ಚಂದ್ರನ ಮೇಲೆ ಗಿಡ ಚಿಗುರಿಸುವಲ್ಲಿ ಚೀನಾ ಯಶಸ್ವಿ| ಚೀನಾದ ಚ್ಯಾಂಗ್ ಇ-4 ನೌಕೆಯಿಂದ ಚಿಗುರೊಡೆದ ಹತ್ತಿ ಗಿಡ| ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಮಹತ್ತರವಾದ ಮೈಲಿಗಲು|  ಗಿಡಗಳ ಬೆಳವಣಿಗೆಗೆ ಸಹಕಾರಿಯಾಗಿರುವ ಉಷ್ಣತೆಯನ್ನು ಕಾಪಾಡುವ ಸವಾಲು| 

ಬಿಜಿಂಗ್(ಜ.16): ತಂತ್ರಜ್ಞಾನದ ಮುಂದುವರಿಕೆ ಮಾನವನನ್ನು ದೇವನನ್ನಾಗಿ ಪರಿವರ್ತಿಸುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ. ತನ್ನ ಬುದ್ದಿಮತ್ತೆಯಿಂದ ಪ್ರಕೃತಿಗೆ ಸೆಡ್ಡು ಹೊಡೆಯುತ್ತಿರುವ ಮಾನವ, ನಿಸರ್ಗಕ್ಕೆ ಪರ್ಯಾಯವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದರಂತೆ ಚಂದ್ರನ ಪಾರ್ಶ್ವ ಭಾಗದ ಅಧ್ಯಯನದಲ್ಲಿ ನಿರತವಾಗಿರುವ ಚೀನಾದ ಚ್ಯಾಂಗ್ ಇ-4 ನೌಕೆ ಚಂದ್ರನ ಮೇಲೆ ಗಿಡವೊಂದನ್ನು ಚಿಗುರಿಸುವಲ್ಲಿ ಯಶಸ್ವಿಯಾಗಿದೆ. ಭೂಮಿಯ ನೈಸರ್ಗಿಕ ಉಪಗ್ರಹದ ಮೇಲೆ ತನ್ನ ಗಿಡ ಮೊಳಕೆಯೊಡೆದಿರುವುದರ ಚಿತ್ರವನ್ನು ಚೀನಾ ಬಾಹ್ಯಾಕಾಶ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. 

2018 ರ ಜ.03 ರಂದು ಭೂಮಿಗೆ ಗೋಚರವಾಗದ ಚಂದ್ರನ ಮತ್ತೊಂದು ಭಾಗದ ಮೇಲೆ ಚೀನಾದ ಚ್ಯಾಂಗ್ ಇ-4 ಬಾಹ್ಯಾಕಾಶ ನೌಕೆ ಇಳಿದಿತ್ತು. ಚಂದ್ರನ ಮೇಲೆ ಇಳಿಯುತ್ತಲೇ ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಹತ್ತಿ ಬೀಜವನ್ನು ಬಿತ್ತಿದ್ದರು. ಈಗ ಅದು ಚಿಗುರೊಡೆದಿದೆ.

ಭವಿಷ್ಯದಲ್ಲಿ ಚಂದ್ರನ ಮೇಲ್ಮೈ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಚೀನಾದ ಈ ಸಂಶೋಧನೆ ಮಾರ್ಗದರ್ಶನವಾಗಲಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಮಹತ್ತರವಾದ ಮೈಲಿಗಲು ಸ್ಥಾಪಿಸಿದೆ. 

ಚೀನಾದ ವಿವಿಯಲ್ಲಿ ತಯಾರಾದ ಸುಮಾರು 7 ಇಂಚಿನ ಕಂಟೇನರ್ ನಲ್ಲಿ ಈ ಪ್ರಯೋಗ ಮಾಡಲಾಗಿದ್ದು, ಗಿಡಗಳ ಬೆಳವಣಿಗೆಗೆ ಸಹಕಾರಿಯಾಗಿರುವ ಉಷ್ಣತೆಯನ್ನು ಕಾಪಾಡುವುದು ಈಗ ಸವಾಲಿನ ಸಂಗತಿಯಾಗಿದೆ.

ಚಂದ್ರನ ‘ಡಾರ್ಕ್ ಸೈಡ್’ನತ್ತ ಚೀನೀ ಯಾನ!

ಯಾರೂ ಹೋಗಿರದ ಜಾಗದಲ್ಲಿ ಚೀನಾ!: ಚಂದ್ರನ ಹಿಂಬದಿಗೆ ನೌಕೆ ಇಳಿಸಿ ಇತಿಹಾಸ ಸೃಷ್ಟಿ

ಹೀಗಿದೆ ಚಂದ್ರನ ಹಿಂಭಾಗ: ಚೀನಾ ನೌಕೆಯ ಪನೋರಮಾ ಫೋಟೋ!