Asianet Suvarna News Asianet Suvarna News

Bill Gates 2021 ನನ್ನ ಜೀವನದ ಅತ್ಯಂತ ಕಷ್ಟಕರ ವರ್ಷ ಎಂದ ಮೈಕ್ರೋಸಾಫ್ಟ್‌ ಸಂಸ್ಥಾಪಕ!

*2021 ನನಗೆ ದೊಡ್ಡ ಪರಿವರ್ತನೆಗಳ ವರ್ಷವಾಗಿದೆ : ಬಿಲ್‌ ಗೇಟ್ಸ್‌
*ಆದರೆ ನಾನು ಮಾಡುವ ಕೆಲಸದಲ್ಲಿ ಯಾವುದೇ ಬದಲಾವಣೆ ತಂದಿಲ್ಲ
*ಫೋರ್ಬ್ಸ್ ಪ್ರಕಾರ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ ಬಿಲ್‌ ಗೇಟ್ಸ್‌ 

2021 has been the most difficult year of my life said Bill Gates mnj
Author
Bengaluru, First Published Dec 9, 2021, 6:21 PM IST

ಯುಎಸ್‌ಎ(ಡಿ. 09): ಮೈಕ್ರೋಸಾಫ್ಟ್ (Microsoft) ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) 2021 ತಮ್ಮ ಜೀವನದ ಅತ್ಯಂತ ಅಸಾಮಾನ್ಯ ಮತ್ತು ಕಷ್ಟಕರವಾದ ವರ್ಷವಾಗಿದೆ ಎಂದು ಹೇಳಿದ್ದಾರೆ. "2021 ನನಗೆ ದೊಡ್ಡ ಪರಿವರ್ತನೆಗಳ ವರ್ಷವಾಗಿದೆ ಆದರೆ ನಾನು ಪ್ರಿತಿಯಿಂದ ಮಾಡುವ ಕೆಲಸದಲ್ಲಿ ಅದು ಯಾವುದೇ ಬದಲಾವಣೆ ತಂದಿಲ್ಲ" ಎಂದು ಗೇಟ್ಸ್‌ ಹೇಳಿದ್ದಾರೆ. ಫೋರ್ಬ್ಸ್ (Forbes) ಪ್ರಕಾರ $ 138 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ನಾಲ್ಕನೇ ಶ್ರೀಮಂತ (Worldʼs 4th Richest) ವ್ಯಕ್ತಿಯಾಗಿರುವ  ಗೇಟ್ಸ್  ಮಂಗಳವಾರ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ (Blog Post) ಈ ಬಗ್ಗೆ  ಬರೆದಿದ್ದಾರೆ.

"ಮೆಲಿಂಡಾ (Melinda) ಮತ್ತು ನಾನು ನಮ್ಮ ಸಂಸ್ಥೆಯನ್ನು (Bill & Melinda Gates Foundation) ಒಟ್ಟಿಗೆ ನಡೆಸುವುದನ್ನು ಮುಂದುವರಿಸಿದ್ದೇವೆ ಜತೆಗೆ ಉತ್ತಮವಾದ ಹೊಸ ಕೆಲಸದ ಲಯವನ್ನು ಕಂಡುಕೊಂಡಿದ್ದೇವೆ. ಆದರೆ ವೈಯುಕ್ತಿಗವಾಗಿ ಇದು ನನಗೆ ಒಂದು  ದುಃಖದ ವರ್ಷವಾಗಿದೆ ಎಂಬುದನ್ನು ನಾನು ನಿರಾಕರಿಸಲಾರೆ. ಬದಲಾವಣೆಗೆ ಹೊಂದಿಕೊಳ್ಳುವುದು ಸುಲಭವಲ್ಲ, ಅದು ಏನೇ ಇರಲಿ" ಎಂದು ಗೇಟ್ಸ್ ಹೇಳಿದ್ದಾರೆ.

ಈ ವರ್ಷವನ್ನು ಹೆಚ್ಚಾಗಿ ಆನ್‌ಲೈನ್‌ನಲ್ಲಿ ಕಳೆದಿದ್ದೇನೆ!

ಅವರ ಮೂರು ಮಕ್ಕಳಿಲ್ಲದ ಅವರ  ಖಾಲಿ ಮನೆ ಸ್ಥಿತಿಯನ್ನು ಉಲ್ಲೇಖಿಸಿದ ಬಿಲ್‌, ಒಬ್ಬರದ್ದು ಮದುವೆಯಾಗಿದ್ದೂ, ಇನ್ನಿಬ್ಬರು ಕಾಲೇಜು ಮತ್ತು ಶಾಲೆಗೆ ಹೋಗಿದ್ದಾರೆ. ಹಾಗಾಗಿ ಹದಿಹರೆಯದವರು ಇಲ್ಲದ ಮನೆ ತುಂಬಾ ಶಾಂತವಾಗಿದೆ. ಈ ದಿನಗಳಲ್ಲಿ ಪುಸ್ತಕವನ್ನು ಓದುವುದು ಅಥವಾ ಕೆಲಸವನ್ನು ಮಾಡುವುದರ ಮೇಲೆ ಗಮನಹರಿಸುವುದು ಸುಲಭವಾಗಿದ್ದರೂ ಸಹ, ಮನೆಯಲ್ಲಿ ಅವರಿಲ್ಲದಿರುವುದನ್ನು ನಾನು ಮಿಸ್‌ ಮಾಡಿಕೊಳ್ಳತ್ತಿದ್ದೇನೆ." ಎಂದು ಹೇಳಿದ್ದಾರೆ 

"ಈ ವರ್ಷದಲ್ಲಿ ನಾವೆಲ್ಲರೂ ಹೊಸ ಜೀವನಕ್ಕೆ ಹೊಂದಿಕೊಳ್ಳಬೇಕಾಗಿ ಬಂತು ಆದರೂ ಅದು ಪ್ರತಿಯೊಬ್ಬ ವ್ಯಕ್ತಿಗೂ ಜೀವನ ವಿಭಿನ್ನವಾಗಿತ್ತು. ನಾನು ಈ ವರ್ಷವನ್ನು ಹೆಚ್ಚಾಗಿ ಆನ್‌ಲೈನ್‌ನಲ್ಲಿ ಕಳೆದಿದ್ದೇನೆ. ಯಾವುದೇ ಮುಖಾಮುಖಿ ಸಾಮಾಜಿಕ ಸಂವಹನವಿಲ್ಲದೆ ನಾನು ಒಂದು ವರ್ಷ್‌ ಕಳೆದಿದ್ದೇನೆ. ಇದೊಂದು ವಿಚಿತ್ರ ಮತ್ತು ದಿಗ್ಭ್ರಮೆಗೊಳಿಸುವ ಅನುಭವವಾಗಿದೆ. ಕಳೆದ 12 ತಿಂಗಳುಗಳಲ್ಲಿ ನನ್ನ ವೈಯಕ್ತಿಕ ಪ್ರಪಂಚವು ಚಿಕ್ಕದಾದಷ್ಟು ಎಂದೂ ಆಗಿಲ್ಲ" ಎಂದು ಗೇಟ್ಸ್ ಹೇಳಿದ್ದಾರೆ.

ಬಿಲ್‌ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್  ವಿಚ್ಛೇದನ

ಬಿಲಿಯನೇರ್ ಬಿಲ್‌ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್ (Melinda French Gates) 27 ವರ್ಷಗಳ ದಾಂಪತ್ಯದ ನಂತರ ಮೇ 3 ರಂದು ವಿಚ್ಛೇದನ ಪಡೆದರು. ಗೇಟ್ಸ್ 1987 ರಲ್ಲಿ  ಮೆಲಿಂಡಾ ಜತೆ ಡೇಟಿಂಗ್ ಪ್ರಾರಂಭಿಸಿದರು ಮತ್ತು ಜನವರಿ 1, 1994 ರಂದು ಹವಾಯಿಯಲ್ಲಿ (Hawaii) ವಿವಾಹವಾದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಅವರು ತಮ್ಮ ಸಂಪತ್ತನ್ನು ದಾನ ಮಾಡಲು  ಪ್ರತ್ಯೇಕ ಯೋಜನೆಗಳನ್ನು  ಕೂಡ ಈಗಾಗಲೇ ಬಹಿರಂಗಪಡಿಸಿದ್ದಾರೆ.

Phoebe Gates: ರೂಪದಲ್ಲೂ,ಗುಣದಲ್ಲೂಅಪ್ಪನಿಗೆ ತಕ್ಕ ಮಗಳು

66ರ ಹರೆಯದ ಬಿಲ್ ಗೇಟ್ಸ್  2022 ಕ್ಕೆ ಹೋಗುವ ಮುನ್ನ  ನಾಲ್ಕು ವಿಷಯಗಳ ಆಯ್ಕೆ ಮಾಡಿಕೊಂಡಿದ್ದಾರೆ. “ಇದು [2021] ಮುಕ್ತಾಯವಾಗುತ್ತಿದ್ದಂತೆ, ನಾನು 2022 ಕ್ಕೆ ಹೋಗುವ ಮುನ್ನ ನನ್ನ ಮನಸ್ಸಿನಲ್ಲಿರುವ ನಾಲ್ಕು ವಿಷಯಗಳ ಬಗ್ಗೆ ಕುಳಿತು ಬರೆಯಲು ಬಯಸುತ್ತೇನೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು (Covid 19 Pandemic) ಕೊನೆಗೊಳಿಸುವಲ್ಲಿ ಇತ್ತೀಚಿನ ಪ್ರಗತಿ, ಸಂಸ್ಥೆಗಳ ಮೇಲಿನ ನಂಬಿಕೆ ಕಡಿಮೆಯಾಗಿ ನಿರ್ಮಾಣವಾಗಿರುವ ಅಡೆತಡೆಗಳು, ಹವಾಮಾನ ಬದಲಾವಣೆ (Climate Change) ನಮಗೆ ಕಲಿಸುತ್ತಿರುವ ಪಾಠ ಮತ್ತು ಕೊರೋನಾ ಸಾಂಕ್ರಾಮಿಕದಿಂದಾದ ತ್ವರಿತ ಡಿಜಿಟಲೀಕರಣವು (Digitization) ನಮ್ಮ ಭವಿಷ್ಯವನ್ನು ಹೇಗೆ ರೂಪಿಸುತ್ತದೆ"  ಎಂದು ಈ ನಾಲ್ಕು ವಿಷಯಗಳ ಬಗ್ಗೆ  ಅವರು ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಶತಮಾನದ ದಾನಿ: ಬಿಲ್‌ಗೇಟ್ಸ್‌ ಹಿಂದಿಕ್ಕಿದ ಹೆಮ್ಮೆಯ ಭಾರತೀಯ ಜಮ್‍ಸೆಟ್‍ಜಿ ಟಾಟಾ!

"ಇತರ ಕ್ಷೇತ್ರಗಳಲ್ಲಿ ನನ್ನ ಕೊಡುಗೆಯು ಈ ವರ್ಷಗಳಲ್ಲಿ ಬೆಳೆದಿದ್ದರೂ ಸಹ  ನನ್ನ ಮುಖ್ಯ ಉದ್ದೇಶ ಸಾಮಾಜಿಕ ಸೇವೆಯಾಗಿದೆ. ಪ್ರಾಥಮಿಕವಾಗಿ ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ ಮತ್ತು ಆಲ್ಝೈಮರ್ನ ಕಾಯಿಲೆಯನ್ನು (Alzheimer’s disease) ನಿಭಾಯಿಸುವಲ್ಲಿ" ಎಂದು  ಗೇಟ್ಸ್ ತಮ್ಮ ಹೊಸ ಗಿವಿಂಗ್ ಪ್ಲೆಡ್ಜ್ನಲ್ಲಿ (Giving Pledge,) ಹೇಳಿದ್ದಾರೆ.  ಗಿವಿಂಗ್ ಪ್ಲೆಡ್ಜ್ ಎಂಬುದು ಪ್ರಪಂಚದ  ಶ್ರೀಮಂತ ಜನರು ಮತ್ತು ಕುಟುಂಬಗಳು ತಮ್ಮ ಹೆಚ್ಚಿನ ಸಂಪತ್ತನ್ನು ದಾನವಾಗಿ ನೀಡಲು ಮಾಡುವ ಪ್ರತಿಜ್ಞೆಯಾಗಿದೆ.

ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್!

ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್ ಅವರು 2000 ರಲ್ಲಿ ಸಂಸ್ಥೆಯನ್ನು ಸ್ಥಾಪಿಸಿದರು. ಅಂದಿನಿಂದ, ಪ್ರಪಂಚದಾದ್ಯಂತ ಬಡತನ, ರೋಗ ಮತ್ತು ಅಸಮಾನತೆಯ ವಿರುದ್ಧ ಹೋರಾಡಲು ವಾರ್ಷಿಕವಾಗಿ $5bn ಖರ್ಚು ಮಾಡುವ ವಿಶ್ವದ ಅತ್ಯಂತ ಪ್ರಭಾವಶಾಲಿ ಲಾಭರಹಿತ  ಸಂಸ್ಥೆಗಳಲ್ಲಿ (Non Profit Organisation) ಇದು ಒಂದಾಗಿದೆ. ಪ್ರತಿಷ್ಠಾನವು ಪ್ರಾರಂಭದಿಂದ $54.8bn ಖರ್ಚು ಮಾಡಿದೆ ಎಂದು ಹೇಳುತ್ತದೆ. 

ಕಳೆದ ವರ್ಷ, ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಸಹಾಯ ಮಾಡಲು ಸುಮಾರು $250 ಮಿಲಿಯನ್ ಹಣ ಖರ್ಚು ಮಾಡುವುದಾಗಿ ವಾಗ್ದಾನ ಮಾಡಿತ್ತು. ಈ ಯೋಜನೆಯಡಿ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ಭಾಗಗಳಿಗೆ ಕೋವಿಡ್ -19 ಲಸಿಕೆಗಳ ಜೀವ ಉಳಿಸುವ ಡೋಸ್‌ಗಳ ವಿತರಣೆಗೆ  ಹಣ ರವಾನಿಸಲಾಗಿದೆ."ಕೋವಿಡ್ -19 ಬಗ್ಗೆ ಹೆಚ್ಚಿನ ಗಮನಹರಿಸಿದ್ದರೂ, ಸಂಸ್ಥೆಯು ಇತರ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಲೇ ಇದೆ" ಎಂದು  ಗೇಟ್ಸ್ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Follow Us:
Download App:
  • android
  • ios