Asianet Suvarna News Asianet Suvarna News

ಸಿಕ್ಕಳಾ ಕಪ್ಪು ಸುಂದರಿ: ಯುಗದ ಮೊದಲ ಬ್ಲ್ಯಾಕ್ ಹೋಲ್ ಫೋಟೋ!

ಕೊನೆಗೂ ಬ್ಲ್ಯಾಕ್ ಹೋಲ್ ಫೋಟೋ ಸೆರೆಹಿಡಿಯುವಲ್ಲಿ ಯಶಸ್ವಿಯಾದ ವಿಜ್ಞಾನಿಗಳು| ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಪ್ಪುಕುಳಿಯ ಫೋಟೋ ಸೆರೆ| ಎಂ87 ಎಂಬ ಗ್ಯಾಲಕ್ಸಿ ಬಳಿ ಇರುವ ಬೃಹತ್ ಕಪ್ಪುಕುಳಿ| ನಮ್ಮ ಸೂರ್ಯನಿಗಿಂತ 6.5 ಬಿಲಿಯನ್ ಪಟ್ಟು ದೊಡ್ಡದಿರುವ ಕಪ್ಪುಕುಳಿ| ಡೀ ಸೌರವ್ಯೂಹಕ್ಕಿಂತಲೂ ಊಹಿಸಲಾಗದಷ್ಟು ದೊಡ್ಡದಿರುವ ಕಪ್ಪುಕುಳಿ| ಸುತ್ತಲಿನ ಗ್ಯಾಲಕ್ಸಿಗಳನ್ನು ತನ್ನತ್ತ ಸೆಳೆಯುತ್ತಿರುವ ಕಪ್ಪುಕುಳಿ|

Astronomers Captured First Ever Image Of A Black Hole
Author
Bengaluru, First Published Apr 10, 2019, 8:08 PM IST

ಪ್ಯಾರಿಸ್(ಏ.10): ಇದು ನಿಜಕ್ಕೂ ಬಾಹ್ಯಾಕಾಶ ವಿಜ್ಞಾನ ಪ್ರಪಂಚ ಸಂಭ್ರಮಿಸುವ ಕ್ಷಣ. ದಶಕಗಳಿಂದ ಚಿದಂಬರ ರಹಸ್ಯವಾಇಯೇ ಉಳಿದಿದ್ದ ಬ್ಲ್ಯಾಕ್ ಹೋಲ್ (ಕಪ್ಪುಕುಳಿ) ಫೋಟೋ ಸೆರೆ ಹಿಡಿಯುವಲ್ಲಿ ಖಗೋಳ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಜ್ಞಾನಿಗಳಿಗೆ ಕಪ್ಪುಕುಳಿಯ ನೈಜ ಫೋಟೋ ಸೆರೆ ಹಿಡಿಯುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ದಶಕಗಳ ಪರಿಶ್ರಮದ ಬಳಿಕ ಕೊನೆಗೂ ವಿಜ್ಞಾನಿಗಳು ಕಪ್ಪುಕಳಿಯ ರಹಸ್ಯ ಮಾಹಿತಿಯನ್ನು ಪಡೆದಿದ್ದು, ಇದೇ ಮೊದಲ ಬಾರಿಗೆ ಕಪ್ಪುಕುಳಿಯ ನೈಜ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ನೆದರ್ಲೆಂಡ್ ನ ರ್ಯಾಡ್ ಬೌಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಪ್ಪುಕುಳಿಯ ಫೋಟೋ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ವಿಶ್ವದ ವಿವಿಧ ಭಾಗಗಳಲ್ಲಿರುವ 8 ಅತ್ಯಾಧುನಿಕ ಟೆಲಿಸ್ಕೋಪ್ ಸಹಾಯದಿಂದ ಫೋಟೋ ಸೆರೆ ಹಿಡಿದಿದ್ದಾರೆ.

ಹೌದು.. ವಿಶ್ವವನ್ನೇ ನುಂಗಿ ಹಾಕುವ ಕಪ್ಪುಕುಳಿಯ ಕುರಿತು ಅಮೆರಿಕದ ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಮಾಹಿತಿ ನೀಡಿದ್ದರು. ಈ ಬಳಿಕ ಸಾಕಷ್ಟು ವಿಜ್ಞಾನಿಗಳು ಈ ಕುರಿತು ಸಂಶೋಧನೆ ಕೈಗೊಂಡರೂ ಅದರಲ್ಲಿ ಹೇಳಿಕೊಳ್ಳುವಂತಹ ಯಶಸ್ವಿಯಾಗಿರಲಿಲ್ಲ. ಕಪ್ಪುಕುಳಿ ಇದೆ ಎಂದು ಮಾಹಿತಿ ಇತ್ತಾದರೂ ಅದು ಎಲ್ಲಿದೆ.. ಅದು ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳು ಇಷ್ಟು  ದಿನ ಪ್ರಶ್ನೆಗಳಾಗಿಯೇ ಉಳಿದಿತ್ತು.

ಎಂ87 ಎಂಬ ಗ್ಯಾಲಕ್ಸಿಯಿಂದ 50 ಮಿಲಿಯನ್  ಜ್ಯೋತಿರ್ವರ್ಷ ದೂರವಿರುವ ಈ ಕಪ್ಪುಕುಳಿ,  ಭೂಮಿಯಿಂದ ಸುಮಾರು 40 ಬಿಲಿಯನ್ ಜ್ಯೋತಿರ್ವರ್ಷ ದೂರವಿದೆ.

ನಮ್ಮ ಸೂರ್ಯನಿಗಿಂತ ಬರೋಬ್ಬರಿ 6.5 ಬಿಲಯನ್ ಪಟ್ಟು ದೊಡ್ಡಿದಿರುವ ಈ ಕಪ್ಪುಕುಳಿ, ನಮ್ಮ ಇಡೀ ಸೌರವ್ಯೂಹಕ್ಕಿಂತಲೂ ಊಹಿಸಲಾಗದಷ್ಟು ದೊಡ್ಡದಿದೆ ಎನ್ನಲಾಗಿದೆ.

ಚಿತ್ರದಲ್ಲಿ ಕಪ್ಪುಕುಳಿಯಲ್ಲಿರುವ ಅಪಾರ ಪ್ರಮಾಣದ ಸೂಪರ್ ಹೀಟೆಡ್ ಗ್ಯಾಸ್ (ಅತ್ಯಂತ ಶಾಖದಿಂದ ಕೂಡಿದ ಅನಿಲ) ತನ್ನ ಬಳಿಯ ಗ್ಯಾಲಕ್ಸಿಗಳನ್ನು ತನ್ನತ್ತ ಸೆಳೆಯುತ್ತಿದೆ. ಈ ಕಪ್ಪುಕುಳಿಯಲ್ಲಿನ ಬೆಳಕಿನ ಅಗಾಧತೆ ಎಷ್ಟಿದೆ ಎಂದರೆ ಸೌರವ್ಯೂಹಕ್ಕಿಂತ ಅನೇಕ ಲಕ್ಷ ಪಟ್ಟು ಪ್ರಕಾಶಮಾನವಾಗಿದೆ.

ಈ ಬೃಹತ್ ಕಪ್ಪುಕುಳಿಯ ಗುರುತ್ವಾಕರ್ಷಣೆ ಬಲದಿಂದ ಬೆಳಕೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Follow Us:
Download App:
  • android
  • ios