ಇಂದು ಮತ್ತೊಮ್ಮೆ ಸುನೀತಾ ವಿಲಿಯಮ್ಸ್ ಗಗನಯಾತ್ರೆ: ಜೊತೆಗಿರಲಿದೆ ಗಣೇಶನ ವಿಗ್ರಹ, ಭಗವದ್ಗೀತೆ !
ಭಾರತೀಯ ಮೂಲದ ಬಾಹ್ಯಾಕಾಶ ಯಾನಿ ಸುನಿತಾ ವಿಲಿಯಮ್ಸ್, ಇಂದು ಮತ್ತೊಮ್ಮೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿದ್ದಾರೆ. ಇದರ ಜೊತೆಗೆ ಇಂದು ಅಮೆರಿಕದ ಬೋಯಿಂಗ್ ಕಂಪನಿ ತನ್ನ ಸ್ಟಾರ್‌ಲೈನರ್ ನೌಕೆಯನ್ನು ಮೊದಲ ಬಾರಿಗೆ ಉಡ್ಡಯನಕ್ಕೆ ಬಳಸುತ್ತಿದೆ
ವಾಷಿಂಗ್ಟನ್: ಭಾರತೀಯ ಮೂಲದ ಬಾಹ್ಯಾಕಾಶ ಯಾನಿ ಸುನಿತಾ ವಿಲಿಯಮ್ಸ್, ಇಂದು ಮತ್ತೊಮ್ಮೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿದ್ದಾರೆ. ಇದರ ಜೊತೆಗೆ ಇಂದು ಅಮೆರಿಕದ ಬೋಯಿಂಗ್ ಕಂಪನಿ ತನ್ನ ಸ್ಟಾರ್‌ಲೈನರ್ ನೌಕೆಯನ್ನು ಮೊದಲ ಬಾರಿಗೆ ಉಡ್ಡಯನಕ್ಕೆ ಬಳಸುತ್ತಿದೆ ಎಂಬುದು ವಿಶೇಷ. 2006 ಮತ್ತು 2012ರಲ್ಲಿ 2 ಬಾರಿ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಅಲ್ಲಿ ವಿವಿಧ ಸಂಶೋಧನೆ ಕೈಗೊಂಡಿದ್ದ ಸುನಿತಾ, ಇದೀಗ ನಾಸಾದ ಮತ್ತೊಂದು ತಂಡದ ಭಾಗವಾಗಿ ತೆರಳುತ್ತಿದ್ದಾರೆ. ಸುನಿತಾ ಜತೆ ಇನ್ನೊಬ್ಬ ಗಗನಯಾನಿ ಬುಚ್ ವಿಲ್‌ಮೋರ್ ಕೂಡ ಪಯಣಿಸಲಿದ್ದಾರೆ.
ಹಾಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾದ ಬಳಿ ಯಾವುದೇ ಉಡ್ಡಯನ ನೌಕೆ ಇಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲು ಅದು ರಷ್ಯಾದ ಗಗನನೌಕೆ ಬಳಸಬೇಕು, ಇಲ್ಲವೇ ಅಮೆರಿಕದ ಸ್ಪೇಸ್ ಎಕ್ಸ್ ಸಂಸ್ಥೆಯ ನೌಕೆಯನ್ನು ಅವಲಂಬಿಸಬೇಕು. ಇದೀಗ ಬೋಯಿಂಗ್ ಕೂಡಾ ತನ್ನ ನೌಕೆಯನ್ನು ಉಡ್ಡಯನಕ್ಕೆ ಸಿದ್ಧಪಡಿಸಿರುವ ಹಿನ್ನೆಲೆಯಲ್ಲಿ ಅಮೆರಿಕದ ಬಾಹ್ಯಾಕಾಶ ಯಾನಿಗಳಿಗೆ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲು ಮತ್ತೊಂದು ನೌಕೆ ಸಿಕ್ಕಂತಾಗಿದೆ. ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 8.04ಕ್ಕೆ ನೌಕೆ ಉಡ್ಡಯನ ಕೈಗೊಳ್ಳಲಿದೆ.
ಚಂದ್ರನಲ್ಲಿ ನೆಲೆನಿಂತ ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಹೊಸ ಚಿತ್ರ ಪ್ರಕಟ!
ಸುನಿತಾ ಜತೆ ಭಗವದ್ಗೀತೆ, ಗಣೇಶನ ವಿಗ್ರಹ!
ಬಾಹ್ಯಾಕಾಶ ಯಾನ ಕೈಗೊಳ್ಳುವ ವೇಳೆ ಭಗವದ್ಗೀತೆ ಹಾಗೂ ಗಣೇಶನ ವಿಗ್ರಹವನ್ನು ಸುನಿತಾ ವಿಲಿಯಮ್ಸ್ ಕೊಂಡೊಯ್ಯಲಿದ್ದಾರೆ.
ದೆಹಲಿ ಯುವತಿಯ ಜೀವ ಉಳಿಸಿದ ಆ್ಯಪಲ್ ವಾಚ್, ಸ್ನೇಹಾಗೆ ಸಿಇಒ ಕುಕ್ ಪ್ರತಿಕ್ರಿಯೆ!