ಬಿಜಿಂಗ್(ಡಿ.30): ಈ ತಿಂಗಳ ಆರಂಭದಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಿದ ಚೀನಾದ ಚ್ಯಾಂಗ್ ಇ-4 ನೌಕೆ ಮಾನವ ಇತಿಹಾಸದಲ್ಲಿ ಹೊಸದೊಂದು ಸಾಧನೆ ಮಾಡಲು ಸಜ್ಜಾಗಿದೆ.

ಚೀನಾದ ಚ್ಯಾಂಗ್ ಇ-4 ಇದುವರೆಗೂ ಯಾರೂ ನೋಡಿರದ ಚಂದ್ರನ ಪಾರ್ಶ್ವ ನೆಲದಲ್ಲಿ ಇಳಿಯಲಿದೆ. ಚಂದ್ರನ ಸಮಕಾಲಿಕ ಪರಿಭ್ರಮಣೆ ಫಲವಾಗಿ ಅದರ ಒಂದೇ ಮುಖ ಭೂಮಿಗೆ ಕಾಣುತ್ತದೆ. ಹೀಗಾಗಿ ಚಂದ್ರನ ಹಿಮ್ಮುಖವನ್ನು ಇದುವರೆಗೂ ನೊಡಲು ಸಾಧ್ಯವಾಗಿಲ್ಲ.

1959ರಲ್ಲಿ ಅಂದಿನ ಸೋವಿಯತ್ ರಷ್ಯಾದ ಲೂನಾ-3 ನೌಕೆ ಚಂದ್ರನ ಹಿಮ್ಮುಖವನ್ನು ಚಿತ್ರೀಕರಿಸಿತ್ತು. ಅದನ್ನು ಬಿಟ್ಟರೆ ಈ ಭಾಗದ ಕುರಿತು ಮಾನವನ ಜ್ಞಾನ ತೀರ ಕಡಿಮೆ.

ಈ ಹಿನ್ನೆಲೆಯಲ್ಲಿ ಚೀನಾದ ಚ್ಯಾಂಗ್ ಇ-4 ನೌಕೆ ಚಂದ್ರನ ಹಿಮ್ಮುಖ ಭಾಗದಲ್ಲಿ ಇಳಿಯಲಿರುವುದು ಹೊಸ ದಾಖಲೆ ಎಂದೇ ಹೇಳಬೇಕಾಗುತ್ತದೆ.