ ಗಡಿ ದಾಟಿತ್ತು. ಆದರೆ, ದಿನದ ಅಂತ್ಯಕ್ಕೆ ಷೇರುಗಳಲ್ಲಿ ಸಣ್ಣ ಕುಸಿತ ಕಾಣುವ ಮೂಲಕ ಈ ದಾಖಲೆಯನ್ನು ಉಳಿಸಿಕೊಳ್ಳಲು ವಿಫಲವಾಯಿತು.

ಆ್ಯಪಲ್‌ ಕಂಪನಿಯು ಭವಿಷ್ಯದಲ್ಲಿ ಸ್ವಯಂಚಾಲಿತ ಕಾರುಗಳು (automated cars) ಮತ್ತು ವರ್ಚುವಲ್ ರಿಯಾಲಿಟಿಯಂಥ (virtual reality) ಹೊಸ ಮಾರುಕಟ್ಟೆಗೆ ಪ್ರವೇಶಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ಭವಿಷ್ಯದಲ್ಲಿ ಐಫೋನ್ (iPhone) ತಯಾರಕರು ಇನ್ನಷ್ಟು ಹೆಚ್ಚು ಮಾರಾಟವಾಗುವ ಉತ್ಪನ್ನಗಳನ್ನು ಕಂಡುಹಿಡಿಯಲಿದ್ದಾರೆ ಎನ್ನುವ ನಂಬಿಕೆಯ ಮೇಲೆ ಹೂಡಿಕೆದಾರರು ಕಂಪನಿಯ ಷೇರುಗಳ ಮೇಲೆ ಹಣ ಹೂಡಿಕೆ ಮಾಡುತ್ತಿದ್ದಾರೆ.

2022 ರಲ್ಲಿ ವಹಿವಾಟಿನ ಮೊದಲ ದಿನದಂದು, ಸಿಲಿಕಾನ್ ವ್ಯಾಲಿ ಕಂಪನಿಯ ಷೇರುಗಳು $ 182.88 ರ ಇಂಟ್ರಾಡೇ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದವು. ಇದರಿಂದಾಗಿ  ಆ್ಯಪಲ್‌ ಕಂಪನಿಯ ಮಾರುಕಟ್ಟೆಯ ಮೌಲ್ಯವು ಕೆಲ ಹೊತ್ತಿನವರೆಗೆ $ 3 ಟ್ರಿಲಿಯನ್‌ಗಿಂತ ಹೆಚ್ಚಾಗಿತ್ತು. ಆದರೆ, ದಿನದ ಕೊನೆಯಲ್ಲಿ ಒಟ್ಟು ಶೇ.2.5 ಏರಿಕೆಯೊಂದಿಗೆ ಪ್ರತಿ ಷೇರುಗಳು $182.01 ನಲ್ಲಿ ಕೊನೆಗೊಂಡಿದ್ದರಿಂದ ಆ್ಯಪಲ್‌ ಕಂಪನಿ ಮೌಲ್ಯವು $2.99 ಟ್ರಿಲಿಯನ್‌ ಗೆ ಇಳಿದಿತ್ತು.

ಹೊಸ ಅನ್ವೇಷಣೆಗಳೊಂದಿಗೆ ಈಗಾಗಲೇ ಆ್ಯಪಲ್‌ ಕಂಪನಿಯ ಅತ್ಯದ್ಬುತ ಉತ್ಪನ್ನಗಳಾಗಿರುವ ಐಫೋನ್, ಮ್ಯಾಕ್ ಬುಕ್ (MacBook), ಆ್ಯಪಲ್‌ ಟಿವಿ (Apple TV) ಹಾಗೂ ಆ್ಯಪಲ್‌ ಮ್ಯೂಸಿಕ್ ( Apple Music)ನಂಥ ಸೇವೆಗಳಿಗಾಗಿ ಗ್ರಾಹಕರು ಇನ್ನಷ್ಟು ಹೆಚ್ಚಿನ ಹಣವನ್ನು ಸುರಿಯುತ್ತಾರೆ. ಈ ಉತ್ಪನ್ನಗಳಿಗೆ ಭವಿಷ್ಯದಲ್ಲಿ ಮತ್ತಷ್ಟು ಬೇಡಿಕೆಗಳು ಇರಲಿದೆ ಎನ್ನುವ ವಿಶ್ವಾಸ ಹೂಡಿಕೆದಾರರಲ್ಲಿ ಬಂದಿರುವ ಕಾರಣ ವಿಶ್ವದ ಅತ್ತಮೂಲ್ಯ ಕಂಪನಿಯು ಈ ವಿಶೇಷ ಮೈಲಿಗಲ್ಲನ್ನು ಮುಟ್ಟಿದೆ. ಆ್ಯಪಲ್‌ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಮಾಜಿ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಸ್ಟೀವ್ ಜಾಬ್ಸ್ 2007ರ ಜನವರಿಯಲ್ಲಿ ಮೊಟ್ಟಮೊದಲ ಐಫೋನ್ ಅನ್ನು ಬಿಡುಗಡೆ ಮಾಡಿದ ಬಳಿಕ ಈವರೆಗೂ ಆ್ಯಪಲ್‌ ಕಂಪನಿಯ ಷೇರುಗಳು ನಾಸ್ಡಾಕ್ ನಲ್ಲಿ(nasdaq) ಶೇ. 5800 ಪಟ್ಟು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ನಾಸ್ಡಾಕ್ ನ ಎನ್ & ಪಿ 500 ಕಂಪನಿಗಳು ಶೇ. 230ರಷ್ಟು ಮಾತ್ರವೇ ಏರಿಕೆ ಕಂಡಿದೆ.

Foxconn Tamil Nadu: ಚೆನ್ನೈನ ಐಫೋನ್ ಕಾರ್ಖಾನೆ ಮೌಲ್ಯಮಾಪನಕ್ಕೆ ಅಧಿಕಾರಿ ನೇಮಿಸಿದ ಆ್ಯಪಲ್‌!
2 ಲಕ್ಷ ಕೋಟಿ ಮಾರುಕಟ್ಟೆಯ ಕ್ಲಬ್ ಅನ್ನು ಮೈಕ್ರೋಸ್ಟಾಫ್ಟ್ (Microsoft Corp) ಕಂಪನಿಯ ಜೊತೆ ಸೇರಿ ಹೊಕ್ಕಿದ್ದ ಆ್ಯಪಲ್‌, 3 ಲಕ್ಷ ಕೋಟಿಯ ಕ್ಲಬ್ ಗೆ ಏಕಾಂಗಿಯಾಗಿ ಒಳಹೊಕ್ಕಿದೆ. ಪ್ರಸ್ತುತ ಮೈಕ್ರೋಸಾಫ್ಟ್ ಕಂಪನಿಯ ಮಾರುಟ್ಟೆ ಮೌಲ್ಯ 2.5 ಲಕ್ಷ ಕೋಟಿ ಆಗಿದ್ದರೆ, ಗೂಗಲ್ ಕಂಪನಿಯ ಮಾತೃಸಂಸ್ಥೆ ಆಲ್ಫಾಬೆಟ್ ಇಂಕ್ (Alphabet Inc), ಅಮೇಜಾನ್ ಡಾಟ್ ಕಾಮ್ (Amazon.com) ಹಾಗೂ ಟೆಸ್ಲಾ (Tesla Inc)ಕಂಪನಿಯ ಮೌಲ್ಯಗಳು 1 ಲಕ್ಷ ಕೋಟಿಗಿಂತ ಸ್ವಲ್ಪ ಮೇಲಿದೆ. ಇನ್ನು ಸೌದಿ ಅರೇಬಿಯನ್ ಆಯಿಲ್ ಕಂಪನಿಯ (Saudi Arabian Oil Co ) ಮೌಲ್ಯ 1.9 ಲಕ್ಷ ಕೋಟಿ ಆಗಿದೆ.

iPhone Without Sim Slot: ಆ್ಯಪಲ್‌ ಹೊಸ ಐಫೋನ್‌ ಮಾದರಿಯಲ್ಲಿ ಸಿಮ್‌ ಕಾರ್ಡ್‌ ಸ್ಲಾಟೇ ಇರೋಲ್ವಂತೆ!
ವಿಶ್ವದ ಅತೀದೊಡ್ಡ ಸ್ಮಾರ್ಟ್ ಫೋನ್ ಮಾರುಕಟ್ಟೆಯಾಗಿರುವ ಚೀನಾದಲ್ಲಿ ಸತತ 2ನೇ ತಿಂಗಳು ಆ್ಯಪಲ್‌ ಆ ದೇಶದ ಅತಿದೊಡ್ಡ ಸ್ಮಾರ್ಟ್ ಫೋನ್ ಕಂಪನಿ ಎನಿಸಿದೆ. ವಿವೋ ಹಾಗೂ ಶಿಯೋಮಿ ಕಂಪನಿಗಳನ್ನು ಆ್ಯಪಲ್‌ ಈ ಹಾದಿಯಲ್ಲಿ ಹಿಂದೆ ಹಾಕಿದೆ. ಇನ್ನು ಜಗತ್ತಿನ ಅತ್ಯಂತ ಮೌಲ್ಯದ ಆಟೋಮೇಕರ್ ಆಗಿರುವ ಟೆಸ್ಲಾ ಕೂಡ, ಎಲೆಕ್ಟ್ರಿಕ್ ಕಾರುಗಳ ಮೇಲೆ ಹೆಚ್ಚಿನ ಗಮನ ನೀಡಿದ್ದು, ಇದಕ್ಕೆ ಪೈಪೋಟಿಯಾಗಿ ಆ್ಯಪಲ್‌ ಮುಂದಿನ ಕೆಲ ವರ್ಷಗಳಲ್ಲಿ ತನ್ನದೇ ಆದ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಸಾಧ್ಯತೆ ಹೆಚ್ಚಾಗಿದೆ.

Follow Us:
Download App:
  • android
  • ios