Asianet Suvarna News Asianet Suvarna News

ನಗರಗಳಲ್ಲಿ ಶುರುವಾಯ್ತು 21 ಹೊಸ ಆಧಾರ್ ಕೇಂದ್ರ; ಸೇವೆ & ಶುಲ್ಕ ಕಂಪ್ಲೀಟ್ ಡೀಟೆಲ್ಸ್

ಆಧಾರ್ ನೋಂದಣಿ, ಈಗಿರುವ ವಿವರಗಳನ್ನು ಅಪ್ಡೇಟ್ ಮಾಡೋದು ಸುಲಭವಾಗಲು ಯುಐಡಿ ಪ್ರಾಧಿಕಾರವು 21 ಹೊಸ ಆಧಾರ್ ಕೇಂದ್ರಗಳನ್ನು ಆರಂಭಿಸಿದೆ. ಶೀಘ್ರದಲ್ಲೇ ಇನ್ನೂ 93 ಕೇಂದ್ರಗಳು ಆರಂಭವಾಗಲಿವೆ.

21 New Aadhaar Centers Ready List of Services Fee Timing
Author
Bengaluru, First Published Dec 18, 2019, 6:53 PM IST

ಬೆಂಗಳೂರು (ಡಿ.18): ಆಧಾರ್ ಕಾರ್ಡ್ ಮಾಡಿಸಿಲ್ಲ ಅಥ್ವಾ ಆಧಾರ್ ಕಾರ್ಡ್‌ನಲ್ಲಿ ವಿಳಾಸ, ಮೊಬೈಲ್‌ ನಂಬರ್ ಏನಾದ್ರೂ ಅಪ್ಡೇಟ್ ಮಾಡೋದಾದ್ರೆ ಇನ್ಮುಂದೆ ಸುಲಭ!

UID ಪ್ರಾಧಿಕಾರವು ದೇಶಾದ್ಯಂತ ಬೇರೆ ಬೇರೆ ನಗರಗಳಲ್ಲಿ 21 ಹೊಸ ಆಧಾರ್ ಸೇವಾ ಕೇಂದ್ರಗಳನ್ನು ಆರಂಭಿಸಿದ್ದು, ಶೀಘ್ರದಲ್ಲೇ ಇನ್ನು 93 ಕೇಂದ್ರಗಳನ್ನು ಆರಂಭಿಸುವುದಾಗಿ ಹೇಳಿದೆ.

ಅವುಗಳ ಪೈಕಿ ಎರಡು ಆಧಾರ್ ಕೇಂದ್ರಗಳು ಕರ್ನಾಟಕದ ಎರಡು ಕೇಂದ್ರಗಳಲ್ಲಿ ಆರಂಭವಾಗಿವೆ. 

ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ  ಪೈ ವಿಸ್ತಾ ಕನ್ವೆಶನ್ ಸೆಂಟರ್ ಹಾಗೂ ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಸಿಸಿಕೆ ಕಟ್ಟಡದಲ್ಲಿ ಆಧಾರ್ ಕೇಂದ್ರಗಳು ಶುರುವಾಗಿವೆ.

ಇದನ್ನೂ ಓದಿ | ಇನ್ಮುಂದೆ ಮೊಬೈಲ್ ಇಂಟರ್ನೆಟ್ ಬಳಸಬೇಕಾದ್ರೆ ಚಹರೆ ಸ್ಕ್ಯಾನ್ ಮಾಡೋದು ಕಡ್ಡಾಯ!...

ಈ ಕೇಂದ್ರಗಳು ವಾರದ ಏಳು ದಿನಗಳು ಕಾರ್ಯ ನಿರ್ವಹಿಸಲಿದ್ದು, ಬೆಳಗ್ಗೆ 9.30 ಯಿಂದ ಸಂಜೆ 5.30ರ ತನಕ ತೆರೆದಿರುತ್ತೆ. ಈ ಕೇಂದ್ರಗಳು ಒಂದು ದಿನಕ್ಕೆ ಸುಮಾರು 1000 ಎನ್ರೋಲ್ಮೆಂಟ್ ಮತ್ತು ಅಪ್ಡೇಟ್ ಅರ್ಜಿಗಳನ್ನು ವಿಲೇವಾರಿ ಮಾಡುವ ಸಾಮರ್ಥ್ಯ ಹೊಂದಿವೆ.

ಈ ಕೇಂದ್ರಗಳಲ್ಲಿ ಆಧಾರ್ ಎನ್ರೋಲ್ಮೆಂಟ್ ಉಚಿತವಾಗಿದ್ದು,  ಅಪ್ಡೇಟ್ ಮಾಡಿಸಲು ₹50 ಶುಲ್ಕವನ್ನು ಪಾವತಿಸಬೇಕು.

ಪ್ರಾಧಿಕಾರವು ಭಾರತದ ಸುಮಾರು 53 ನಗರಗಳಲ್ಲಿ 114 ಇಂತಹ ಕೇಂದ್ರಗಳನ್ನು ತೆರೆಯುವ ಯೋಜನೆ ಹಾಕಿಕೊಂಡಿತ್ತು.  ಇದಲ್ಲದೇ,  ಬ್ಯಾಂಕ್, ಪೋಸ್ಟ್ ಆಫೀಸ್ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು ನಡೆಸುವ ಸುಮಾರು 35 ಸಾವಿರ ಕೇಂದ್ರಗಳಲ್ಲಿಯೂ ಆಧಾರ್ ಎನ್ರೋಲ್ ಮಾಡುವ ವ್ಯವಸ್ಥೆ ಇದೆ.

ಆಧಾರ್ ಕೇಂದ್ರಗಳಿಗೆ ಭೇಟಿ  ನೀಡುವ ಮುನ್ನ UIDAI ಪೋರ್ಟಲ್‌ನಲ್ಲಿ ಆನ್‌ಲೈನ್ ಅಪಾಯಿಂಟ್ಮೆಂಟ್ ತೆಗೆದುಕೊಲ್ಳಬೇಕು.

ಇದನ್ನೂ ಓದಿ | ವಾಟ್ಸಪ್‌ನಲ್ಲಿ ಹೊಸ ಫೀಚರ್; ಈಗ ನೀವೇ ಬಾಸ್, ನೀವೇ ಸ್ಪೆಶಲ್!...

ಆಧಾರ್ ಕೇಂದ್ರಗಳಲ್ಲಿ ಸಿಗುವ ಸೇವೆಯ ಪಟ್ಟಿ:

  • ಹೊಸ ಆಧಾರ್ ನೋಂದಣಿ
  • ಹೆಸರು ಅಪ್ಡೇಟ್
  • ವಿಳಾಸ ಅಪ್ಡೇಟ್
  • ಮೊಬೈಲ್ ನಂ. ಅಪ್ಡೇಟ್
  • ಇ-ಮೇಲ್ ವಿಳಾಸ ಅಪ್ಡೇಟ್
  • ಜನ್ಮ ದಿನಾಂಕ ಅಪ್ಡೇಟ್
  • ಜಂಡರ್ ಅಪ್ಡೇಟ್
  • ಬಯೋಮೆಟ್ರಿಕ್ ಅಪ್ಡೇಟ್
     
Follow Us:
Download App:
  • android
  • ios