Asianet Suvarna News Asianet Suvarna News

GIF ಸೃಷ್ಟಿಕರ್ತ ಸ್ಟೀಫನ್‌ ವಿಲ್‌ಹೈಟ್‌ ಕೋವಿಡ್‌ನಿಂದ ನಿಧನ

ಜಿಐಎಫ್‌ ಇಮೇಜ್‌ ಫಾರ್ಮೆಟ್‌ನ್ನು ಸೃಷ್ಟಿಸಿದ ಕಂಪ್ಯೂಟರ್‌ ವಿಜ್ಞಾನಿ ಸ್ಟೀಫನ್‌ ವಿಲ್‌ಹೈಟ್‌ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ

Father of GIF Stephen Wilhite passes away due to Covid 19 mnj
Author
Bengaluru, First Published Mar 25, 2022, 10:32 AM IST | Last Updated Mar 25, 2022, 10:54 AM IST

ನವದೆಹಲಿ (ಮಾ. 25): ಲಕ್ಷಾಂತರ ಜನರು ತಮ್ಮ ದೈನಂದಿನ ಚಾಟ್‌ಗಳಲ್ಲಿ ಬಳಸುತ್ತಿರುವ ಜಿಐಎಫ್‌ (ಗ್ರಾಫಿಕ್ಸ್‌ ಇಂಟರ್‌ಚೇಂಜ್‌ ಫಾರ್ಮೆಟ್‌ - GIF) ಇಮೇಜ್‌ ಫಾರ್ಮೆಟ್‌ನ್ನು ಸೃಷ್ಟಿಸಿದ ಕಂಪ್ಯೂಟರ್‌ ವಿಜ್ಞಾನಿ ಸ್ಟೀಫನ್‌ ವಿಲ್‌ಹೈಟ್‌(74) (Stephen Wilhite) ಕೋವಿಡ್‌ನಿಂದಾಗಿ ಕಳೆದ ವಾರ ಕೊನೆಯುಸಿರೆಳೆದಿದ್ದಾರೆ. ಮಾ.14ರಂದು ಸ್ಟೀಫನ್‌ ಸಾವಿಗೀಡಾದರು ಎಂದು ಅವರ ಪತ್ನಿ ಖಚಿತಪಡಿಸಿದ್ದಾರೆ. ಜಿಫ್‌ ಅನ್ನು ಈ ದಿನಗಳಲ್ಲಿ ಫೇಸ್ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. 

ಉತ್ತಮ ಗುಣಮಟ್ಟದ ಈ ಗ್ರಾಫಿಕ್‌ ಇಮೇಜ್‌ ಫಾರ್ಮೆಟ್‌ನ್ನು ಸ್ಟೀಫನ್‌ 1987ರಲ್ಲಿ ಸೃಷ್ಟಿಮಾಡಿದರು. ಸ್ಟೀಫನ್ 1980 ರ ದಶಕದಲ್ಲಿ CompuServe ಎಂಬ ಟೆಕ್ ಕಂಪನಿಯಲ್ಲಿ ಕೆಲಸ ಮಾಡುವಾಗ ಜಿಐಎಫ್ ಅನ್ನು ಅಭಿವೃದ್ಧಿಪಡಿಸಿದರು ಮತ್ತು ತಯಾರಿಸಿದರು. ಆದರೆ 2010ರ ನಂತರ ಇದು ಇಂಟರ್‌ನೆಟ್‌ ಕ್ಷೇತ್ರದಲ್ಲಿ ಅದ್ಭುತವಾದ ಪ್ರತಿಕ್ರಿಯೆಯನ್ನು ಪಡೆದುಕೊಂಡು ಜನಪ್ರಿಯವಾಯಿತು. 

ಇದನ್ನೂ ಓದಿ: ಯುವಕರ ಮನದಲ್ಲಿ ದ್ವೇಷ ತುಂಬುತ್ತಿದೆ: Facebook, ಸೋಶಿಯಲ್ ಮೀಡಿಯಾ ಬಗ್ಗೆ ಸಂಸತ್ತಿನಲ್ಲಿ ಸೋನಿಯಾ ಗುಡುಗು!

ಈ ಅನ್ವೇಷಣೆಗಾಗಿ ಇವರಿಗೆ 2013ರಲ್ಲಿ ವೆಬ್ಬೀ ಪ್ರಶಸ್ತಿಯನ್ನು ಸಹ ನೀಡಲಾಯಿತು. ಜಿಫ್ ಎಂದರೆ ಗ್ರಾಫಿಕ್ಸ್ ಇಂಟರ್ಚೇಂಜ್ ಫಾರ್ಮ್ಯಾಟ್, ಇದು ಲೂಪ್‌ ಬ್ಯಾಕ್‌ನಲ್ಲಿ  ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಕಳುಹಿಸಲು ಬಳಕೆದಾರರಿಗೆ ಅನುಮತಿಸುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲಲ್ಲಿ ಕ್ವೀಕ್‌ ರೆಸ್ಪಾನ್ಸ್‌ಗಾಗಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. 

ಅವರ ಪ್ರೀತಿಯ ನೆನಪಿನಲ್ಲಿ, ಅಭಿಮಾನಿಗಳು ಅವರಿಗೆ ಹೃತ್ಪೂರ್ವಕ  ಜಿಫ್‌ಗಳೊಂದಿಗೆ ಗೌರವ ಸಲ್ಲಿಸಿದ್ದಾರೆ. "RIP ಸ್ಟೀಫನ್ ವಿಲ್ಹೈಟ್, GIF ನ ಸೃಷ್ಟಿಕರ್ತ. ಇದು 1987 ರಲ್ಲಿ ರಚಿಸಲಾದ ಮೊದಲ GIF" ಎಂದು ಬಳಕೆದಾರೊಬ್ಬರು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಾದ್ಯಂತ ಜಿಫ್‌ ಮೂಲಕ ಸ್ಟೀಫನ್‌ ವಿಲ್‌ಹೈಟ್‌ ನೆಟ್ಟಿಗರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

"GIF ಫೈಲ್ ಫಾರ್ಮ್ಯಾಟ್‌ನ ಸೃಷ್ಟಿಕರ್ತ ಸ್ಟೀಫನ್ ವಿಲ್ಹೈಟ್ ಅವರ ನಿಧನದ ಬಗ್ಗೆ GIPHY ತಂಡವು ದುಃಖಿತವಾಗಿದೆ. GIPHY ಅನ್ನು GIF ಗಾಗಿ ಪ್ರಾಮಾಣಿಕ ಪ್ರೀತಿಯ ಮೇಲೆ ನಿರ್ಮಿಸಲಾಗಿದೆ - ಮತ್ತು  ವಿಲ್ಹೈಟ್ ಅವರ ಸೃಜನಶೀಲತೆ ಮತ್ತು ದೂರದೃಷ್ಟಿಗೆ ನಾವು ಋಣಿಯಾಗಿದ್ದೇವೆ" ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.  ಟೈಮ್ಸ್‌ನೊಂದಿಗಿನ ಸಂದರ್ಶನವೊಂದರಲ್ಲಿ, ಸ್ಟೀಫನ್, ಡ್ಯಾನ್ಸಿಂಗ್ ಬೇಬಿ ಮೀಮ್ ತಮ್ಮ ಮೆಚ್ಚಿನ GIFಗಳಲ್ಲಿ ಒಂದು ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios