Bengaluru: ಸಾವಿನ ಮನೆಯಲ್ಲಿ ಅಳುತ್ತಲೇ ಬಂಗಾರವನ್ನು ಕದ್ದೊಯ್ದ ಕಳ್ಳರು
ಬೆಂಗಳೂರಿನಲ್ಲಿ ಸಾವಿನ ಮನೆಗೆ ಅಳುತ್ತಲೇ ದುಃಖಕ್ಕೆ ಹೆಗಲು ಕೊಡುವ ನಾಟಕ ಮಾಡಿಕೊಂಡು ಬಂದ ಕಳ್ಳರು ಮನೆಯಲ್ಲಿದ್ದ ಚಿನ್ನಾಭವರಣವನ್ನು ಕದ್ದುಕೊಂಡು ಹೋಗಿದ್ದಾರೆ.
ಬೆಂಗಳೂರು (ಸೆ.05): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪತ್ನಿಯ ಸಾವಿನ ಹಿನ್ನೆಲೆಯಲ್ಲಿ ಮನೆಯ ಮುಂದೆ ಸ್ಥಳವಿಲ್ಲದ ಹಿನ್ನೆಲೆಯಲ್ಲಿ ಸ್ವಲ್ಪ ದೂರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಮನೆಯಲ್ಲಿ ದೀಪವನ್ನು ಹಚ್ಚಿ ಬಾಗಿಲು ಮುಚ್ಚದೇ ಬಿಡಲಾಗಿತ್ತು. ಇನ್ನು ಸಾವಿನ ಮನೆಗೆ ದುಃಖ ಹಂಚಿಕೊಳ್ಳಲು ಬಂದ ಕಳ್ಳರು, ಮನೆಯ ಕಬೋರ್ಡ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಬಂಗಾರ, ಒಡೆವೆಗಳು ಹಾಗೂ ಲಕ್ಷ್ಮಿ ಕೂರಿಸಲು ಇಡುತ್ತಿದ್ದ ಬೆಳ್ಳಿಯ ಲಕ್ಷ್ಮಿ ಮುಖವಾಡವನ್ನೂ ಕಳ್ಳರು ಕದ್ದೊಯ್ದಿದ್ದಾರೆ.
ಬೆಂಗಳೂರಿನಲ್ಲಿ ಸಾವಿನ ಮನೆಯಲ್ಲೂ ಖತರ್ನಾಕ್ ಕಳ್ಳರು ಅಳುತ್ತಲೇ ಕೈಚಳಕ ತೋರಿಸಿದ್ದಾರೆ. ಪತ್ನಿ ಸಾವಿನ ವೇಳೆ ವಿಧಿ ವಿಧಾನಗಳ ನಡೆಸೋ ವೇಳೆ ಮನೆಯಲ್ಲಿ ಕಳ್ಳರ ಕೈಚಳಕ ತೋರಿಸಿದ್ದಾರೆ. ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾಮಾಂಜಿ ಎಂಬುವರ ಮನೆಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪೊಲೀಸ್ ಠಾಣೆಗ ದೂರು ನೀಡಿದ್ದಾರೆ. ಆ.30ನೇ ತಾರೀಖು ರಾಮಾಂಜಿ ಎಂಬುವರ ಪತ್ನಿ ಭಾಗ್ಯಮ್ಮ ತೀರಿಕೊಂಡಿದ್ದರು. ಮನೆ ಮುಂದೆ ಜಾಗ ಇಲ್ಲದ ಕಾರಣ ಸ್ವಲ್ಪ ದೂರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಕರ್ನಾಟಕದ ಪ್ರಸಿದ್ಧ ಬಾಕ್ಸರ್ ಮಲ್ಪೆಯ ವಿರಾಜ್ ಮೆಂಡನ್ ಆತ್ಮಹತ್ಯೆ
ಸಾವಿನ ಮನೆ ಹಿನ್ನೆಲೆ ಮನೆಯಲ್ಲಿ ದೀಪ ಹಚ್ಚಿ ಬಾಗಿಲು ಅರ್ಧ ಓಪನ್ ಮಾಡಿಟ್ಟಿದ್ದರು. ಮನೆಯ ಕಬೋರ್ಡ್‌ನಲ್ಲಿ ಚಿನ್ನದ ವಸ್ತುಗಳನ್ನಿಡಲಾಗಿತ್ತು. ಮಧ್ಯಾಹ್ನ 1.30ರ ಸುಮಾರಿಗೆ ಶವಕ್ಕೆ ಸ್ನಾನ ಮಾಡಿಸುವ ಮುನ್ನ ಕಬೋರ್ಡ್‌ನಲ್ಲಿದ್ದ ಪತ್ನಿಯ ಸೀರೆಯನ್ನು ರಾಮಾಂಜಿನಪ್ಪ ಅವರು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಕೋಬೋರ್ಡ್‌ನಲ್ಲಿ ಚಿನ್ನಾಭರಣ ಎಲ್ಲವೂ ಇತ್ತು. ಆದ್ರೆ ಸಂಜೆ ಅಂತ್ಯಸಂಸ್ಕಾರ ಮುಗಿಸಿಕೊಂಡು ಬಂದಾಗ ಚಿನ್ನಾಭರಣ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಸಂಭವನೀಯ ವೇಳಪಟ್ಟಿ ಬಿಡುಗಡೆ: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ
ಕಬೋರ್ಡ್‌ನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣದ ಜೊತೆಗೆ, ವರಲಕ್ಷ್ಮೀ ಹಬ್ಬಕ್ಕೆ ಇಟ್ಟಿದ್ದ ಬೆಳ್ಳಿ ಮುಖವಾಡ ಸಹ ಕದ್ದುಕೊಂಡು ಹೋಗಿದ್ದಾರೆ. ಸದ್ಯ ಘಟನೆ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ರಾಮಾಂಜಿನಪ್ಪ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಏನೇ ಹೇಳಿ ಸಾವಿನ ಮನೆಯಲ್ಲಿ ದುಃಖದ ಮಡುವಿನಲ್ಲಿ ಇದ್ದವರಿಗೆ ಸಾಂತ್ವನ ಹೇಳುವ ಹೆಗಲುಗಳ ಅಗತ್ಯವಿರುತ್ತದೆ. ಆದರೆ, ನೋವಿಗೆ ಹೆಗಲಾಗುವ ಬದಲು ಮನೆಯಲ್ಲಿದ್ದ ಆಭರಣ ಕದ್ದೊಯ್ದು ಮತ್ತಷ್ಟು ನೋವು ಕೊಟ್ಟಿದ್ದಾರೆ.