ಒನ್ ಪ್ಲಸ್‌ನಿಂದ ಎಲ್ಲರನ್ನೂ ಬೀಟ್ ಮಾಡುವ ಸ್ಮಾರ್ಟ್‌ಫೋನ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 8:22 PM IST
OnePlus Likely to Launch OnePlus 6T in the Coming Months
Highlights

ಜನರ ಪ್ರೀತಿಗೆ ಪಾತ್ರವಾಗಿರುವ ಒನ್ ಪ್ಲಸ್ ಮತ್ತೊಂದು ಹೊಸ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಹೌದಾ.. ವಿವರಗಳು ಏನು? ಇಲ್ಲಿದೆ ಉತ್ತರ.

ಒನ್ ಪಲ್ಸ್ 6 ಲಾಂಚ್ ಆದಾಗಲೆ ಒನ್ ಪ್ಲಸ್ 6ಟಿ ಲಾಂಚ್ ಮಾಡುವ ಸೂಚನೆಯನ್ನು ನೀಡಿತ್ತು. ಆದರೆ ನಂತರ ಹೆಚ್ಚಿಗೆ ಯಾವ ವಿವರ ಬಿಟ್ಟು ಕೊಟ್ಟಿರಲಿಲ್ಲ.

ಈಗ ಕಂಪನಿ ಹೇಳಿರುವುಂತೆ ಕೆಲವೇ ತಿಂಗಳುಗಳ ಅಂತರದಲ್ಲಿ ಒನ್ ಪ್ಲಸ್ 6 ಟಿ ಲಾಂಚ್ ಆಗಲಿದೆ. ಒನ್ ಪ್ಲಸ್ ಗೆ ಪ್ರಶ್ನೆ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಪ್ರತಿಕ್ರಿಯೆ ನೀಡಿರುವ ಕಂಪನಿ, ನೀವು ಒನ್ ಪ್ಲಸ್ 6 ಟಿಗೆ ಕಾಯುವುದಾದರೆ ಒಂದೆರಡು ತಿಂಗಳು ಕಾಯಿರಿ ಎಂದು ಹೇಳಿದೆ. ಹೊಸ ಫೋನ್ ನಲ್ಲಿರುವ ಹೊಸ ಫೀಚರ್ ಗಳ ಬಗ್ಗೆ ಕಂಪನಿ ಗುಟ್ಟು ಬಿಟ್ಟುಕೊಟ್ಟಿಲ್ಲ.

ಕಳೆದ ಮೇ ತಿಂಗಳಿನಲ್ಲಿ ಒನ್ ಪ್ಲಸ್ 6 ಬಿಡುಗಡೆಯಾಗಿತ್ತು. ಒನ್‌ ಪ್ಲಸ್‌ 5ಟಿಯ ಬಳಿಕ ಒನ್‌ ಪ್ಲಸ್‌ 6 ಬಿಡುಗಡೆಯಾಗಿದ್ದು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಒನ್‌ ಪ್ಲಸ್ 6 ಹಿಂಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದ್ದು, ಐಫೋನ್‌ ಎಕ್ಸ್ ಮಾದರಿಯ ಡಿಸ್‌ಪ್ಲೇ ಹೊಂದಿತ್ತು. ಆದರೆ ಒನ್ ಪ್ಲಸ್ ಕಂಪನಿ ಈ ಮೊದಲಿನಿಂದಲೂ ತನ್ನ ಹೊಸ ಫೋನ್ ಬಿಡುಗಡೆ ಮಾಡಿದಾಗ ಹಿಂದಿನ ಸರಣಿ ಎಷ್ಟೇ ಜನಪ್ರಿಯವಾಗಿದ್ದೂ ಆ ಸರಣಿಯ ಫೋನ್ ತಯಾರಿಕೆ ಬಂದ್ ಮಾಡಿ ಹೊಸದಕ್ಕೆ ಮಾರುಕಟ್ಟೆ ಸೃಷ್ಟಿ ಮಾಡಿಕೊಳ್ಳುತ್ತ ಬಂದಿದೆ.

loader