ನಿಮ್ಮ ಮೊಬೈಲ್ ಫೋನ್ ಅಸಲಿಯೋ, ನಕಲಿಯೋ ಈಗ್ಲೇ ಪರಿಶೀಲಿಸಿ: ಇಲ್ಲಿದೆ ಪರಿಶೀಲನೆ ಮಾಹಿತಿ
ನೀವು ಖರೀದಿಸಿದ ಮೊಬೈಲ್ ಅಸಲಿಯೋ, ನಕಲಿಯೋ, ಕಳ್ಳತನ ಮಾಡಿದ್ದಾ ಅಥವಾ ದುರಸ್ತಿ ಮಾಡಿರುವುದೇ ಎಂಬ ಬಗ್ಗೆ ಮಾಹಿತಿ ಪಡೆಯಲು ಕರ್ನಾಟಕ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರು (ಸೆ.05): ರಾಜ್ಯದಲ್ಲಿ ಮೊಬೈಲ್ ಕಳ್ಳತನ ಮಾಡಿ ಮಾರಾಟ ಮಾಡುವ ಕಳ್ಳರ ಜಾಲ ಸಕ್ರಿಯವಾಗಿದೆ. ಹೀಗೆ, ಕಳ್ಳತನ ಮಾಡಿದ ಮೊಬೈಲ್ ಅನ್ನು ದುರಸ್ತಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ, ನೀವು ಖರೀದಿಸಿದ ಮೊಬೈಲ್ ಅಸಲಿಯೋ, ನಕಲಿಯೋ, ಕಳ್ಳತನ ಮಾಡಿದ್ದಾ ಅಥವಾ ದುರಸ್ತಿ ಮಾಡಿ ನೀಡಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಪಡೆಯುವಂತೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಇನ್ನು ಪೊಲೀಸ್ ಇಲಾಖೆಯಿಂದ ಮೊಬೈಲ್ ಪರಿಶೀಲನೆ ಮಾಡುವ ಮಾಹಿತಿಯನ್ನು ಕೂಡ ನೀಡಿದೆ. ನೀವು ಉಪಯೋಗಿಸುತ್ತಿರುವ ಮೊಬೈಲ್ ಫೋನ್ ಅಸಲಿ ಅಥವಾ ನಕಲಿ ಫೊನ್ ಆಗಿದೆಯೇ, ಇಲ್ಲವೇ ಕಳವು ಮಾಡಿರುವ ಅಥವಾ ದುರಸ್ತಿ ಮಾಡಿರುವ ಫೋನ್ ಆಗಿದೆಯೇ ಎಂಬುದನ್ನು ತಿಳಿಯಲು Know your mobile (KYM) ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ಮಾನ್ಯತೆ ಪರಿಶೀಲನೆ ಮಾಡಬಹುದು.
Bengaluru: ಸಾವಿನ ಮನೆಯಲ್ಲಿ ಅಳುತ್ತಲೇ ಬಂಗಾರವನ್ನು ಕದ್ದೊಯ್ದ ಕಳ್ಳರು
ಮತ್ತೊಂದು ವಿಧದಲ್ಲಿ ಕೇಂದ್ರ ಸಲಕರಣೆ ಗುರುತಿನ ನೋಂದಣಿ (Central Equipment Identity Register-CEIR) ಇಲಾಖೆಯ ceir.gov.in ವೆಬ್‌ಸೈಟ್‌ಗೆ ಲಾಗಿನ್ ಆಗಿ, ನಿಮ್ಮ ಮೊಬೈಲ್ ನಂಬರ್ ಹಾಗೂ ಒಟಿಪಿಯನ್ನು ನಮೂದಿಸಿ ಮೊಬೈಲ್‌ಬಗ್ಗೆ ಮಾಹಿತಿ ಪಡೆಯಬಹದು. ಅಥವಾ ಕೆವೈಎಂ ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು ನಿಮ್ಮ ಮೊಬೈಲ್‌ನಲ್ಲಿರುವ 15 ಡಿಜಿಟ್‌ನ ಐಎಂಇಐ ಸಂಖ್ಯೆಯನ್ನು ನಮೂದಿಸಿ 14422ಗೆ ಮೆಸೇಜ್ ಮಾಡಿದರೂ ನಿಮ್ಮ ಮೊಬೈಲ್ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.
ಮೊಬೈಲ್ ಕಳ್ಳರ ಜಾಲ ಬೇಧಿಸಲು ಸುಲಭ ಮಾರ್ಗ: ಕರ್ನಾಟಕ ಪೊಲೀಸ್ ಇಲಾಖೆಯ ಪೊಲೀಸ್ ಮಹಾನಿರ್ದೇಶಕರ ಅಧಿಕೃತ ಸಾಮಾಜಿಕ ಜಾಲತಾಣದ ಎಕ್ಸ್ (ಹಳೆಯ ಟ್ವಿಟರ್) ಖಾತೆಯ ಮೂಲಕ ಮೊಬೈಲ್ ಅಸಲಿಯೋ, ನಕಲಿಯೋ ಎಂಬ ಬಗ್ಗೆ ಪತ್ತೆ ಮಾಡುವ ಮಾಹಿತಿಯನ್ನು ತಿಳಿಸಿಕೊಡಲಾಗಿದೆ. ಎಲ್ಲರೂ ಈ ಸರಳ ಮಾರ್ಗವನ್ನು ಅನುಸರಿಸಿಕೊಂಡು ಮೊಬೈಲ್ ಅನ್ನು ಪರಿಶೀಲನೆ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ಖರೀದಿ ಮಾಡಿದ ಮೊಬೈಲ್ ನಕಲಿ ಅಥವಾ ದರಸ್ತಿ ಮಾಡಿದ್ದು, ಅಥವಾ ಕಳ್ಳತನ ಮಾಡಿದ್ದು ಎಂಬ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ನೀವು ಎಲ್ಲಿಂದ ಖರೀದಿ ಮಾಡಿದ್ದೀರಿ ಎಂಬ ಮಾಹಿತಿ ಪೊಲೀಸರಿಗೆ ತಿಳಿಸಿದರೆ ಮೊಬೈಲ್ ಕಳ್ಳರ ಜಾಲವನ್ನು ಸುಲಭವಾಗಿ ಬೇಧಿಸಬಹುದು.
ಕರ್ನಾಟಕದ ಪ್ರಸಿದ್ಧ ಬಾಕ್ಸರ್ ಮಲ್ಪೆಯ ವಿರಾಜ್ ಮೆಂಡನ್ ಆತ್ಮಹತ್ಯೆ