ಗೂಗಲ್ ಅಥವಾ ಮೆಟಾ; ವೇತನ, ಜೀವನ, ಉತ್ತಮ ಕೆಲಸದ ಪರಿಸರಕ್ಕೆ ಯಾವ ಟೆಕ್ ಕಂಪನಿ ಉತ್ತಮ?

ಟೆಕ್ ಕಂಪನಿಗಳು ಹೆಚ್ಚು ವೇತನದ ಕೆಲಸ, ಸೌಲಭ್ಯ, ಉತ್ತಮ ಪರಿಸರ, ವಾತಾವರಣವನ್ನು ಉದ್ಯೋಗಿಗಳಿಗೆ ಒದಗಿಸುತ್ತದೆ. ಈ ಪೈಕಿ ಗೂಗಲ್ ಹಾಗೂ ಮೆಟಾ ಎರಡು ದಿಗ್ಗಜ ಟೆಕ್ ಕಂಪನಿಗಳಲ್ಲಿ ಯಾವುದು ಉತ್ತಮ? ಎರಡೂ ಕಂಪನಿಯಲ್ಲಿ ಕೆಲಸದ ಮಾಡಿ ಅನುಭವಿ ಉದ್ಯೋಗಿ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ.
 

Meta or Google Which tech company best for employee experienced employee Daniel McKinnon reveals work nature ckm

ಟೆಕ್ ಕಂಪನಿಗಳ ತಮ್ಮ ಉದ್ಯೋಗಿಗಳಿಗೆ ಉತ್ತಮ ವೇತನ, ಅಷ್ಟೇ ಉತ್ತಮವಾದ ಕೆಲಸದ ವಾತಾವರಣ ಒದಗಿಸುತ್ತದೆ. ಜೊತೆಗೆ ವೇತನ ಹೆಚ್ಚಳ, ಇತರ ಭತ್ಯೆ ಸೇರಿದಂತೆ ಹಲುವ ಸೌಲಭ್ಯಗಳು, ವಾರಾಂತ್ಯದಲ್ಲಿ ರಜೆ ಸೇರಿದಂತೆ ಕೆಲ ಟೆಕ್ ಪ್ರವೈಟ್ ಲಿಮಿಟೆಡ್ ನಿಯಮಾನುಸಾರ ಸೌಲಭ್ಯಗಳು ಉದ್ಯೋಗಿಗಳಿಗೆ ಸಿಗಲಿದೆ. ಈ ಪೈಕಿ ಗೂಗಲ್ ಹಾಗೂ ಮೆಟಾ ವಿಶ್ವದ ಅತೀ ದೊಡ್ಡ ಟೆಕ್ ಕಂಪನಿಗಳಾಗಿ ಗುರುತಿಸಿಕೊಂಡಿದೆ. ಕೆಲಸ ಮಾಡಲು ಈ ಎರಡು ಕಂಪನಿಯಲ್ಲಿ ಯಾವುದು ಉತ್ತಮ ಅನ್ನೋದನ್ನು ಸದ್ಯ ಮೆಟಾದಲ್ಲಿ ಕೆಲಸ ಮಾಡುತ್ತಿರುವ ಗೂಗಲ್ ಮಾಜಿ ಉದ್ಯೋಗಿ ಡೇನಿಯಲ್ ಮೆಕ್‌ಕಿನೋನ್ ಬಹಿರಂಗಪಡಿಸಿದ್ದಾರೆ.

ಡೇನಿಯಲ್ ಪ್ರಕಾರ, ಎರಡೂ ಕಂಪನಿ ಉತ್ಯಮತ್ತ ಕೆಲಸದ ವಾತಾವರಣವನ್ನು, ಅವಕಾಶವನ್ನು ಒದಗಿಸುತ್ತದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ಯಾರು ವೃತ್ತಿಪರದಲ್ಲಿ ತಕ್ಷಣದ ಬೆಳವಣಿಗೆ, ತ್ವರಿತ ಪ್ರಗತಿ ಬಯಸಿದವರಿಗೆ ಮೆಟಾ ಹೆಚ್ಚು ಸೂಕ್ತವಾಗಲಿದೆ. ಆದರೆ ಉದ್ಯೋಗ ಭದ್ರತೆ, ವೈಯುಕ್ತಿಕ ಬದುಕು ಹಾಗೂ ವೃತ್ತಿಯ ಸಮತೋಲನ, ಸ್ಥಿರತ ಬಯಸಿದ ಉದ್ಯೋಗಿಗಳು ಗೂಗಲ್ ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಸೂಕ್ತ ಎಂದು ಡೇನಿಯಲ್ ಹೇಳಿದ್ದಾರೆ.

ಗೂಗಲ್ ಸಿಇಒ ಸುಂದರ್ ಪಿಚೈ ಬೆಸ್ಟ್ ವರ್ಕ್ ಪಾರ್ಟ್ನರ್ ಇವರೇ ನೋಡಿ!

ಡೇನಿಯಲ್ ಮೆಟಾ ಹಾಗೂ ಗೂಗಲ್ ಕಂಪನಿ ಎರಡಲ್ಲೂ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದಾರೆ. ಹೀಗಾಗಿ ಎರಡೂ ಕಂಪನಿಯಲ್ಲಿನ ವ್ಯತ್ಯಾಸಗಳು, ಕೆಲಸದ ರೀತಿ, ಸಿಸ್ಟಮ್ ಕುರಿತು ಮಾಹಿತಿ ನೀಡಿದ್ದಾರೆ. ಮೆಟಾದಲ್ಲಿ ಪ್ರಮಖರ ಜೊತೆ ಮಾರ್ಕ್ ಜುಕರ್‌ಬರ್ಗ್ ಸಂವಾದ ನಡೆಸುತ್ತಾರೆ.  ಇತ್ತ ಗೂಗಲ್ ಸಂವಾದ, ಪ್ರತಿಕ್ರಿಯೆಗಳಿಗಿಂತ ವೃತ್ತಿಪರ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಗೂಗಲ್ ಪ್ರಮುಖವಾಗಿ ಇಮೇಲ್ ಹಾಗೂ ಚಾಟ್ಸ್ ಮೂಲಕ ಸಂವಹನ ನಡೆಸುತ್ತದೆ.

ಮೆಟಾ ಹಾಗೂ ಗೂಗಲ್ ಉದ್ಯೋಗ ಕಡಿತದಲ್ಲಿ ಒಂದೇ ರೀತಿಯ ನಿಯಮ ಪಾಲಿಸುತ್ತದೆ. ಕೆಲ ಪ್ರಾಜೆಕ್ಟ್‌ಗಳನ್ನು ಅಂತ್ಯಗೊಳಿಸುವ ಮೂಲಕ ಉದ್ಯೋಗ ಕಡಿತ ಮಾಡಿದೆ. ಎರಡೂ ದಿಗ್ಗಜ ಕಂಪನಿಗಳಲ್ಲಿ ಕೆಲಸದ ವಾತಾವರಣ ಉತ್ತಮಿದೆ. ಅರ್ಹತೆ, ಜವಾಬ್ದಾರಿಗೆ ತಕ್ಕಂತೆ ವೇತನಗಳನ್ನು ನೀಡುತ್ತದೆ ಎಂದು ಡೇನಿಯಲ್ ಹೇಳಿದ್ದಾರೆ.

ಗೂಗಲ್‌ನಲ್ಲಿ 20 ವರ್ಷ ಪೂರೈಸಿದ ಸುಂದರ್ ಪಿಚೈ, ಈ ಅವಧಿಯಲ್ಲಿ ಒಂದು ಮಾತ್ರ ಬದಲಾಗಿಲ್ಲ ಎಂದ ಸಿಇಒ!
 

Latest Videos
Follow Us:
Download App:
  • android
  • ios