Asianet Suvarna News Asianet Suvarna News

Android 13 ಹೊಸ ವೈಶಿಷ್ಟ್ಯ: ಒಂದೇ eSIMನಲ್ಲಿ ಎರಡು ಮೊಬೈಲ್‌ ನಂಬರ್ಸ್‌?

ಮಲ್ಟಿಪಲ್‌ ಎನೆಬಲ್‌ಡ್ ಪ್ರೊಫೈಲ್ಸ್ (MEP) ಒಂದೇ eSIMಗೆ ಎರಡು ಪ್ರೊಫೈಲ್‌ಗಳನ್ನು ನಿಯೋಜಿಸಲು ಬಳಕೆದಾರರಿಗೆ ಅವಕಾಶ ನೀಡಬಹುದು.

Android 13 Multiple Enabled Profiles 2 Carrier Connections on a Single eSIM mnj
Author
Bengaluru, First Published Apr 5, 2022, 8:14 AM IST

Multiple Enabled Profiles: ಒಂದೇ ಫೋನ್‌ನಲ್ಲಿ ಎರಡು ಸಿಮ್ ಕಾರ್ಡ್‌ಗಳನ್ನು ಬಳಸುವವರಿಗೆ ಗೇಮ್ ಚೇಂಜರ್ ಆಗಬಹುದಾದ ಆಂಡ್ರಾಯ್ಡ್ 13 (Android 13) ಹೊಸ ವೈಶಿಷ್ಟ್ಯವೊಂದರಲ್ಲಿ ಗೂಗಲ್ (Google) ಕಾರ್ಯನಿರ್ವಹಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ವರದಿಯ ಪ್ರಕಾರ, ವೈಶಿಷ್ಟ್ಯವು ಆಂಡ್ರಾಯ್ಡ್ 13ನೊಂದಿಗೆ ಬಿಡುಗಡೆಯಾಗಲಿದ್ದರೂ , ಇದು ಆಂಡ್ರಾಯ್ಡ್‌ಗೆ ಮಾತ್ರ ಸೀಮಿತವಾಗಿರದೇ, ಐಓಎಸ್‌ ಮತ್ತು ವಿಂಡೋಸ್‌ನಲ್ಲಿ ಸಹ ಕಾರ್ಯಗತಗೊಳಿಸಬಹುದು.

ಎಸ್ಪರ್ ವರದಿಯ ಪ್ರಕಾರ, ಮಲ್ಟಿಪಲ್ ಎನೇಬಲ್ಡ್ ಪ್ರೊಫೈಲ್‌ಗಳು (MEP) ಎಂಬ ವೈಶಿಷ್ಟ್ಯದ ಮೂಲಕ, ಸರ್ಚ್ ದೈತ್ಯ‌ ಗೂಗಲ್ ಒಂದೇ ಇ-ಸಿಮ್‌ಗೆ (eSIM) ಎರಡು ಪ್ರೊಫೈಲ್‌ಗಳನ್ನು ನಿಯೋಜಿಸಲು ಮತ್ತು ಸುಲಭವಾಗಿ ಎರಡೂ ನೆಟ್‌ವರ್ಕ್‌ಗಳ ನಡುವೆ ಬದಲಾಯಿಸಲು ಅನುಮತಿಸಲಿದೆ. 

ಇದನ್ನೂ ಓದಿ: UPI Tap to Pay: ಗೂಗಲ್‌ ಪೇ ಹೊಸ ಫೀಚರ್:‌ ಹಣ ಪಾವತಿ ಈಗ ಇನ್ನೂ ಸುಲಭ!

ಸಿಮ್‌ ಕಾರ್ಡ್‌ ಸ್ಲಾಟ್‌ ಇರೋದಿಲ್ಲ: ಗೂಗಲ್‌ನ ಈ ಹೊಸ ವೈಶಿಷ್ಟ್ಯ 2020ರಲ್ಲಿ ಸಲ್ಲಿಸಿದ ಪೇಟೆಂಟ್‌ ಆಧರಿಸಿದೆ ಎಂದು ವರದಿಯಾಗಿದೆ, ಇದು ಅಸ್ತಿತ್ವದಲ್ಲಿರುವ ಸಿಮ್ ಇಂಟರ್ಫೇಸನ್ನು ಎರಡು ಡಿಜಿಟಲ್ ಸಂಪರ್ಕಗಳಾಗಿ ವಿಭಜಿಸುವುದನ್ನು ವಿವರಿಸುತ್ತದೆ. ಗೂಗಲ್ ಇದನ್ನು ಎಂಜಿನಿಯರಿಂಗ್ ಪಿಕ್ಸೆಲ್ ಹಾರ್ಡ್‌ವೇರ್‌ನಲ್ಲಿ ಪರೀಕ್ಷಿಸುತ್ತಿದೆ ಎಂಬ ವರದಿಗಳು ಈ ಹಿಂದೆ ಇದ್ದವು. ಇದು ತಯಾರಕರು ಸಿಮ್ ಕಾರ್ಡ್ ಸ್ಲಾಟನ್ನು ತೊಡೆದುಹಾಕಲು ಅನುವು ಮಾಡಿಕೊಡುತ್ತದೆ, ಅಲ್ಲದೇ ಈ ಮೂಲಕ ಕೆಲವು ಹೆಚ್ಚುವರಿ ಹಾರ್ಡ್‌ವೇರ್‌ಗಳಿಗೆ ಸ್ಥಳಾವಕಾಶವನ್ನು ನೀಡುತ್ತದೆ.

ಆಂಡ್ರಾಯ್ಡ್ 13 ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುವ ಮೊದಲು ಮೇ ತಿಂಗಳಲ್ಲಿ ಗೂಗಲ್‌ನ ಡೆವಲಪರ್ ಕಾನ್ಫರೆನ್ಸ್ Google I/O 2022 ನಲ್ಲಿ ಸಂಪೂರ್ಣವಾಗಿ ಅನಾವರಣಗೊಳಿಸುವ ನಿರೀಕ್ಷೆಯಿದೆ. ಇಲ್ಲಿಯವರೆಗೆ, ಕಂಪನಿಯು ಆಂಡ್ರಾಯ್ಡ್ 13 ಡೆವಲಪರ್ ಪ್ರಿವೀವ್ 1 ಅನ್ನು ಬಿಡುಗಡೆ ಮಾಡಿದ್ದು, ಇದು ಬಹಳಷ್ಟು ಗೌಪ್ಯತೆ-ಕೇಂದ್ರಿತ ಬದಲಾವಣೆಗಳನ್ನು ಹೊಂದಿದೆ.

ಹಲವು ಹೊಸ ವೈಶಿಷ್ಟ್ಯಗಳು: ಡೆವಲಪರ್  ಪ್ರಿವೀವ್ ಸಿಸ್ಟಂ ಫೋಟೋ ಪಿಕ್ಕರ್, ನಿಯರ್‌ಬಾಯ್ ವೈ-ಫೈ ಡಿವೈಸ್ ವೈಶಿಷ್ಟ್ಯ, ಥೀಮಡ್ ಅಪ್ಲಿಕೇಶನ್ ಐಕಾನ್‌ಗಳು, ಪ್ರತಿ-ಅಪ್ಲಿಕೇಶನ್ ಭಾಷೆಯ ಆದ್ಯತೆಗಳು, ತ್ವರಿತ ಸೆಟ್ಟಿಂಗ್‌ಗಳ ಪ್ಲೇಸ್‌ಮೆಂಟ್ API ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ತೋರಿಸಿದೆ. ಇತರ Android 13 ವೈಶಿಷ್ಟ್ಯವು Apple Handoff-ಶೈಲಿಯ ವೈಶಿಷ್ಟ್ಯವನ್ನು ಒಳಗೊಂಡಿರುತ್ತದೆ, ಅಲ್ಲಿ ಬಳಕೆದಾರರು ಪ್ಲೇಬ್ಯಾಕನ್ನು ವರ್ಗಾಯಿಸಲು ಟ್ಯಾಪ್ ಮಾಡಬಹುದು.

ಇದನ್ನೂ ಓದಿ: ಗೂಗಲ್‌ ಹೋಮ್‌ ಪೇಜ್‌ನಲ್ಲೇ ಸುಲಭವಾಗಿ ಇಂಟರ್ನೆಟ್ ಸ್ಪೀಡ್ ಪರೀಕ್ಷಿಸುವುದು ಹೇಗೆ?

ಟ್ಯಾಪ್‌ ಟು ಟ್ರಾನ್ಸಫರ್  ಸಾಧನಗಳ ನಡುವೆ ಮೀಡಿಯಾ ಪ್ಲೇಬ್ಯಾಕನ್ನು ಚೇಂಜ್‌ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ. ಈ ವೈಶಿಷ್ಟ್ಯವು ಆಪಲ್‌ನ ಹ್ಯಾಂಡ್‌ಆಫ್ ವೈಶಿಷ್ಟ್ಯದಂತೆಯೇ ಇದೇ ರೀತಿಯ ಕಾರ್ಯವನ್ನು ನೀಡಬಹುದು ಅದು ಐಫೋನ್ ಮಾಲೀಕರಿಗೆ ಮೀಡಿಯಾವನ್ನು ಕಂಪನಿಯ ಹೋಮ್‌ಪಾಡ್ ಸ್ಪೀಕರ್‌ಗಳಿಗೆ ವರ್ಗಾಯಿಸಲು ಅನುಮತಿಸುತ್ತದೆ.

ಉನ್ನು ಆಪಲ್‌ನ iPhone 14 ಮತ್ತು iPhone 15 ಮಾದರಿಗಳು ಕೂಡ ಸಿಮ್‌ ಸ್ಲಾಟ್‌ ಬದಲಾಗಿ ಇ-ಸಿಮ್ ಜತೆಗೆ ಬಿಡುಗಡೆಯಾಗಲಿವೆ ಎಂದು ಈ ಹಿಂದೆ ವರದಿಗಳು ತಿಳಿಸಿದ್ದವು. ಹೊಸ ಫೋನುಗಳಿಗೆ ಸಿಮ್‌ಕಾರ್ಡ್‌ಗಳನ್ನು ಅಳವಡಿಸಲು ಸಾಧ್ಯವಿರುವುದಿಲ್ಲ. ಬದಲಾಗಿ ಸಿಮ್‌ ಕಾರ್ಡ್‌ಗಳ ಸೇವೆಯನ್ನು ನೀಡುವ ಇಂಟಿಗ್ರೇಟೆಡ್‌ ಎಲೆಕ್ಟ್ರಾನಿಕ್‌ ಸಕ್ರ್ಯೂಟ್‌ ಕಾರ್ಡನ್ನು ಅಳವಡಿಸಲಾಗಿರುತ್ತದೆ. ಈ ಎಲೆಕ್ಟ್ರಾನಿಕ್‌ ಡಿವೈಸ್‌ ಸಿಮ್‌ ಕಾರ್ಡ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಇ-ಸಿಮ್‌ನೊಂದಿಗೆ ಪೆರಿಸ್ಕೋಪ್‌ ಆಕಾರದ ಲೆನ್ಸ್‌ ಅನ್ನು ಈ ಫೋನಿನ ಕ್ಯಾಮೆರಾಗೆ ಅಳವಡಿಸಲಾಗುತ್ತದೆ.

Follow Us:
Download App:
  • android
  • ios