Asianet Suvarna News Asianet Suvarna News

CES 2022: ಜ. 5ರಿಂದ ಲಾಸ್ ವೇಗಾಸ್‌ನಲ್ಲಿ ವಿಶ್ವದ ಅತಿದೊಡ್ಡ ಟೆಕ್ ಶೋ: ಇಲ್ಲಿದೆ ಮಾಹಿತಿ!

ಸಿಇಎಸ್ 2022 ಬುಧವಾರ, ಜನವರಿ 5 ರಿಂದ ಶನಿವಾರ, ಜನವರಿ 7 ರವರೆಗೆ ಯುಎಸ್‌ನ ಲಾಸ್ ವೇಗಾಸ್‌ನಲ್ಲಿ  ನಡೆಯಲಿದೆ. 

CES 2022 worlds biggest tech show of the year will be held in Las Vegas from 5th January mnj
Author
Bengaluru, First Published Jan 3, 2022, 10:59 PM IST

Tech Desk: ವಿಶ್ವದ ಅತಿದೊಡ್ಡ ಟೆಕ್ ಶೋ ಸಿಇಎಸ್ (CES 2022) ಬುಧವಾರ, ಜನವರಿ 5 ರಿಂದ ಶನಿವಾರ, ಜನವರಿ 7 ರವರೆಗೆ ಲಾಸ್‌ ವೇಗಾಸ್‌ನಲ್ಲಿ ನಡೆಯಲಿದೆ.  ಆದರೆ ಯುಎಸ್ ಮತ್ತು ವಿಶ್ವದ ಇತರ ಭಾಗಗಳಲ್ಲಿ ಕೋವಿಡ್ -19 ರ ಓಮಿಕ್ರಾನ್ ರೂಪಾಂತರದ (Omicrn Variant) ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈ ವರ್ಷ ವಿಶ್ವದ ಅತಿದೊಡ್ಡ ಟೆಕ್ ಶೋ ಸ್ವಲ್ಪ ವಿಭಿನ್ನವಾಗಿರಲಿದೆ. ಸಿಇಎಸ್ಅನ್ನು ರದ್ದುಗೊಳಿಸಲಾಗಿಲ್ಲವಾದರೂ, ಈ ವರ್ಷದ ಈವೆಂಟ್ ಲಾಸ್ ವೇಗಾಸ್‌ನಲ್ಲಿ (Las Vegas) ಭೌತಿಕವಾಗಿ ನಡೆಯಲಿದೆ. 

ಗೂಗಲ್, ಇಂಟೆಲ್, ಲೆನೊವೊ, ಅಮೆಜಾನ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಇತರ ದೊಡ್ಡ ಹೆಸರುಗಳು ಆರೋಗ್ಯದ ಕಾರಣದಿಂದ  ಸಿಇಎಸ್ 2022 ಗೆ ಹಾಜರಾಗುತ್ತಿಲ್ಲ. ಆದರೆ ಈ ಟೆಕ್‌ ದೈತ್ಯರ ಹೊರತಾಗಿಯೂ ಕಾರ್ಯಕ್ರಮ ನಡೆಯಲಿದೆ. ಈ ವರ್ಷದ ಸಮ್ಮೇಳನವು ಮುಂದಿನ ಪೀಳಿಗೆಯ ಪ್ರೊಸೆಸರ್‌ಗಳು, ನವೀನ ಲ್ಯಾಪ್‌ಟಾಪ್‌ಗಳು ಮತ್ತು ಉತ್ತಮ ದೃಶ್ಯಗಳು ಮತ್ತು ಹೊಸ ಡಿಸ್ಪ್ಲೇ ತಂತ್ರಜ್ಞಾನದೊಂದಿಗೆ ದೊಡ್ಡ ಪರದೆಯ ಟಿವಿಗಳಿಗೆ ವೇದಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಂದ, ವಿಶೇಷವಾಗಿ ಆರೋಗ್ಯ ತಂತ್ರಜ್ಞಾನದ ಕ್ಷೇತ್ರದಲ್ಲಿ ಹೆಚ್ಚಿನ ಆಫ್-ಬೀಟ್ ಗ್ಯಾಜೆಟ್‌ಗಳನ್ನು ನಿರೀಕ್ಷಿಸಬಹುದಾಗಿದೆ.

ಬುಧವಾರದಿಂದ CES 2022 ಆರಂಭ!

ಸಿಇಎಸ್ ಲಾಸ್ ವೇಗಾಸ್‌ನ ವಾರ್ಷಿಕ ಗ್ರಾಹಕ ಎಲೆಕ್ಟ್ರಾನಿಕ್ ಪ್ರದರ್ಶನವಾಗಿದ್ದೂ ಪ್ರತಿ ವರ್ಷ ಸಿಇಎಸ್‌ ಲಾಸ್  ಗಾಸ್‌ನಲ್ಲಿ ನಡೆಯುತ್ತದೆ.  ಈ ಟೆಕ್‌ ಶೋನಲ್ಲಿ ನಗರದಲ್ಲಿ ಕನಿಷ್ಠ ಮೂರು ಸ್ಥಳಗಳಲ್ಲಿ ವಿವಧ ಪ್ರದರ್ಶನಗಳು ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಿಇಎಸ್ 2022 ಬುಧವಾರ, ಜನವರಿ 5 ರಿಂದ ಶನಿವಾರ, ಜನವರಿ 7 ರವರೆಗೆ ನಡೆಯಲಿದೆ. 

ಇದನ್ನೂ ಓದಿ: Indian Streaming ಉದ್ಯಮ ಮುಂದಿನ 10 ವರ್ಷದಲ್ಲಿ $13-15 ಶತಕೋಟಿ ಬೆಳೆವಣಿಗೆ ನಿರೀಕ್ಷೆ!

ಆದಾಗ್ಯೂ, ಸಮ್ಮೇಳನವು ವಾಸ್ತವವಾಗಿ ಜನವರಿ 4 ರಂದು ಒಂದು ದಿನ ಮುಂಚಿತವಾಗಿ ಪ್ರಾರಂಭವಾಗುತ್ತದೆ. ಶೋ ಫ್ಲೋರ್‌ಗಳು ತೆರೆಯುವ ಮೊದಲು ಇದನ್ನು "ಮೀಡಿಯಾ ಡೇ" ಎಂದೂ ಕರೆಯಲಾಗುತ್ತದೆ. ಡೆಲ್ (Dell) ಮತ್ತು ಇಂಟೆಲ್ (Intel) ಸೇರಿದಂತೆ ಪ್ರಮುಖ ಟೆಕ್ ಕಂಪನಿಗಳಿಂದ ಪ್ರಕಟಣೆಗಳನ್ನು ನಿರೀಕ್ಷಿಸಬಹುದಾಗಿದೆ, ಇಲ್ಲಿ ಅವರು ಪತ್ರಿಕಾಗೋಷ್ಠಿಗೆ ಪ್ರಮುಖ ಟಿಪ್ಪಣಿಗಳನ್ನು ನೀಡುತ್ತಾರೆ.

CES 2022ನಲ್ಲಿ ಯಾರು ಭಾಗವಹಿಸಬಹುದು?

ಇದು Trade-Only (ವ್ಯಾಪಾರ) ಕಾರ್ಯಕ್ರಮವಾಗಿರುವುದರಿಂದ ಸಿಇಎಸ್ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಗ್ರಾಹಕ ಎಲೆಕ್ಟ್ರಾನಿಕ್ಸ್ ಉದ್ಯಮದೊಂದಿಗೆ ಜೋಡಿಸಿಕೊಂಡಿರುವ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮಾತ್ರ ಈವೆಂಟ್‌ಗೆ ಹಾಜರಾಗಬಹುದು. ಪತ್ರಿಕಾ ಸದಸ್ಯರು ಮತ್ತು ಮಾಧ್ಯಮಗಳು CES 2022 ಉಚಿತ ಪ್ರವೇಶ ಪಡೆಯುತ್ತಾರೆ. ಕಾರ್ಯಕ್ರಮದ ಪ್ರಾರಂಭದಿಂದಲೂ ಸಿಇಎಸ್, ಇತ್ತೀಚಿನ ತಂತ್ರಜ್ಞಾನದ ಆವಿಷ್ಕಾರಗಳನ್ನು ಮಾಧ್ಯಮ ಮತ್ತು ವಿಶ್ಲೇಷಕರಿಗೆ ತೋರಿಸುವುದರೊಂದಿಗೆ ಮತ್ತು ಮಾರುಕಟ್ಟೆಗೆ ಬರುವ ಮೊದಲು ತಂತ್ರಜ್ಞಾನ ಅಥವಾ ಉತ್ಪನ್ನದ ಬಗ್ಗೆ ಸಂವಾದವನ್ನು ನಡೆಸುತ್ತದೆ.

CES 2022 ಅನ್ನು ಹೇಗೆ ನೋಡಬಹುದು?

ಸಾಮಾನ್ಯ ಜನರು ಸಿಇಎಸ್‌ಗೆ ಹಾಜರಾಗಲು ಸಾಧ್ಯವಾಗದಿದ್ದರೂ, ಪ್ರಮುಖ ಪ್ರಕಟಣೆಗಳನ್ನು ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. Samsung ತನ್ನ ಸಿಇಎಸ್ ಕಾರ್ಯಕ್ರಮವನ್ನು ಜನವರಿ 4 ರಂದು ಸಂಜೆ 6:30 IST ಕ್ಕೆ (8:00 am IST, ಜನವರಿ 5) ಲೈವ್ ಸ್ಟ್ರೀಮ್ ಮಾಡಲಿದೆ. 

ಇದನ್ನೂ ಓದಿ: Tesla Autopilot ತಂಡಕ್ಕೆ ನೇಮಕಗೊಂಡ ಮೊದಲ ವ್ಯಕ್ತಿ ಭಾರತೀಯ Ashok Elluswamy: ಎಲಾನ್‌ ಮಸ್ಕ್

ಅಂತೆಯೇ, ಇಂಟೆಲ್ ತನ್ನ ವೆಬ್‌ಸೈಟ್‌ನಲ್ಲಿ ಜನವರಿ 4 ರಂದು ಲೈವ್ ಸ್ಟ್ರೀಮ್ ಅನ್ನು ಹೋಸ್ಟ್ ಮಾಡಲಿದೆ, ಅಲ್ಲಿ ಅದು ಹೊಸ ಮೊಬೈಲ್ ಪ್ರೊಸೆಸರ್‌ಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. Asus, Dell, Sony, ಮತ್ತು AMD ತಮ್ಮ ಇತ್ತೀಚಿನ ಉತ್ಪನ್ನಗಳ ಕುರಿತು ಎಲ್ಲಾ ಮಾಹಿತಿಯನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳುತ್ತವೆ.

CES 2022ನಲ್ಲಿ ಏನೆಲ್ಲಾ ಘೋಷಣೆಯಾಗಬಹುದು?

ಸಿಇಎಸ್ ಹೊಸ ಸಾಧನಗಳು, ಮುಖ್ಯವಾಹಿನಿಯ ಲ್ಯಾಪ್‌ಟಾಪ್‌ಗಳು, ದೊಡ್ಡ ಪರದೆಯ ಟಿವಿಗಳು, ಆಟೋಮೊಬೈಲ್‌ಗಳು, ಹೋಮ್ ಎಂಟರ್‌ಟೈನ್‌ಮೆಂಟ್ ಮತ್ತು ಸ್ಮಾರ್ಟ್ ಹೋಮ್‌ಗಳ ಕುರಿತಾಗಿದೆ. CES 2022 ರಲ್ಲಿ, Intel, AMD ಮತ್ತು Nvidia ಹೊಸ ಪ್ರೊಸೆಸರ್‌ಗಳು ಮತ್ತು GPU ಗಳನ್ನು ಘೋಷಿಸಲಿವೆ ಎಂಬ ವದಂತಿಗಳಿವೆ. AMD ಸಹ ತನ್ನ Zen 4 Ryzen ಪ್ರೊಸೆಸರ್‌ಗಳನ್ನು CES 2022 ರಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. 

Dell, Lenovo, Asus, Acer, HP, ಮತ್ತು MSI ಹೊಸ ಲ್ಯಾಪ್‌ಟಾಪ್‌ಗಳನ್ನು CES 2022 ನಲ್ಲಿ ಘೋಷಿಸುವ ಸಾಧ್ಯತೆಗಳಿವೆ. Lenovo 17-ಇಂಚಿನ ಲ್ಯಾಪ್‌ಟಾಪ್ ಅನ್ನು ಕೀಬೋರ್ಡ್‌ನ ಬಲಭಾಗದಲ್ಲಿ ಸಣ್ಣ ಟ್ಯಾಬ್ಲೆಟ್ ತರಹದ ಸ್ಕ್ರೀನ್ ಪ್ರಾರಂಭಿಸುವ ಸಾಧ್ಯತೆಯಿದೆ. ಈ ಲ್ಯಾಪ್‌ಟಾಪ್ ಬಗ್ಗೆ ತಿಂಗಳುಗಳಿಂದ ವದಂತಿಗಳಿವೆ ಮತ್ತು CES 2022 ಆ ಸಾಧನಕ್ಕೆ ಪರಿಪೂರ್ಣ ಲಾಂಚ್‌ಪ್ಯಾಡ್ ಎಂದು ತೋರುತ್ತದೆ. ಇನ್ನು ನಿರೀಕ್ಷೆಯಂತೆ, ಟಿವಿಗಳು ಮತ್ತೊಮ್ಮೆ CES 2022 ನಲ್ಲಿ ಸದ್ದು ಮಾಡಲಿವೆ. ಸಿಇಎಸ್‌ನಲ್ಲಿ ಸ್ವಲ್ಪ ಸಮಯದವರೆಗೆ 8K ಟಿವಿಗಳನ್ನು ತೋರಿಸುತ್ತಿದ್ದ ಬ್ರ್ಯಾಂಡ್‌ಗಳು ಈಗ ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಫ್ಲಾಟ್-ಸ್ಕ್ರೀನ್ ಟಿವಿಗಳನ್ನು ಬಿಡುಗಡೆ ಮಾಡುವ ತವಕದಲ್ಲಿವೆ.  

Follow Us:
Download App:
  • android
  • ios