ಹುಬ್ಬಳ್ಳಿ-ಬೆಂಗಳೂರು ವಿಶೇಷ ರೈಲು. ಬೆಂಗಳೂರು-ವೇಲಂಕಣಿ ಸಾಪ್ತಾಹಿಕ. ಮತ್ತು ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು  ಮತ್ತಷ್ಟು ದಿನಗಳ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ.

ಬೆಂಗಳೂರು (ಸೆ.22): ಬೆಂಗಳೂರು-ಹುಬ್ಬಳ್ಳಿ, ಕೆಎಸ್ಆರ್ ಬೆಂಗಳೂರು-ವೇಲಂಕಣಿ ಹಾಗೂ ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್‌ ರೈಲುಗಳ ಸೇವೆಯನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸಲಾಗಿದೆ.

ಬೆಂಗಳೂರು (ಕೆಎಸ್‌ಆರ್‌ ರೈಲ್ವೆ ನಿಲ್ದಾಣ) ಹಾಗೂ ಹುಬ್ಬಳ್ಳಿ (ಎಸ್‌ಎಸ್‌ಎಸ್‌ ರೈಲ್ವೆ ನಿಲ್ದಾಣ) ನಡುವಿನ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಸೇವೆಯನ್ನು ಈಗಿರುವ ಸಮಯ, ನಿಲುಗಡೆ ಮತ್ತು ಸಂಯೋಜನೆಯೊಂದಿಗೆ ನೈಋತ್ಯ ರೈಲ್ವೆ ವಿಸ್ತರಿಸಿದೆ.

ಹೈದರಾಬಾದ್‌-ಯಶವಂತಪುರ ನಡುವೆ ರಾಜ್ಯದ 3ನೇ ವಂದೇಭಾರತ್‌ ರೈಲು, ಸೆ.24ಕ್ಕೆ ಲೋಕಾರ್ಪಣೆ

ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಕೆಎಸ್ಆರ್ ಬೆಂಗಳೂರು ಡೈಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು (07339) ಸೆ. 30 ರವರೆಗೆ ಓಡಿಸಲು ಮೊದಲು ನಿರ್ಧರಿಸಲಾಗಿತ್ತು. ಅದನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗುತ್ತಿದೆ. ಹಿಂದಿರುಗುವ ಇದೇ ರೈಲು ( 07340) ಅ.1 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ನವೆಂಬರ್ 1 ರವರೆಗೆ ವಿಸ್ತರಿಸಲಾಗುತ್ತಿದೆ.

ಕೆಎಸ್ಆರ್ ಬೆಂಗಳೂರು ಮತ್ತು ವೇಲಂಕಣಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು (06547) ಸೆ. 30 ರವರೆಗೆ ಓಡಿಸಲು ಮೊದಲು ನಿರ್ಧರಿಸಲಾಗಿತ್ತು. ಅದನ್ನು ಅ. 28 ರವರೆಗೆ ವಿಸ್ತರಿಸಲಾಗುತ್ತಿದೆ. ಅದೇ ರೀತಿ ಹಿಂದಿರುಗುವ ಈ ರೈಲನ್ನು (06548) ಸೆ. 30 ರವರೆಗೆ ಓಡಿಸಲು ನಿರ್ಧರಿಸಲಾಗಿತ್ತು. ಇದೀಗ ಅ. 28 ರವರೆಗೆ ವಿಸ್ತರಿಸಲಾಗುತ್ತಿದೆ.

ಬೈಯ್ಯಪ್ಪನಹಳ್ಳಿ- ಕೆ.ಆರ್‌.ಪುರ ಮೆಟ್ರೋ ಮಾರ್ಗದಲ್ಲಿ ಚಲಿಸುವ ಐಟಿ ಉದ್ಯೋಗಿಗಳಿಗೆ ಮತ್ತೆ ನಿರಾಸೆ

ಯಶವಂತಪುರ ಮತ್ತು ವಿಜಯಪುರ ಡೈಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು (06545) ಸೆಪ್ಟೆಂಬರ್ 29 ರವರೆಗೆ ಓಡಿಸಲು ಮೊದಲು ನಿರ್ಧರಿಸಲಾಗಿತ್ತು. ಅದನ್ನು ಡಿ. 31ರವರೆಗೆ ವಿಸ್ತರಿಸಲಾಗುತ್ತಿದೆ. ವಿಜಯಪುರ ಮತ್ತು ಯಶವಂತಪುರ ಡೈಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು (06546) ಸೆ. 30 ರವರೆಗೆ ಓಡಿಸಲು ನಿರ್ಧಾರವಾಗಿತ್ತು. ಈ ರೈಲನ್ನು ಜನವರಿ 1ರವರೆಗೆ ವಿಸ್ತರಿಸಲಾಗುತ್ತಿದೆ.