ಬೆಳಗ್ಗೆ ತಿಂಡಿ ಮಾಡೋಕೆ ಬೇಕು ರೋಬೋ ಎಂದ ನೆಟ್ಟಿಗ!
ವಿಶ್ವದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿರುವ ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್ ತಮ್ಮ ಎಕ್ಸ್ ಪುಟದಲ್ಲಿ ಹುಮನಾಯ್ಡ್ ರೋಬೋಟ್ (ಮಾನವ ಮಾದರಿ ರೋಬೋಟ್) ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಅವರಿಗೆ ಟ್ವೀಟ್ ಮಾಡಿರುವ ಅಭಿಮಾನಿ ನನ್ನ ಅಗತ್ಯ ಇದಲ್ಲ ಎಂದು ಹೇಳಿದ್ದಾರೆ.
ನವದೆಹಲಿ (ಸೆ.25): ಹೊಸ ಮಾದರಿಯ ಆವಿಷ್ಕಾರ ಹಾಗೂ ಅನ್ವೇಷಣೆಗಳಿಂದಲೇ ಜನಪ್ರಿಯವಾಗಿರುವ ಟೆಸ್ಲಾ, ಭಾನುವಾರ ತನ್ನ ಬಹುನಿರೀಕ್ಷಿತ ಹುಮನಾಯ್ಡ್ ರೋಬೋಟ್ ಆಪ್ಟಿಮಸ್‌ನ ವಿಡಿಯೋವನ್ನು ಹಂಚಿಕೊಂಡಿದೆ. ತನಗೆ ನೀಡಿರುವ ವಿವಿಧ ಟಾಸ್ಕ್‌ಗಳನ್ನು ಆಪ್ಟಿಮಸ್ ಎಷ್ಟು ಅಚ್ಚುಕಟ್ಟಾಗಿ ಮಾಡುತ್ತಿದೆ ಎನ್ನುವ ವಿವರಗಳೊಂದಿಗೆ ಕಲರ್ ಬಾಕ್ಸ್‌ಗಳನ್ನು ತನ್ನದೇ ಯೋಚನೆಯೊಂದಿಗೆ ವಿಂಗಡೆಣೆ ಮಾಡುವುದದು ಮಾತ್ರವಲ್ಲ, ತನ್ನ ಯೋಚನಾಶಕ್ತಿಯಲ್ಲಿಯೇ ಯಾವೆಲ್ಲಾ ಕೆಲಸ ಮಾಡುತ್ತದೆ ಎನ್ನುವುದನ್ನು ಟೆಸ್ಲಾ ಹಂಚಿಕೊಂಡಿದೆ. ವಿಡಿಯೋದ ಆರಂಭದಲ್ಲಿ ರೋಬೋಟ್ ಎಷ್ಟು ಸುಲಭವಾಗಿ ಹಾಗೂ ಮಾನವನಷ್ಟೇ ವೇಗವಾಗಿ ವಸ್ತುಗಳು ಹೇಗೆ ವಿಂಗಡಣೆ ಮಾಡುತ್ತದೆ ಎನ್ನುವುದನ್ನು ತೋರಿಸಿದೆ. ಅದರೊಂದಿಗೆ ತನ್ನ ಕೆಲಸಕ್ಕೆ ಏನಾದರೂ ಅಡ್ಡಿಯಾದಲ್ಲಿ ಅದನ್ನೂ ಕೂಡ ಹೇಗೆ ಯಶಸ್ವಿಯಾಗಿ ನಿಭಾಯಿಸುತ್ತದೆ ಎನ್ನುವ ವಿವರಗಳನ್ನು ತಿಳಿಸುವ ವಿಡಿಯೋ ಹಂಚಿಕೊಂಡಿದೆ. ಅದರೊಂದಿಗೆ ಈ ರೋಬೋಟ್‌ನ ಯೋಗವನ್ನೂ ಕೂಡ ಮಾಡಿದೆ. ತಮ್ಮ ಒಂದು ಕಾಲನ್ನು ಮಡಚಿ, ಇನ್ನೊಂದು ಕಾಲಿನ ಗಂಟಿನವರೆಗೆ ಕಾಲನ್ನು ಎತ್ತಿ ನಿಂತು, ನಮಸ್ತೆ ಕೂಡ ಮಾಡಿದೆ. ಇದು ರೋಬೋಟ್‌ನ ಬ್ಯಾಲೆನ್ಸ್ ಹಾಗೂ ಫ್ಲೆಕ್ಸಿಬಿಲಿಟಿಯ ಸಾಮರ್ಥ್ಯ ಎಂದು ಟೆಸ್ಲಾ ತಿಳಿಸಿದೆ. ವೀಡಿಯೊದ ಪ್ರಕಾರ, ಆಪ್ಟಿಮಸ್ ಈಗ ತನ್ನ ಕೈ ಮತ್ತು ಕಾಲುಗಳನ್ನು ಸ್ವಯಂ ಮಾಪನಾಂಕ ನಿರ್ಣಯಿಸುವ ಸಾಮರ್ಥ್ಯವನ್ನು ಹೊಂದಿದೆ. ದೃಷ್ಟಿ ಮತ್ತು ಜಂಟಿ ಸ್ಥಾನ ಎನ್‌ಕೋಡರ್‌ಗಳನ್ನು ಬಳಸಿಕೊಂಡು ತನ್ನ ಅಂಗಗಳನ್ನು ನಿಖರವಾಗಿ ಪತ್ತೆ ಮಾಡುತ್ತದೆ.
ಇನ್ನು ಟೆಸ್ಲಾದ ಮಾಲೀಕ ಎಲೋನ್ ಮಸ್ಕ್ ಆಪ್ಟಿಮಸ್‌ನ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಸ್ಕ್ ಅವರ ಅಭಿಮಾನಿ ಮುರಾಟ್ ಬೆಶ್ತೋವ್, 'ಯೋಗ ಹಾಗೂ ಜಿಮ್ನಾಸ್ಟಿಕ್ ಮಾಡುವ ಈ ರೋಬೋಟ್ ಆಕರ್ಷಕವಾಗಿದೆ ಎಂದು ನನಗೆ ಅರ್ಥವಾಗಿದೆ. ಆದರೆ, ನನಗೆ ಈ ರೋಬೋಟ್ ಬೇಕಾಗಿಲ್ಲ. ಬೆಳಗ್ಗೆ 6 ಗಂಟೆಗೆ ನನ್ನ ಅಡುಗೆಮನೆಗೆ ಹೋಗಬಹುದಾದ ರೋಬೋಟ್ ಇದ್ದರೆ ಅನ್ನು ನನಗೆ ತೋರಿಸಿ. ಸರಿಯಾದ ಪ್ಯಾನ್ ಅನ್ನು ಹುಡುಕಿ, ಅದನ್ನು ಒಲೆಯ ಮೇಲೆ ಇರಿಸಿ, ಬೆಂಕಿಯನ್ನು ಹೊಂದಿಸಿ ಮತ್ತು ಸರಿಯಾದ ಅಡುಗೆ ಎಣ್ಣೆಯನ್ನು ಆರಿಸಿ, ಪ್ಯಾನ್ ಬಿಸಿಯಾಗಿದೆಯೇ ಇಲ್ಲವೇ ಎನ್ನುವುದನ್ನು ನೋಡಿಕೊಂಡು ಎಣ್ಣೆಯನ್ನು ಹಾಕುವ ರೋಬೋಟ್ ಇದೆಯೇ ಎನ್ನುವುದನ್ನು ತೋರಿಸಿ. ಆ ಬಳಿಕ ಫ್ರಿಜ್‌ಗೆ ಹೋಗಿ, ಮೊಟ್ಟೆಗಳನ್ನು ತೆಗೆದುಕೊಳ್ಳುವ ಅವುಗಳನ್ನು ಒಂದು ಬಟ್ಟಲಿನಲ್ಲಿ ಒಡೆದು, ಅದನ್ನು ಮಿಶ್ರ ಮಾಡುವ ರೋಬೋಟ್ ಅದಾಗಿರಬೇಕು ಎಂದು ಬರೆದಿದ್ದಾನೆ
ಮತ್ಆತೆ ಮುಂದುವರಿದು, 'ಬಳಿಕ ಪ್ಯಾನ್‌ಗೆ ಈ ಮೊಟ್ಟೆಯ ಮಿಶ್ರಣವನ್ನು ಸುರಿಯಬೇಕು. ಬೆಂದಿದೆಯೇ ಎನ್ನುವುದನ್ನು ನೋಡಿಕೊಂಡು ಪ್ಯಾನ್‌ನಲ್ಲಿದ್ದ ಮೊಟ್ಟೆಯನ್ನು ಪಲ್ಟಿ ಮಾಡಬೇಕು. ಚೀಸ್ ಹಾಗೂ ಬೇಬಿ ಕೇಲ್‌ಅನ್ನು ಅದಕ್ಕೆ ಉತ್ತಮವಾಗಿ ಸೇರಿಸಬೇಕು. ಹೀಗೆ ಸಿದ್ಧವಾದ ಆಮ್ಲೆಟ್‌ಅನ್ನು ಮಡಚಬೇಕು. ಅದಾದ ನಂತರ ಸರಿಯಾಗಿ ಅರ್ಧಕ್ಕೆ ಕಟ್ ಮಾಡಿ ಅದನ್ನು ಪ್ಲೇಟ್‌ಗೆ ಹಾಕಬೇಕು. ಬಳಿಕ ಇದೇ ಪ್ರಕ್ರಿಯೆಯನ್ನು ಅದು ಪುನರಾವರ್ತಿಸಿ ಊಟದ ಜೊತೆಯಲ್ಲಿ ಬ್ಯಾಗಲ್‌ಗಳನ್ನು ಟೋಸ್ಟ್ ಮಾಡಬೇಕು. ಜೊತೆಗೆ, ಇದು 6:30 ಕ್ಕೆ ಸರಿಯಾಗಿ ತಾಜಾ ಕಾಫಿಯನ್ನು ರೆಡಿ ಮಾಡಬೇಕ ಮತ್ತು ಬ್ರೂ ಮಾಡಬೇಕು. ಅಂಥಾ ರೋಬೋಟ್ ಇದಾಗಿದ್ದರೆ ಮಾತ್ರವೇ ಅದನ್ನೇ ನಾನು ಯಶಸ್ಸು ಎಂದು ಕರೆಯುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಎಲಾನ್ ಮಸ್ಕ್‌ನ ಜಗತ್ತಿನಲ್ಲಿ ಸರಳತೆಯ ಸುಧಾಮೂರ್ತಿ, ಮಹಿಳಾ ಉದ್ಯಮಿಯ ಲಿಂಕ್ಡ್ ಇನ್ ಪೋಸ್ಟ್ ವೈರಲ್
ಅಧಿಕೃತ ಟೆಸ್ಲಾ ಖಾತೆಯಿಂದ ಆಪ್ಟಿಮಸ್ ಖಾತೆಯು ವೀಡಿಯೊವನ್ನು ಹಂಚಿಕೊಂಡಿದೆ ಮತ್ತು ಅದನ್ನು "ಆಪ್ಟಿಮಸ್ ಈಗ ಸ್ವಾಯತ್ತವಾಗಿ ವಸ್ತುಗಳನ್ನು ವಿಂಗಡಣೆ ಮಾಡುತ್ತದೆ" ಎಂದು ಶೀರ್ಷಿಕೆ ನೀಡಿದೆ. ಇದರ ನರಮಂಡಲವು ಸಂಪೂರ್ಣವಾಗಿ ಅಂತ್ಯದಿಂದ ಕೊನೆಯವರೆಗೆ ತರಬೇತಿ ಪಡೆದಿದೆ: ವೀಡಿಯೊ ಇನ್, ನಿಯಂತ್ರಣಗಳು ಔಟ್. ಆಪ್ಟಿಮಸ್ ಅನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ನಮ್ಮೊಂದಿಗೆ ಸೇರಿಕೊಳ್ಳಿ (ಮತ್ತು ಅದರ ಯೋಗ ದಿನಚರಿಯನ್ನು ಸುಧಾರಿಸಿ)'' ಎಂದು ಬರೆದುಕೊಂಡಿದೆ.ಟೆಸ್ಲಾಬಾಟ್ ಈಗ ಟೆಸ್ಲಾ ಕಾರ್‌ಗಳಂತೆಯೇ ಅದೇ ಎಂಡ್-ಟು-ಎಂಡ್ ನ್ಯೂರಲ್ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವೀಡಿಯೊ ಬಹಿರಂಗಪಡಿಸುತ್ತದೆ, ಇದು ವೀಡಿಯೊ ಇನ್‌ಪುಟ್ ಅನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ನಿಯಂತ್ರಣ ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ.
ಎಲ್ಲಪ್ಪ ನಿಮ್ ಹೆಂಡ್ರು... ಎಲಾನ್ ಮಸ್ಕ್ ಕೇಳಿದ ಟರ್ಕಿ ಅಧ್ಯಕ್ಷ: ವೀಡಿಯೋ ವೈರಲ್