ನವದೆಹಲಿ (ನ. 05): ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರತಿ ಏರ್‌ಟೆಲ್‌ ಮತ್ತೆ ಪಾರುಪತ್ಯ ಸಾಧಿಸಲು ಮುಂದಾಗಿದ್ದು, 599 ರು. ಗಳ ಪ್ರೀಪೇಯ್ಡ್‌ ಪ್ಲಾನ್‌ ಖರೀದಿ ಮಾಡುವವರಿಗೆ 4 ಲಕ್ಷ ರು. ಮೌಲ್ಯದ ಜೀವ ವಿಮೆ ನೀಡುವುದಾಗಿ ಸೋಮವಾರ ಘೋಷಣೆ ಮಾಡಿದೆ.

ಆಗ ಫೇಸ್ ಬುಕ್ ಈಗ ವಾಟ್ಸಾಪ್; ನಿಮ್ಮ ವಾಟ್ಸಾಪ್ ಮಾಹಿತಿ ಹೇಗೆ ಕದಿಯಬಹುದು?

ಏರ್‌ಟೆಲ್‌ ಹಾಗೂ ಭಾರತಿ ಆಕ್ಸಾ ನಡುವೆ ಈ ಬಗ್ಗೆ ಒಪ್ಪಂದ ನಡೆದಿದ್ದು, ಈ ಯೋಜನೆ ಖರೀದಿ ಮಾಡಿದ ಗ್ರಾಹಕರಿಗೆ 84 ದಿನಗಳ ಕಾಲ ಪ್ರತಿದಿನ 2 ಜಿಬಿ ಡೇಟಾ, ಎಲ್ಲಾ ನೆಟ್‌ವರ್ಕ್ಗಳಿಗೆ ಅನಿಯಮಿತ ಕರೆ ಹಾಗೂ ಪ್ರತಿದಿನ 100 ಉಚಿತ ಎಸ್ಸೆಮ್ಮೆಸ್‌ ಉಚಿತವಾಗಿ ಸಿಗಲಿದೆ.

18-56 ವರ್ಷದ ಎಲ್ಲಾ ಗ್ರಾಹಕರಿಗೂ ಈ ಯೋಜನೆ ಅನ್ವಯವಾಗಲಿದ್ದು, ಯಾವುದೇ ಪೇಪರ್‌ ವರ್ಕ್ ಅಥವಾ ವೈದ್ಯಕೀಯ ಪರೀಕ್ಷೆ ಇರುವುದಿಲ್ಲ. ವಿಮೆಯ ಡಿಜಿಟಲ್‌ ಪ್ರತಿಯನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಗ್ರಾಹಕರು ಬಯಸಿದರೆ ಪ್ರತಿಗಳನ್ನು ಅಂಚೆ ಮೂಲಕ ರವಾನಿಸಲಾಗುವುದು. ಪ್ರತೀ ಮೂರು ತಿಂಗಳ ಬಳಿಕ ರಿಚಾರ್ಜ್ ನಂತರ ವಿಮೆ ಸೌಲಭ್ಯ ಸ್ವಯಂ ನವೀಕರಣಗೊಳ್ಳಲಿದೆ ಎಂದು ಏರ್‌ಟೆಲ್‌ ತಿಳಿಸಿದೆ.

ಶೀಘ್ರವೇ ಭಾರತಕ್ಕೆ ವೊಡಾಫೋನ್ ಗುಡ್ ಬೈ? ವರದಿ ಬಗ್ಗೆ ಕಂಪನಿ ಹೇಳಿದ್ದಿಷ್ಟು..

ರಿಚಾಜ್‌ರ್‍ ಬಳಿಕ ಎಸ್ಸೆಮ್ಮೆಸ್‌ ಅಥವಾ ಮೈ ಏರ್ ಟೇಲ್  ಆ್ಯಪ್‌ ಮೂಲಕ ವಿಮೆ ಸೌಲಭ್ಯ ಪಡೆದುಕೊಳ್ಳಬಹುದು.

ನವೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: