5 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ 3 ಅತ್ಯುತ್ತಮ ಅಟೋಮೆಟಿಕ್ ಕಾರು

Best Automatic cars in India below Rs 5 lakh
Highlights

ಭಾರತದ ಗ್ರಾಹಕರ ಬೇಡಿಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಕಾರುಗಳಿವೆ. ಆದರೆ ಅತೀ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಅಟೋಮೆಟಿಕ್ ಕಾರುಗಳ ಸಂಖ್ಯೆ ಕಡಿಮೆ. ಆದರೆ ಮೂರು ಕಾರುಗಳು ನಿಮಗೆ ಅತೀ ಕಡಿಮೆ ಬೆಲೆ ಹಾಗೂ ಅಟೋಮೆಟಿಕ್ ಫೀಚರ್ ಹೊಂದಿದೆ. ಆ ಕಾರು ಯಾವುದು? ಇಲ್ಲಿದೆ ವಿವರ.

ಬೆಂಗಳೂರು(ಜು.06): ಭಾರತದ ಮಧ್ಯಮ ವರ್ಗದ ಜನರು ಕಾರು ಖರೀದಿಸಲು ಹರಸಾಹಸ ಪಡಬೇಕು. ಕೂಡಿಟ್ಟ ಹಣದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಇತರ ಫೀಚರ್ಸ್ ಒಳಗೊಂಡ ಕಾರು ಖರೀದಿಸಲು ಸಾದ್ಯವಿಲ್ಲ ಎಂದು ಕೈಕಟ್ಟಿ ಕುಳಿತು ಕೊಳ್ಳುವವರೇ ಹೆಚ್ಚು. ಆದರೆ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಹಾಗೂ ಅಟೋಮೆಟಿಕ್ ಫೀಚರ್ ಹೊಂದಿರೋ ಕಾರುಗಳು ಲಭ್ಯವಿದೆ.

5 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ 3 ಅತ್ಯುತ್ತಮ ಅಟೋಮೆಟಿಕ್ ಕಾರು ಲಭ್ಯವಿದೆ. ಇಷ್ಟೇ ಅಲ್ಲ ಈ ಕಾರುಗಳು ಚಿಕ್ಕ ಕುಟುಂಬಕ್ಕೆ ಆರಾಮದಾಯಕ ಅನ್ನೋದರಲ್ಲಿ ಎರಡು ಮಾತಿಲ್ಲ.

ಮಾರುತಿ ಸುಜುಕಿ ಅಲ್ಟೋ ಕೆ10:


ಭಾರತದ ಕಾರು ಮಾರುಕಟ್ಟೆಯಲ್ಲಿ ಗರಿಷ್ಠ ಮರಾಟದಲ್ಲಿ ಮುಂಚೂಣಿಯಲ್ಲಿರೋ ಅಲ್ಟೋ ಕೆ10 ಕಾರು ಕಡಿಮೆ ಬೆಲೆ ಹಾಗೂ ಅಟೋಮೆಟಿಕ್ ಫೀಚರ್ಸ್ ಹೊಂದಿದೆ.  1.0 ಲೀಟರ್ ಇಂಜಿನ್ ಹೊಂದಿರೋ ಅಲ್ಟೋ ಕೆ10 ಅಟೋಗೇರ್ ಶಿಫ್ಟ್ ಹೊಂದಿದೆ. ಪ್ರತಿ ಲೀಟರ್‌ಗೆ 24.07 ಕೀಲೋ ಮೀಟರ್ ಮೈಲೇಜ್ ಹೊಂದಿರೋ ಆಲ್ಟೋ ಕೆ10 ಬೆಲೆ 4.18 ಲಕ್ಷ(ಎಕ್ಸ್‌ಶೋರೂಂ)

ರೆನಾಲ್ಟ್ ಕ್ವಿಡ್:


ಸಣ್ಣ ಕಾರಿನಲ್ಲಿ ಕ್ರಾಂತಿ ಮಾಡಿದ ರೆನಾಲ್ಟ್ ಕ್ವಿಡ್ ನಿಧಾನವಾಗಿ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿದೆ. ಅಟೋಮೆಟಿಕ್ ಗೇರ್ ಬಾಕ್ಸ್ ಹೊಂದಿರೋ ರೆನಾಲ್ಟ್ ಕ್ವಿಡ್ 3.87 ಲಕ್ಷ (ಎಕ್ಸ್‌ಶೋರೂಂ) ಬೆಲೆಯಲ್ಲಿ ಲಭ್ಯವಿದೆ. ಇದರಲ್ಲಿ ಅವೆಂಜರ್ ಎಡಿಶನ್ 4.64 ಲಕ್ಷ(ಎಕ್ಸ್‌ಶೂರೂಂ) ಬೆಲೆಯಲ್ಲಿ ಲಭ್ಯವಿದೆ.

ದಟ್ಸನ್ ರೆಡಿ ಟು ಗೋ ಎಎಮ್‌ಟಿ:


ಕಳೆದ ವರ್ಷ  ದಟ್ಸನ್ ರೆಡಿ ಟು ಗೋ ಅಟೋಮೆಟಿಕ್ ಕಾರು ಬಿಡುಗಡೆಗೊಳಿಸಿತು. ಕಡಿಮೆ ಬೆಲೆಯಲ್ಲಿ ಕಾರು ಬಿಡುಗಡೆಗೊಳಿಸಿದ ದಟ್ಸನ್, 1.0 ಲೀಟರ್ ಇಂಜಿನ್ ಹೊಂದಿದೆ. ಅಟೋಮೆಟಿಕ್ ದಟ್ಸನ್ ಕಾರಿನ ಬೆಲೆ 3.80 ಲಕ್ಷ(ಎಕ್ಸ್ ಶೋರೂಂ) ರೂಪಾಯಿ. 

loader