Asianet Suvarna News Asianet Suvarna News

ಎಲ್ಲಪ್ಪ ನಿಮ್ ಹೆಂಡ್ರು... ಎಲಾನ್ ಮಸ್ಕ್ ಕೇಳಿದ ಟರ್ಕಿ ಅಧ್ಯಕ್ಷ: ವೀಡಿಯೋ ವೈರಲ್

ಎಲಾನ್ ಮಸ್ಕ್‌ ಟರ್ಕಿಯ ಅಧ್ಯಕ್ಷರೊಂದಿಗೆ ಆಯೋಜಿಸಿದ್ದ ಸಭೆಗೆ ತಮ್ಮ ಪುಟ್ಟ ಕಂದನನ್ನು ಕರೆದುಕೊಂಡು ಬಂದು ಸುದ್ದಿಯಾಗಿದ್ದಾರೆ. ಈ ವೇಳೆ ಎಲಾನ್‌ ಮಸ್ಕ್‌ಗೆ ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ನಿಮ್ಮ ಹೆಂಡ್ತಿ ಎಲ್ಲಿ ಎಂದು ಕೇಳಿದ್ದು, ಎಲಾನ್ ಮಸ್ಕ್ ಹಾಗೂ ಟರ್ಕಿ ಅಧ್ಯಕ್ಷರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Where is Your Wife Turkey President Tayyip Erdogan Asks Billionaire Elon Musk in a Meeting video goes viral akb
Author
First Published Sep 20, 2023, 12:21 PM IST

ಸ್ಪೇಸ್‌ ಎಕ್ಸ್‌ ಮಾಲೀಕ ಹಾಗೂ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಸಂಸಾರಿಕ ಜೀವನ ಅಷ್ಟೊಂದು ಸರಿಯಾಗಿಲ್ಲ, ಎರಡು ಮೂರು ಮದುವೆಯೂ ಆಗಿರುವ ಎಲಾನ್ ಮಸ್ಕ್‌ ಇದರ ಜೊತೆಗೆ ಮದುವೆಯಾಚೆಗೆ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪವೂ ಇದೆ. ಈ ನಡುವೆ ಎಲಾನ್ ಮಸ್ಕ್‌ ಟರ್ಕಿಯ ಅಧ್ಯಕ್ಷರೊಂದಿಗೆ ಆಯೋಜಿಸಿದ್ದ ಸಭೆಗೆ ತಮ್ಮ ಪುಟ್ಟ ಕಂದನನ್ನು ಕರೆದುಕೊಂಡು ಬಂದು ಸುದ್ದಿಯಾಗಿದ್ದಾರೆ. ಈ ವೇಳೆ ಎಲಾನ್‌ ಮಸ್ಕ್‌ಗೆ ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ನಿಮ್ಮ ಹೆಂಡ್ತಿ ಎಲ್ಲಿ ಎಂದು ಕೇಳಿದ್ದು, ಎಲಾನ್ ಮಸ್ಕ್ ಹಾಗೂ ಟರ್ಕಿ ಅಧ್ಯಕ್ಷರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಎಲಾನ್ ಮಸ್ಕ್ ನ್ಯೂಯಾರ್ಕ್‌ನಲ್ಲಿರುವ ಟರ್ಕಿಶ್‌ ಹೌಸ್‌ನಲ್ಲಿ ನಡೆದ ಸಭೆಗೆ ತಮ್ಮ ಪುಟ್ಟ ಕಂದನೊಂದಿಗೆ ಆಗಮಿಸಿದ್ದಾರೆ. ಇದು ಕೆಲವು ಹಾಸ್ಯಮಯ ಘಟನೆಗೆ ಕಾರಣವಾಯಿತು. ಸಭೆಯ ವೇಳೆ ಮಸ್ಕ್ ಅವರು ತಮ್ಮ ಪುಟ್ಟ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದರು.  ಈ ವೇಳೆ ಟರ್ಕಿ ಅಧ್ಯಕ್ಷ ಕುತೂಹಲ ತಡೆಯಲಾಗದೇ ನಿಮ್ ಹೆಂಡ್ತಿ ಎಲ್ಲಪ್ಪ ಅಂತ ಮಸ್ಕ್‌ನ ಕೇಳಿದ್ದಾರೆ. ಈ ವೇಳೆ ಮಸ್ಕ್‌ ಆಕೆ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ (San Francisco) ಇದ್ದಾಳೆ. ನಾವಿಬ್ಬರು ಜೊತೆಗಿಲ್ಲ ದೂರಾಗಿದ್ದೇವೆ. ಹೀಗಾಗಿ ನಾನು ಮಗುವಿನ ಕಾಳಜಿ ಮಾಡುತ್ತಿದ್ದೇನೆ ಎಂದು ಮಸ್ಕ್ ಹೇಳಿದ್ದಾರೆ. 

ಹುಡುಗರೇ ಈ ಹಕ್ಕಿ ಮುಂದೆ ನೀವ್ಯಾವ ಲೆಕ್ಕ: ಮನದರಸಿಯ ಒಲಿಸಿಕೊಳ್ಳಲು ಪಡ್ತಿರುವ ಪಾಡು ನೋಡಿ : ವೀಡಿಯೋ

ವೀಡಿಯೋದಲ್ಲಿ ಎಲಾನ್ ಮಸ್ಕ್ ತಮ್ಮ ಕೊನೆಯ ಪುತ್ರ ಎಕ್ಸ್‌ನನ್ನು ಎತ್ತಿಕೊಂಡಿದ್ದು, ಈ ವೇಳೆ ಟರ್ಕಿ ಅಧ್ಯಕ್ಷ (Turkish President Tayyip Erdogan) ಮಗು ಎಕ್ಸ್‌ಗೆ ಫುಟ್ಬಾಲ್‌ ನೀಡುತ್ತಾ ಮಾತನಾಡಲು ಪ್ರಯತ್ನಿಸುತ್ತಾರೆ. ಆದರೆ ಎಕ್ಸ್ ಪುಟ್ಬಾಲ್‌ನ್ನು ತಿರಸ್ಕರಿಸಿ ಅಪ್ಪನ ಹೆಗಲಲ್ಲಿ ಬೆನ್ನು ತಿರುವಿ ನಿಲ್ಲುತ್ತಾನೆ. ಈ ವೇಳೆ ಈ ಸಂಭಾಷಣೆ ನಡೆದಿದೆ. 

ಎಲಾನ್ ಮಸ್ಕ್‌ ಕೆನಡಾದ ಗಾಯಕಿ ಗ್ರೀಮ್ಸ್‌ (Canadian singer Grimes) ಜೊತೆ ಸಂಬಂಧದಲ್ಲಿದ್ದು ಅವರಿಬ್ಬರಿಗೂ ಒಟ್ಟು ಮೂವರು ಮಕ್ಕಳಿದ್ದಾರೆ. ಮೊದಲ ಮಗು ಎಕ್ಸ್ ಎಇಎ12 (X AE A12) 2020ರ ಮೇನಲ್ಲಿ ಜನಿಸಿದೆ. ಇವರಿಗೆ  ಎಕ್ಸಾ ಡಾರ್ಕ್ ಸಿಡೆರೇಲ್ ಮಸ್ಕ್ ( Exa Dark Siderael Musk) ಎಂಬ ಮಗಳಿದ್ದಾಳೆ. ಇದರ ಜೊತೆಗೆ , ಟೆಕ್ನೋ ಮೆಕಾನಿಕಸ್ (Techno Mechanicus) ಎಂಬ ಮತ್ತೊಂದು ಗಂಡು ಮಗುವಿದೆ. ಈ ಇಬ್ಬರು ಮಕ್ಕಳು ಇರುವ ಬಗ್ಗೆ ಈ ತಿಂಗಳ ಆರಂಭದಲ್ಲಷ್ಟೇ ಎಲ್ಲರಿಗೂ ತಿಳಿದಿತ್ತು. ಈ ಮಸ್ಕ್ ಹಾಗೂ ಗ್ರೀಮ್ಸ್‌ ಮೂರು ಮಕ್ಕಳಿದ್ದರೂ ಮದುವೆ ಮಾತ್ರ ಆಗಿಲ್ಲ,  ಆದರೆ ಗ್ರೀಮ್ಸ್‌ ಜೊತೆ ಸಂಬಂಧಕ್ಕೂ ಮೊದಲು ಎಲಾನ್ ಮಸ್ಕ್‌ ಕೆನಡಾದ ಲೇಖಕಿ ಜಸ್ಟೀನ್  ವಿಲ್ಸನ್ ಹಾಗೂ ಇಂಗ್ಲೀಷ್ ನಟ ತಾಲುಲಾ ರಿಲೆ (Talulah Riley) ಎಂಬುವವರನ್ನು ವಿವಾಹವಾಗಿದ್ದಾರೆ. ಎಲ್ಲರಿಂದಾಗಿ ಒಟ್ಟು 10 ಮಕ್ಕಳನ್ನು ಎಲಾನ್ ಮಸ್ಕ್ ಹೊಂದಿದ್ದಾರೆ. 

WWE ರಿಂಗ್‌ನಲ್ಲಿ ನಾಟು ನಾಟು ಹಾಡಿಗೆ ಕುಣಿದಾಡಿದ ರಸ್ಲರ್‌ಗಳು: ವೈರಲ್ ವೀಡಿಯೋ

ಇನ್ನು ಎಲಾನ್ ಮಸ್ಕ್ ಹಾಗೂ ಟರ್ಕಿ ಅಧ್ಯಕ್ಷ ಎರ್ಡೊಗನ್ ಅವರ ನಡುವೆ ನ್ಯೂಯಾರ್ಕ್‌ನ (New York)  ಟರ್ಕಿಶ್ ಹೌಸ್‌ನಲ್ಲಿ(Turkish House) ನಡೆದ ಸಭೆಯಲ್ಲಿ ಟರ್ಕಿಯಲ್ಲಿ ಟೆಸ್ಲಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದಿದೆ. ಟರ್ಕಿಯಲ್ಲಿ ಎಲಾನ್ ಮಸ್ಕ್ ಮಾಲೀಕತ್ವದ 7ನೇ ಟೆಸ್ಲಾ ಫ್ಯಾಕ್ಟರಿ ಸ್ಥಾಪಿಸಲು ಟರ್ಕಿ ಅಧ್ಯಕ್ಷ ಎರ್ಡೊಗನ್ ಅವರು ಮನವಿ ಮಾಡಿದರು ಎಂದು ಟೆಲಿಗ್ರಾಫ್ ವರದಿ ಮಾಡಿದೆ. ಕೃತಕ ಬುದ್ಧಿಮತ್ತೆ(ಎಐ) (artificial intelligence) ಹಾಗೂ ಟೆಸ್ಲಾದ ಸ್ಟಾರ್‌ಲಿಂಕ್‌ನಲ್ಲಿ ಎಲಾನ್‌ ಮಸ್ಕ್‌ಗೆ ಸಹಕರಿಸಲು ಟರ್ಕಿ ಮುಕ್ತವಾಗಿದೆ ಎಂದು ಸಭೆಯಲ್ಲಿ ಟರ್ಕಿ ಅಧ್ಯಕ್ಷ ಎರ್ಡೋಗನ್ ಹೇಳಿದ್ದಾರೆ. 

ಇತ್ತ ಟರ್ಕಿ ಮನವಿಗೆ ಪ್ರತಿಕ್ರಿಯಿಸಿದ ಮಸ್ಕ್‌, ಪ್ರಸ್ತುತ ಹೊಸ ಕಾರ್ಖಾನೆಗೆ  ಸ್ಥಾಪನೆಗೆ ನಮ್ಮ ದೇಶವೇ ಪ್ರಮುಖ ಲಿಸ್ಟ್‌ನಲ್ಲಿದೆ. ಆದರೆ ಟರ್ಕಿ ಜೊತೆಯೂ ಸ್ಪೇಸ್ ಎಕ್ಸ್ ಕೆಲಸ ಮಾಡಲು ಬಯಸುವುದು. ಟರ್ಕಿಯಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಸೇವೆಗಳನ್ನು(Starlink satellite services) ನೀಡಲು ಅಗತ್ಯವಾದ ಪರವಾನಗಿಯನ್ನು ಪಡೆಯಲು ಟರ್ಕಿಯ ಅಧಿಕಾರಿಗಳೊಂದಿಗೆ ಕೆಲಸ ಮಾಡಲು ಸ್ಪೇಸ್‌ಎಕ್ಸ್‌ (SpaceX) ಬಯಸಿದೆ ಎಂದು ಅವರು ಹೇಳಿದ್ದಾರೆ.

ಒಂದು ಡ್ರಾಪ್‌ ಕೂಡ ಉಳಿಸದೇ ಬಾಟಲ್‌ನಿಂದ ಕೆಚಪ್ ತೆಗೆಯುವ ಟ್ರಿಕ್ಸ್‌ ಫುಲ್ ವೈರಲ್

ರಾಯಿಟರ್ಸ್ ವರದಿಯ ಪ್ರಕಾರ, ಎರ್ಡೊಗನ್ ಅವರು ಸೆಪ್ಟೆಂಬರ್ ಅಂತ್ಯದಲ್ಲಿ ಇಜ್ಮಿರ್‌ನಲ್ಲಿ ನಡೆಯುವ ಟರ್ಕಿಯ ಏರೋಸ್ಪೇಸ್ ಮತ್ತು ತಂತ್ರಜ್ಞಾನ ಉತ್ಸವ 'ಟೆಕ್ನೋಫೆಸ್ಟ್' ಗೆ (Teknofest) ಹಾಜರಾಗಲು ಎಲಾನ್ ಮಸ್ಕ್ ಅವರನ್ನು ಆಹ್ವಾನಿಸಿದ್ದಾರೆ. ಮಸ್ಕ್ ಕೂಡ ಈ ಫೆಸ್ಟ್‌ನಲ್ಲಿ ಭಾಗವಹಿಸಲು ಸಂತೋಷದಿಂದ ಒಪ್ಪಿದ್ದಾರೆ ಎಂದು ವರದಿಯಾಗಿದೆ. 

 

Follow Us:
Download App:
  • android
  • ios