ನಿಮ್ಮ ಮೊಬೈಲ್‌ನೊಂದಿಗೆ ಈ 15 ತುಂಟಾಟ ಮಾಡಲೇಬೇಡಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 9:12 PM IST
15 things you should avoid doing with your smartphones
Highlights

ಇಂದು ಯಾರ ಬಳಿ ಸ್ಮಾರ್ಟ್ ಫೋನ್ ಇಲ್ಲ ಹೇಳಿ... ಅದರಲ್ಲೂ ನಗರವಾಸಿಗಳ ಕೈಯಲ್ಲಿ ಸ್ಮಾರ್ಟ್ ಫೋನ್ ಇಲ್ಲ ಎಂದರೆ ಉಸಿರೇ ಇಲ್ಲ..! ಮಲಗುವಾಗ ಮೊಬೈಲ್, ತಿಂಡಿ ತಿನ್ನುವಾಗ ಮೊಬೈಲ್, ಊಟ ಮಾಡುವಾಗ ಮೊಬೈಲ್ ಅಷ್ಟೆ ಏಕೆ ಟಾಯ್ಲೆಟ್ ಗೆ ಓಡುವಾಗಲೂ ಮೊಬೈಲ್ ಬೇಕೆ ಬೇಕು...

ಅಂಗೈ ಅಗಲದ ಈ ಮಾಯಾ ಪೆಟ್ಟಿಗೆ ಪ್ರಪಂಚವನ್ನೇ ಕಣ್ಣ ಮುಂದೆ ತೆರೆದಿಟ್ಟು ಬಹಳ ಕಾಲವಾಯಿತು. ಹಾಗಾದರೆ ನಿಮ್ಮ ಮೊಬೈಲ್ ಹೇಗೆ ಬಳಕೆ ಮಾಡುತ್ತಿದ್ದೀರಿ? ಎಂಬ ಪ್ರಶ್ನೆಯನ್ನು ಇದೊಂದಿಗೆ ಕೇಳಬೇಕು ಅಥವಾ ನಿಮಗೆ ನೀವೆ ಕೇಳಿಕೊಳ್ಳಬೇಕು.. ಅದಕ್ಕೆ ಉತ್ತರ ಇಲ್ಲಿದೆ.

ಹೌದು.. ನಿಮ್ಮ ಸ್ಮಾರ್ಟ್ ಫೋನ್ ಅನ್ನು ನಿಮ್ಮ ಮಗುವಿನಂತೆ ಕಾಪಾಡಿಕೊಳ್ಳಿ.. ಅದರಲ್ಲೂ ಈ ಕೆಳಗಿನ 15 ಕೆಲಸ ಮಾಡಿ ಚೆಲ್ಲಾಟ ಆಡಲು ಹೋಗಲೇಬೇಡಿ.. ಇದು ಬರೀ ಸಲಹೆಯಲ್ಲ ಗಂಭೀರ ಎಚ್ಚರಿಕೆ..

ಐ ಫೋನ್ ಹೋಲುವ ಬೆಸ್ಟ್ ಫೋನ್ ಗಳಿವು

1. ಓವರ್ ಚಾರ್ಜ್ ಬೇಡ: ಒಮ್ಮೆ ಚಾರ್ಜಿಗೆ ಹಾಕಿದ ಮೊಬೈಲ್ ನ್ನು ನಿರ್ದಿಷ್ಟ ಅವಧಿಗೆ ತೆಗೆಯಿರಿ. ಯಾವ ಕಾರಣಕ್ಕೂ ಓವರ್ ಚಾರ್ಜ್ ಮಾಡಬೇಡಿ. ಇದು ಮೊಬೈಲ್ ಬಾಳಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು.

2. ಎದುರಿನ ಜೇಬಿನಲ್ಲಿ ಇಡಬೇಡಿ: ಯಾವ ಕಾರಣಕ್ಕೂ ಮೊಬೈಲ್ ನ್ನು ನಿಮ್ಮ ಅಂಗಿಯ ಜೇಬಿನಲ್ಲಿ ಇರಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಡಿ. ಆರೋಗ್ಯ ಹದಗೆಡಲು ನೀವೇ ಆಹ್ವಾನ ನೀಡುವುದು ತಪ್ಪುತ್ತದೆ.

3. ಚಾರ್ಜಿಗೆ ಹಾಕಿದಾಗ ಇಯರ್ ಫೋನ್ ಹಾಕಬೇಡಿ: ಚಾರ್ಜಿಗೆ ಹಾಕಿದ ಸಂದರ್ಭದಲ್ಲಿಯೇ ಇಯರ್ ಫೋನ್ ಹಾಕಿದರೆ ವಿದ್ಯುತ್ ಅಪಘಾತಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು.

4. ಮೊಬೈಲ್ ಹತ್ತಿರ ಇಟ್ಟು ನಿದ್ರೆ ಮಲುಗಬೇಡಿ: ನಿಮ್ಮ ಜತೆಗೆ ಮೊಬೈಲ್ ಮಲಗಿಸಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಮೆದುಳಿನ ಮೇಲೆ ಸಿಗ್ನಲ್ ಗಳು ಕೆಟ್ಟ ಪರಿಣಾಮ ಉಂಟುಮಾಡಬಹುದು.

5. ಸೂರ್ಯನ ಬೆಳಕಿಗೆ ನೇರವಾಗಿ ತೆರೆದಿಡಬೇಡಿ: ಚಾರ್ಜ್ ಹಾಕಿದಾಗ ಮೊಬೈಲ್ ನ್ನು ಸೂರ್ಯನ ಬೆಳಕಿಗೆ ನೇರವಾಗಿ ತೆರೆದಿಡುವ ಹುಚ್ಚು ಸಾಹಸ ಬೇಡ. ಅದರಲ್ಲೂ ಕಾರ್ ಡ್ಯಾಶ್ ಬೋರ್ಡ್ ನಲ್ಲಿ ಇಂಥ ಎಡವಟ್ಟು ಮಾಡುವ ಸಾಧ್ಯತೆ ಹೆಚ್ಚು.

ಒನ್ ಪ್ಲಸ್‌ನಿಂದ ಎಲ್ಲರನ್ನೂ ಬೀಟ್ ಮಾಡುವ ಸ್ಮಾರ್ಟ್‌ಫೋನ್

6. ಚಾರ್ಜ್ ಹಾಕುವ ವಿಧಾನ ಹೇಗೆ? ಮೊಬೖಲ್ ನ್ನು ಸಮತಲವಾಗಿಟ್ಟು ಜಾರ್ಜ್ ಹಾಕಬೇಕು. ಅದನ್ನು ಬಿಟ್ಟು ಹೇಗೇಗೊ ಚಾರ್ಜ್ ಹಾಕಿದರೆ ನಷ್ಟ ನಿಮಗೆನೆ.

7. ಒತ್ತಡ ಹಾಕಬೇಡಿ: ನಿಮ್ಮ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡ ಮೊಬೖಲ್ ಗೆ ಒತ್ತಡ ಹಾಕಬೇಡಿ. ಬೈಕ್ ಚಾಲನೆ ಮಾಡಿಕೊಂಡು ತೆರಳುವಾಗ ಎಚ್ಚರ ವಹಿಸುವುದು ಒಳಿತು.

8. ಮಲ್ಟಿ ಪ್ಲಗ್ ಜಾರ್ಜ್ ಬೇಡ: ಎಲ್ಲೆಂದರಲ್ಲಿ, ಸಿಕ್ಕ ಸಿಕ್ಕ ಕಡೆ ಚಾರ್ಜ್ ಹಾಕುವ ಅಥವಾ ಮಲ್ಟಿ ಪ್ಲಗ್ ಗೆ ಸಿಕ್ಕಿಸುವ ಅಭ್ಯಾಸ ಬದಲಿಸಿಕೊಳ್ಳಿ.

9. ಗೊತ್ತಿರದ ಅಂಗಡಿಗೆ ದುರಸ್ತಿ ಕೊಟ್ಟರೆ ಅಷ್ಟೆ: ನಿಮ್ಮ ಮೊಬೈಲ್ ನ್ನು ಸಂಬಂಧಿಸಿದ ಕಂಪನಿಯ ಶಾಪ್ ಗೆ ಅಥವಾ ಸರ್ವೀಸ್ ಸೆಂಟರ್ ಗೆ ದುರಸ್ತಿಗೆ ನೀಡಿ.

10.ಕಳಪೆ ಅಡಾಫ್ಟರ್ ಬೇಡ: ಕಳಪೆ ದರ್ಜೆಯ ಅಡಾಫ್ಟರ್ ಬಳಕೆ ಮಾಡಿದರೆ ನಿಮ್ಮ ಮೊಬೈಲ್ ಗೆ ನೀವೆ ಅಪಾಯ ತಂದುಕೊಂಡಂತೆ.

11. ಚಾರ್ಜ್ ಮಾಡುವಾಗ ಹೊರ ಕವಚ ಬೇಡ:  ಚಾರ್ಜ್ ಮಾಡುವ ವೇಳೆ ಸಾಧ್ಯವಾದರೆ ಹೊರಗಿನ ಪ್ಯಾನಲ್ ತೆಗೆಯುವುದು ಒಳಿತು.

12. ಚಾರ್ಜ್ ಹಾಕಿ ಮಾತು ಬೇಡ: ಮೊಬೈಲ್ ಚಾರ್ಜ್ ಹಾಕಿಕೊಂಡು ಮಾತನಾಡುವ ಮತ್ತು ಗೇಮ್ಸ್ ಆಡುವ ಚಟ ಬಿಟ್ಟುಬಿಡಿ.

13. ಡೌನ್ ಲೋಡ್ ಎಚ್ಚರ: ಯಾವುದೋ ಗೊತ್ತಿಲ್ಲದ ಪ್ಲೇ ಸ್ಟೋರ್ ಅಥವಾ ಸೋರ್ಸ್ ಗಳಿಂದ ಅಪ್ಲಿಕೇಶನ್ ಡೌನ್ ಲೋಡ್ ಸಾಹಸ ಬೇಡ.

14. ಒದ್ದೆಯಾಗಿದ್ದರೆ ಚಾರ್ಜಿಂಗ್ ಬೇಡ: ಮಳೆ ಮತ್ತಿತರ ಕಾರಣಕ್ಕೆ ಮೊಬೈಲ್ ಗೆ ನೀರು ತಾಕಿದ್ದರೆ ಆ ಸಂದರ್ಭದಲ್ಲಿ ಚಾರ್ಜ್ ಗೆ ಹಾಕುವ ಸಾಹಸ ಮಾಡಬೇಡಿ.

15. ಅಲ್ ಲಾಕ್ ಇದ್ದಾಗಲೇ ಜೇಬಿಗಿಳಿಸಬೇಡಿ: ಮೊಬೈಲ್ ಲಾಕ್ ಮಾಡಿ ಜೇಬಿಗಿಳಿಸುವ ಅಥವಾ ಬೇರೆಡೆ ಇಡುವ ಅಭ್ಯಾಸ ಮಾಡಿಕೊಳ್ಳಿ.. ಇಲ್ಲವಾದರೆ ನಿಮ್ಮ ವೈಯಕ್ತಿಕ ಮಾಹಿತಿ ಕಳ್ಳತನವಾಗಬಹುದು ಎಚ್ಚರ.

 

loader