15 OTT ಸೇವೆಗಳೊಂದಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಬಿಡುಗಡೆ!
ಹೊಸ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಸೇವೆಯೊಂದಿಗೆ, ಬಳಕೆದಾರರು 15 ವಿಭಿನ್ನ OTT ಸ್ಟ್ರೀಮಿಂಗ್ ಸೇವೆಗಳನ್ನು ಪಡೆಯುತ್ತಾರೆ. ಈ ಮೂಲಕ ಅವರು ಒಂದೇ ಅಪ್ಲಿಕೇಶನ್‌ನಲ್ಲಿ ಈ ಎಲ್ಲ ಸೇವಗಳ ಆ್ಯಕ್ಸಸ್ ಪಡೆಯಲು ಸಾಧ್ಯವಾಗುತ್ತದೆ.
Tech Desk: ಏರ್‌ಟೆಲ್ ಹೊಸ ವೀಡಿಯೊ ಸ್ಟ್ರೀಮಿಂಗ್ ಸೇವೆ, ಎಕ್ಸ್‌ಸ್ಟ್ರೀಮ್ ಪ್ರೀಮಿಯಮನ್ನು (Airtel Xstream Premium) ಪ್ರಾರಂಭಿಸಿದೆ. ಈ ಸೇವೆಯೊಂದಿಗೆ, ಬಳಕೆದಾರರು 15 ವಿಭಿನ್ನ OTT ಸ್ಟ್ರೀಮಿಂಗ್ ಸೇವೆಗಳನ್ನು ಪಡೆಯುತ್ತಾರೆ. ಈ ಮೂಲಕ ಒಂದೇ ಅಪ್ಲಿಕೇಶನ್‌ನಲ್ಲಿ ಈ ಎಲ್ಲ ಸೇವಗಳ ಆ್ಯಕ್ಸಸ್ ಪಡೆಯಲು ಸಾಧ್ಯವಾಗುತ್ತದೆ. ಇದು ಏರ್‌ಟೆಲ್ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಮಾಸಿಕ ಬೆಲೆ ರೂ 149 ಮತ್ತು ವಾರ್ಷಿಕ ಚಂದಾದಾರಿಕೆ ರೂ 1,499 ಬೆಲೆಯಲ್ಲಿ ಲಭ್ಯವಿದೆ. ಈ ಸೇವೆ ಮೂಲಕ ಹತ್ತಾರು OTT ಮನರಂಜನಾ ಅಪ್ಲಿಕೇಶನ್ ಆಯ್ಕೆಗಳು ಬಳಕೆದಾರರಿಗೆ ಲಭ್ಯವಿದೆ ಎಂದು ಏರ್‌ಟೆಲ್ ಹೇಳಿದೆ.
ಗ್ರಾಹಕರು ಬಹು ಅಪ್ಲಿಕೇಶನ್‌ಗಳು ಮತ್ತು ಚಂದಾದಾರಿಕೆಗಳನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತಾರೆ. ಆದ್ದರಿಂದ, ಒಂದೇ ಚಂದಾದಾರಿಕೆಯೊಂದಿಗೆ ಒಂದೇ ಸ್ಥಳದಲ್ಲಿ ವಿವಿಧ ಪ್ಲಾಟ್‌ಫಾರ್ಮ್ ಮೂಲಕ ಕಟೆಂಟ್ ಒದಗಿಸುವ ಸೇವೆಯನ್ನು ತನ್ನ ಗ್ರಾಹಕರಿಗೆ ನೀಡಲು ನಿರ್ಧರಿಸಿದೆ ಎಂದು ಏರ್‌ಟೆಲ್ ಹೇಳಿದೆ.
ಇದನ್ನೂ ಓದಿ: Google- Bharti Airtel Deal: ಟೆಲಿಕಾಂ ಕಂಪನಿಯಲ್ಲಿ $1 ಬಿಲಿಯನ್ ಹೂಡಿಕೆ ಮಾಡಲಿರುವ ಟೆಕ್ ದೈತ್ಯ!
15 ವಿಭಿನ್ನ OTT ಸ್ಟ್ರೀಮಿಂಗ್ ಸೇವೆ: "ಇದು ಒಂದೇ ಅಪ್ಲಿಕೇಶನ್, ಒಂದೇ ಚಂದಾದಾರಿಕೆ, ಒಂದೇ ಸೈನ್-ಇನ್, ಒಂದೇ ವೇದಿಕೆಯಲ್ಲಿ ಕಂಟೆಂಟ್ ಹುಡುಕಾಟ ಮತ್ತು ಪ್ರತಿ ಬಳಕೆದಾರರಿಗೆ AI ಚಾಲಿತ ವೈಯಕ್ತೀಕರಿಸಿದ ಕ್ಯುರೇಶನ್‌ನೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ" ಎಂದು ಟೆಲಿಕಾಂ ಆಪರೇಟರ್ ಏರ್‌ಟೆಲ್ ಹೇಳಿದೆ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಸೇವೆಯನ್ನು ಮೊಬೈಲ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳಲ್ಲಿ ಅಪ್ಲಿಕೇಶನ್ ಅಥವಾ ವೆಬ್ ಮೂಲಕ ಮತ್ತು ಟಿವಿಯಲ್ಲಿ ಎಕ್ಸ್‌ಸ್ಟ್ರೀಮ್ ಸೆಟ್-ಟಾಪ್-ಬಾಕ್ಸ್ ಮೂಲಕ ಪಡೆಯಬಹುದು.
ಹೊಸ ಸೇವೆಯು SonyLIV, ErosNow, Lionsgate Play, Hoichoi, ManoramaMax, Shemaroo, Ultra, HungamaPlay, EPICon, Docubay, DivoTV, Klikk, Nammaflix, Dollywood, ಮತ್ತು Shorts TV ನಿಂದ 10,500 ಕ್ಕೂ ಹೆಚ್ಚು ಚಲನಚಿತ್ರಗಳು, ಪ್ರದರ್ಶನಗಳು ಮತ್ತು ಲೈವ್ ಚಾನೆಲ್‌ಗಳನ್ನು ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: Airtel vs Jio vs Vi: 84 ದಿನಗಳ ವ್ಯಾಲಿಡಿಟಿಯೊಂದಿಗೆ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಯೋಜನೆ!
ಇನ್ನಷ್ಟು OTT ಸೇವೆ ಸೇರ್ಪಡೆ: ಮುಂದಿನ ದಿನಗಳಲ್ಲಿ ಇನ್ನಷ್ಟು OTT ಸೇವೆಗಳನ್ನು ಸೇರಿಸುವುದಾಗಿ ಏರ್‌ಟೆಲ್ ಭರವಸೆ ನೀಡಿದೆ. "ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಅನ್ನು ಭಾರತದಲ್ಲಿ ಡಿಜಿಟಲ್ ಮನರಂಜನೆಗಾಗಿ ಗೋ-ಟು ಡೆಸ್ಟಿನೇಶನ್ ಮಾಡಲು ಏರ್‌ಟೆಲ್ ಇನ್ನೂ ಅನೇಕ OTT ಪ್ಲೇಯರ್‌ಗಳೊಂದಿಗೆ ಒಪ್ಪಂದಕ್ಕೆ ಸಿದ್ಧವಾಗಿದೆ" ಎಂದು ಕಂಪನಿ ಹೇಳಿದೆ.
“ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಕಂಟೆಂಟ್ ಅನ್ವೇಷಣೆ, ಕೈಗೆಟುಕುವಿಕೆ ಮತ್ತು ವಿತರಣೆಯ ಪ್ರಮುಖ ಸವಾಲುಗಳನ್ನು ಪರಿಹರಿಸುವ ಮೂಲಕ ಭಾರತದಲ್ಲಿ OTT ಕಂಟೆಂಟನ್ನು ಉತ್ತಮವಾಗಿಸಲು ಗೇಮ್ ಚೇಂಜಿಂಗ್ ಸೇವೆಯಾಗಿದೆ. ಏಕೀಕೃತ ಡಿಜಿಟಲ್ ಪ್ಲಾಟ್‌ಫಾರ್ಮ್‌ನಂತೆ, ಇದು ಗ್ರಾಹಕರು ಮತ್ತು OTT ಕಂಪನಿಗಳಿಗೂ ಸಮಾನವಾಗಿ ಅವಕಾಶಗಳನ್ನು ನೀಡುತ್ತದೆ. ನಾವು ಭಾರತದಲ್ಲಿ ಡಿಜಿಟಲ್ ಮನರಂಜನೆಯನ್ನು ಮುಖ್ಯವಾಹಿನಿಗೆ ತರಲು ಪ್ರಯಾಣವನ್ನು ಪ್ರಾರಂಭಿಸುತ್ತೇವೆ, ”ಎಂದು ಏರ್‌ಟೆಲ್ ಡಿಜಿಟಲ್‌ನ ಸಿಇಒ ಆದರ್ಶ್ ನಾಯರ್ (Adarsh Nair) ಹೇಳಿದ್ದಾರೆ.