ಟ್ವಿಟರ್ ಮಾರಿದ, ಬ್ಲೂಸ್ಕೈನಿಂದ ಜಾರಿದ; ಜ್ಯಾಕ್ ಡೊರ್ಸೆ ರಾಜೀನಾಮೆಯಿಂದ ಕಂಪನಿ ಕಂಗಾಲು!
ಟ್ವಿಟರ್ ಸಂಸ್ಥಾಪಕ ಡ್ಯಾಕ್ ಡೊರ್ಸೆ ಮತ್ತೊಮ್ಮೆ ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದಾರೆ. ಟ್ವಿಟರ್ ಮಾರಾಟದ ಬಳಿ ಬ್ಲೂಸ್ಕೈ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದ ಜ್ಯಾಕ್ ಇದೀಗ ಕಂಪನಿ ಮಂಡಳಿಯಿಂದ ದಿಢೀರ್ ರಾಜೀನಾಮೆ ನೀಡಿದ್ದಾರೆ. ಜ್ಯಾಕ್ ನಿರ್ಧಾರಕ್ಕೆ ಬ್ಲೂಸ್ಕೈ ಕಂಗಾಲಾಗಿದೆ.
ನ್ಯೂಯಾರ್ಕ್(ಮೇ.06) ಟ್ವಿಟರ್ ಸಂಸ್ಥೆ ಹುಟ್ಟುಹಾಕಿ ವಿಶ್ವದ ಅತೀ ದೊಡ್ಡ ಸಾಮಾಜಿಕ ಮಾಧ್ಯಮವನ್ನಾಗಿಸಿದ ಹೆಗ್ಗಳಿಕೆ ಜ್ಯಾಕ್ ಡೋರ್ಸ್‌ಗೆ ಸಲ್ಲಲಿದೆ. ಆದರೆ ದಿಢೀರ್ ಟ್ವಿಟರ್ ಸಂಸ್ಥೆಯನ್ನೇ ಮಾರಾಟ ಮಾಡಿದ್ದ ಜ್ಯಾಕ್ ಡೋರ್ಸೆ ನಿರ್ಧಾರ ಅಚ್ಚರಿಗೆ ಕಾರಣವಾಗಿತ್ತು. ಟ್ವಿಟರ್ ಬಳಿಕ ಬ್ಲೂಸ್ಕೈ ಅನ್ನೋ ಸಾಮಾಜಿಕ ಮಾಧ್ಯಮ ಸಂಸ್ಥೆ ಆರಂಭಿಸಲಾಗಿತ್ತು. ಈ ಸಂಸ್ಥೆಯ ಸಹ ಸಂಸ್ಥಾಪಕರಾಗಿರುವ ಜ್ಯಾಕ್ ಡೋರ್ಸೆ ಇದೀಗ ಮತ್ತೊಂದು ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದಾರೆ. ಬ್ಲೂಸ್ಕೈ ಸಂಸ್ಥೆಯ ಬೋರ್ಡ್ ಸದಸ್ಯತ್ವಕ್ಕೆ ಜ್ಯಾಕ್ ಡೋರ್ಸೆ ರಾಜೀನಾಮೆ ನೀಡಿದ್ದಾರೆ. ಡೊರ್ಸೆ ನಿರ್ಧಾರದಿಂದ ಕಂಪನಿ ಕಂಗಾಲಾಗಿದೆ.
ಜ್ಯಾಕ್ ಡೊರ್ಸೆ ಬೋರ್ಡ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ, ಇದೀಗ ಬ್ಲೂಸ್ಕೈ ಕಂಪನಿ ಹೊಸ ಹಾಗೂ ಸಮರ್ಥ ಸದಸ್ಯರ ಹುಡುಕಾಟದಲ್ಲಿದೆ. ಶೀಘ್ರದಲ್ಲೇ ಹೊಸ ಸದಸ್ಯರು ನಮ್ಮ ತಂಡ ಸೇರಿಕೊಳ್ಳಲಿದ್ದಾರೆ. ಈ ಮೂಲಕ ಸಾಮಾಜಿಕ ಮಾಧ್ಯಮ ಸಂಸ್ಥೆಯ ಬದ್ಧತೆಯಲ್ಲಿ ಯಾವುದೇ ರಾಜೀಯಾಗಲ್ಲ ಎಂದು ಬ್ಲೂಸ್ಕೈ ಹೇಳಿದೆ.
ಟ್ವಿಟರ್‌ನ ಟ್ರ್ಯಾಕ್‌ರೆಕಾರ್ಡ್ ಸಂಶಯಾಸ್ಪದ, ಎಷ್ಟು ಮುಖ್ಯವಾಗುತ್ತದೆ ಜಾಕ್ ಡೋರ್ಸೆ ಅಭಿಪ್ರಾಯ?
ಟ್ವಿಟರ್ ಸಂಸ್ಥೆಯನ್ನು ಎಲಾನ್ ಮಸ್ಕ್ ಖರೀದಿಸಿದ ಬಳಿಕ ಇದೀಗ ಎಕ್ಸ್ ಆಗಿ ಬದಲಾಗಿದೆ. ಆದರೆ ಟ್ವಿಟರ್ ಸಂಸ್ಥೆ ಹುಟ್ಟುಹಾಕಿ ವಿಶ್ವಾದ್ಯಂತ ಅತೀ ದೊಡ್ಡ ಸೋಶಿಯಲ್ ಮೀಡಿಯಾ ಸ್ಥಾನ ತಂದುಕೊಟ್ಟ ಕೀರ್ತಿ ಜ್ಯಾಕ್ ಡೊರ್ಸೆಗೆ ಸಲ್ಲಲಿದೆ. ಆದರೆ ಟ್ವಿಟರ್ ಮಾರಾಟಕ್ಕೂ ಮೊದಲೇ ಡೊರ್ಸೆ, ಟ್ವಿಟರ್‌ಗೆ ಪರ್ಯಾಯವಾಗಿ ಬ್ಲೂಸ್ಕೈ ಅನ್ನೋ ಸಂಸ್ಥೆ ಹುಟ್ಟು ಹಾಕಿದ್ದರು. ಸಹ ಸಂಸ್ಥಾಪಕರಾಗಿ ಸಂಸ್ಥೆಯನ್ನು ಒಂದೇ ವರ್ಷದಲ್ಲಿ ಕಟ್ಟಿ ಬೆಳಸಿದ್ದಾರೆ.2023ರ ನವೆಂಬರ್ ತಿಂಗಳಲ್ಲಿ ಬ್ಲೂಸ್ಕೈ 2 ಮಿಲಿಯನ್ ಬಳಕೆದಾರರನ್ನು ದಾಟಿತ್ತು.
ಬ್ಲೂಸ್ಕೈ ವಿಕೇಂದ್ರಿತ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. 2022ರಲ್ಲಿ ಬ್ಲೂಸ್ಕೈ 12 ಮಿಲಿಯನ್ ಅಮೆರಿಕನ್ ಡಾಲರ್ ಹಾಗೂ 2023ರಲ್ಲಿ 8 ಮಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಒಪನ್ ಸೋರ್ಸ್ ಸೋಶಿಯಲ್ ಮಿಡಿಯಾ ಜಗತ್ತಿನಲ್ಲಿ ಬ್ಲೂಸ್ಕೈ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆಯುತ್ತಿದೆ. ಈ ಬೆಳೆವಣಿಗೆ ನಡುವೆ ಜ್ಯಾಕ್ ಡೋರ್ಸೆ ನಿರ್ಗಮನ ಕಂಪನಿ ಬೋರ್ಡ್ ಸದಸ್ಯರಲ್ಲಿ ಅಚ್ಚರಿ ತಂದಿತ್ತು.
ಟ್ವಿಟರ್‌ನಲ್ಲಿ ಬ್ಲ್ಯೂಟಿಕ್ ಕಟ್ಟುನಿಟ್ಟಾದ ಬೆನ್ನಲ್ಲೇ, 'ಬ್ಲ್ಯೂಸ್ಕೈ' ಅನಾವರಣ ಮಾಡಿದ ಟ್ವಿಟರ್ ಮಾಜಿ ಸಿಇಒ!
ಜ್ಯಾಕ್ ಡೊರ್ಸೆ ನಿರ್ಗಮನಕ್ಕೆ ಸ್ಪಷ್ಟ ಕಾರಣಗಳು ತಿಳಿದಿಲ್ಲ. ಈ ಕುರಿತು ಡೊರ್ಸೆ ಯಾವುದೇ ಕಾರಣ ನೀಡಿಲ್ಲ. ತಾನು ಬ್ಲೂಸ್ಕೈ ಮಂಡಲಿಯಲ್ಲಿ ಇಲ್ಲ ಅನ್ನೋದನ್ನು ಜ್ಯಾಕ್ ಡೊರ್ಸೆ ಸ್ಪಷ್ಟಪಡಿಸಿದ್ದಾರೆ.