ಚೀನಾದ 26,000ಕ್ಕೂ ಹೆಚ್ಚು ಗೇಮಿಂಗ್ ಆ್ಯಪ್ ನಿಷೇಧಿಸಿದ ಆ್ಯಪಲ್
ವಿಶ್ವದ ಅಗ್ರ ಮೊಬೈಲ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಆ್ಯಪಲ್ ಸಂಸ್ಥೆ ಚೀನಾದ 26,000ಕ್ಕೂ ಹೆಚ್ಚು ಗೇಮಿಂಗ್ ಆ್ಯಪ್‌ಗಳನ್ನು ಸ್ಟೋರ್‌ನಿಂದ ತೆಗೆಹಾಕಿದೆ. ಚೀನಾ ಸರ್ಕಾರದಿಂದ ಪರವಾನಗಿ ಪಡೆಯದೇ ಇರುವ ಆ್ಯಪ್‌ಗಳು ಕೂಡ ಆ್ಯಪಲ್ ಸ್ಟೋರ್‌ನಲ್ಲಿ ಸೇರಿಕೊಂಡಿದ್ದವು. ಹೀಗಾಗಿ ಸರ್ಕಾರದಿಂದ ಅಧಿಕೃವಾಗಿ ಪರವಾನಗಿ ಪಡೆಯದ ಚೀನಾದ ಆ್ಯಪ್‌ಗಳನ್ನು ಆ್ಯಪಲ್ ಸ್ಟೋರ್‌ನಿಂದ ತೆಗೆದುಹಾಕಲಾಗುತ್ತಿದೆ.
ನ್ಯೂಯಾರ್ಕ್ (ಆ. 02): ವಿಶ್ವದ ಅಗ್ರ ಮೊಬೈಲ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಆ್ಯಪಲ್ ಸಂಸ್ಥೆ ಚೀನಾದ 26,000ಕ್ಕೂ ಹೆಚ್ಚು ಗೇಮಿಂಗ್ ಆ್ಯಪ್‌ಗಳನ್ನು ಸ್ಟೋರ್‌ನಿಂದ ತೆಗೆಹಾಕಿದೆ. ಚೀನಾ ಸರ್ಕಾರದಿಂದ ಪರವಾನಗಿ ಪಡೆಯದೇ ಇರುವ ಆ್ಯಪ್‌ಗಳು ಕೂಡ ಆ್ಯಪಲ್ ಸ್ಟೋರ್‌ನಲ್ಲಿ ಸೇರಿಕೊಂಡಿದ್ದವು. ಹೀಗಾಗಿ ಸರ್ಕಾರದಿಂದ ಅಧಿಕೃವಾಗಿ ಪರವಾನಗಿ ಪಡೆಯದ ಚೀನಾದ ಆ್ಯಪ್‌ಗಳನ್ನು ಆ್ಯಪಲ್ ಸ್ಟೋರ್‌ನಿಂದ ತೆಗೆದುಹಾಕಲಾಗುತ್ತಿದೆ.
ಆ್ಯಪಲ್ ಐಎನ್‌ಸಿ ಶನಿವಾರ 29,800 ಚೀನಾ ಆ್ಯಪ್‌ಗಳನ್ನು ನಿಷೇಧಿಸಿದ್ದು, ಇದರಲ್ಲಿ 26,000 ಗೇಮಿಂಗ್ ಆ್ಯಪ್‌ಗಳಾಗಿವೆ. ಜುಲೈ ಮೊದಲ ವಾರದಲ್ಲಿ ಆ್ಯಪಲ್ ತನ್ನ ಸ್ಟೋರ್‌ನಿಂದ 2500ಕ್ಕೂ ಹೆಚ್ಚು ಆ್ಯಪ್‌ಗಳನ್ನು ತೆಗೆದುಹಾಕಿತ್ತು.
ಜಾಗತಿಕ ಮೊಬೈಲ್ ಉತ್ಪಾದನೆಯ ತವರಾಗಲಿದೆ ಭಾರತ..!