Asianet Suvarna News Asianet Suvarna News

ನಮ್ಮ ಗ್ಯಾಲಕ್ಸಿಯಲ್ಲಿ ಇರಬಾರದ ಕಪ್ಪುಕುಳಿ: ಎಷ್ಟು ದೊಡ್ಡದಿದೆ ಎಂಬದು ಕೇಳಿ!

ಕ್ಷಿರಪಥ ನಕ್ಷತ್ರಪುಂಜದಲ್ಲೊಂದು ಬೃಹತ್ ಕಪ್ಪುರಂಧ್ರ ಪತ್ತೆ| ಸೂರ್ಯನ ದ್ರವ್ಯರಾಶಿಯ 70 ಪಟ್ಟು ದ್ರವ್ಯರಾಶಿ| ದೈತ್ಯಾಕಾರದ ಕಪ್ಪು ಕುಳಿ ಪತ್ತೆ ಹಚ್ಚಿದ ಚೀನಾದ ಖಗೋಳಶಾಸ್ತ್ರಜ್ಞರು| ನೂತನವಾಗಿ ಕಂಡುಹಿಡಿಯಲಾದ ಕಪ್ಪುರಂಧ್ರಕ್ಕೆ LB-1 ಎಂದು ನಾಮಕರಣ|

Chinese Scientist Discovered Monster Black Hole in Milky Way Galaxy
Author
Bengaluru, First Published Nov 28, 2019, 9:46 PM IST

ಬಿಜಿಂಗ್(ನ.28): ನಮ್ಮ ಕ್ಷಿರಪಥ ನಕ್ಷತ್ರಪುಂಜದಲ್ಲಿ ಸೂರ್ಯನ ದ್ರವ್ಯರಾಶಿಯ 70 ಪಟ್ಟು ದ್ರವ್ಯರಾಶಿಯನ್ನು ಹೊಂದಿರುವ ದೈತ್ಯಾಕಾರದ ಕಪ್ಪು ಕುಳಿಯೊಂದನ್ನು ಚೀನಾದ ಖಗೋಳಶಾಸ್ತ್ರಜ್ಞರು ಆವಿಷ್ಕರಿಸಿದ್ದಾರೆ.

ಚೀನಾದ ಅಕಾಡೆಮಿ ಆಫ್ ಸೈನ್ಸಸ್‌ನ ಸಂಶೋಧನಾ ತಂಡ, ಚೀನಾದ ಕ್ಸಿಂಗ್‌ಲಾಂಗ್ ವೀಕ್ಷಣಾಲಯದ ಮಲ್ಟಿ-ಆಬ್ಜೆಕ್ಟ್ ಫೈಬರ್ ಸ್ಪೆಕ್ಟ್ರೋಸ್ಕೋಪಿಕ್ ಟೆಲಿಸ್ಕೋಪ್ (ಲ್ಯಾಮೋಸ್ಟ್)ಮೂಲಕ ಈ ಬೃಹತ್ ಕಪ್ಪುರಂಧ್ರವನ್ನು ಪತ್ತೆ ಹಚ್ಚಿದೆ.

ವಿಶ್ವದ ಅತ್ಯಂತ ದೊಡ್ಡ ಕಪ್ಪುರಂಧ್ರ: ಬೆಳಕು ಹಾಯಲು ಬಿಡದು ಬೇಡಿದರೂ ಇಂದ್ರ!

ಈ ಕುರಿತು ಮಾಹಿತಿ ನೀಡಿರುವ ಚೀನಾದ ರಾಷ್ಟ್ರೀಯ ಖಗೋಳ ವೀಕ್ಷಣಾಲಯದ ಖಗೋಳಶಾಸ್ತ್ರಜ್ಞ ಲಿಯು ಜಿಫೆಂಗ್, ಪ್ರಸ್ತುತ ನಕ್ಷತ್ರ ವಿಕಾಸದ ಸಿದ್ಧಾಂತದ ಪ್ರಕಾರ ನಮ್ಮ ಗ್ಯಾಲಕ್ಸಿಯಲ್ಲಿ ಇಷ್ಟು ಅಗಾಧ ದ್ರವ್ಯರಾಶಿಯುಳ್ಳ ಗಾತ್ರದ ಕಪ್ಪುರಂಧ್ರಗಳ ಅಸ್ತಿತ್ವ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ಈ ಕಪ್ಪುರಂಧ್ರವನ್ನು LB-1 ಎಂದು ಹೆಸರಿಸಲಾಗಿದ್ದು,  ಇದರ ರಚನೆಯ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಲಿಯು ಸ್ಪಷ್ಟಪಡಿಸಿದ್ದಾರೆ.

ಮಿಲ್ಕಿ ವೇ ಗ್ಯಾಲಕ್ಸಿ ಕಪ್ಪುರಂಧ್ರ ವಿಸ್ಫೋಟ: ಇನ್ನೂ ಬಿಟ್ಟಿಲ್ಲ ಭೂಮಿ ನುಂಗುವ ಚಟ!

ನಕ್ಷತ್ರಗಳು ಸಾಮಾನ್ಯವಾಗಿ ಅಂತ್ಯದ ಸಮೀಪ ಬಂದಾಗ  ತನ್ನಲ್ಲಿರುವ ಅನಿಲವನ್ನು ಕಳೆದುಕೊಳ್ಳುತ್ತವೆ. ಅಲ್ಲದೇ ಕಡಿಮೆ ದ್ರವ್ಯರಾಶಿಯ ಉಂಡೆಯಾಗಿ ಪರಿವರ್ತನೆ ಹೊಂದುತ್ತವೆ.

ಸಿಕ್ಕಳಾ ಕಪ್ಪು ಸುಂದರಿ: ಯುಗದ ಮೊದಲ ಬ್ಲ್ಯಾಕ್ ಹೋಲ್ ಫೋಟೋ!

ಸೂರ್ಯನಿಗಿಂತ ಎಂಟು ಪಟ್ಟು ದೊಡ್ಡದಿರುವ ಈ ಕಪ್ಪುರಂಧ್ರವನ್ನು, ಸ್ಪೇನ್ ಮತ್ತು ಅಮೆರಿಕದಲ್ಲಿರುವ ದೂರದರ್ಶಕಗಳ ಮೂಲಕ ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಲಾಗುವುದು ಎಂದು ಲಿಯು ಸ್ಪಷ್ಟಪಡಿಸಿದ್ದಾರೆ.

ನಕ್ಷತ್ರ ತೇಗಿದ ಕಪ್ಪುರಂಧ್ರ: ನುಂಗುಬಾಕನಿಗೆ ಯಾವ ಲೆಕ್ಕ ಭೂಮಿ, ಚಂದ್ರ?

 

Follow Us:
Download App:
  • android
  • ios