ನೈಸ್‌ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸುವ ವಿಚಾರಕ್ಕೆ ನಡೆದ ಮಾತಿನ ಚಕಮಕಿ ಸಂಬಂಧ ಮಹಿಳಾ ಬೈಕರ್‌ಗಳು ಹಾಗೂ ಸ್ಥಳೀಯ ನಿವಾಸಿಯೊಬ್ಬರು ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ದೂರು-ಪ್ರತಿದೂರು ನೀಡಿದ್ದಾರೆ.

ಬೆಂಗಳೂರು (ಮಾ.6) : ನೈಸ್‌ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸುವ ವಿಚಾರಕ್ಕೆ ನಡೆದ ಮಾತಿನ ಚಕಮಕಿ ಸಂಬಂಧ ಮಹಿಳಾ ಬೈಕರ್‌ಗಳು ಹಾಗೂ ಸ್ಥಳೀಯ ನಿವಾಸಿಯೊಬ್ಬರು ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ದೂರು-ಪ್ರತಿದೂರು ನೀಡಿದ್ದಾರೆ.

ಶಾರನ್‌(Sharan) ಮತ್ತು ಮಂಜುನಾಥ್‌(Manjunatha) ಎಂಬುವವರು ದೂರು-ಪತ್ರಿದೂರು ನೀಡಿದ್ದಾರೆ. ಭಾನುವಾರ ಶಾರನ್‌ ಹಾಗೂ ಸ್ನೇಹಿತೆಯರು ನೈಸ್‌ ರಸ್ತೆ(NICE road)ಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಒಂಟಿ ಮನೆ ಪ್ರದೇಶದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ನಿಂತಿದ್ದರು. ಈ ವೇಳೆ ಸ್ಥಳೀಯ ನಿವಾಸಿ ಮಂಜುನಾಥ್‌ ಅವರು ಶಾರನ್‌ ಹಾಗೂ ಸ್ನೇಹಿತರು ರಸ್ತೆಯಲ್ಲಿ ನಿಂತಿರುವುದನ್ನು ಪ್ರಶ್ನಿಸಿದ್ದಾರೆ. ಈ ಜಾಗದಿಂದ ತೆರಳುವಂತೆ ಸೂಚಿಸಿದ್ದಾರೆ.

ಮಾಜಿ ಪತಿಗಾಗಿ ಎರಡನೇ ಪತಿ ಮನೆಯಲ್ಲಿಯೇ ದರೋಡೆ, ಲಕ್ಷಾಂತರ ಹಣ-ಚಿನ್ನ ಕದ್ದು ಓಡಿ ಹೋದ ಮಹಿಳೆ!

ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೋಪಗೊಂಡ ಮಂಜುನಾಥ ಶಾರನ್‌ ದ್ವಿಚಕ್ರ ವಾಹನದ ಕೀ ಕಿತ್ತುಕೊಂಡು ಹೋಗಿದ್ದಾರೆ. ಈ ಸಂಭಾಷಣೆ ಹಾಗೂ ಕೀ ಕಿತ್ತುಕೊಂಡು ಹೋಗುವ ವಿಡಿಯೋವನ್ನು ಬೈಕರ್‌ ಪ್ರಿಯಾಂಕಾ ಪ್ರಸಾದ್‌ ಸಾಮಾಜಿಕ ಜಾಲತಾಣ ಇನ್ಸ್‌ಟ್‌ಗ್ರಾಮ್‌ಗೆ ಹಾಕಿದ್ದಾರೆ.

ಮಹಿಳಾ ಬೈಕರ್‌(woman bikers)ಗಳು ನೀರು ಕುಡಿದು ಪ್ಲಾಸ್ಟಿಕ್‌ ಬಾಟಲಿಗಳನ್ನು ರಸ್ತೆ ಪಕ್ಕದ ಮಂಜುನಾಥ ಅವರ ಜಮೀನಿಗೆ ಎಸೆಯುತ್ತಿದ್ದರು. ಆಗ ಮಂಜುನಾಥ ಹಾಗೂ ಅವರ ತಂದೆ ಮುಂದೆ ಹೋಗುವಂತೆ ಬೈಕರ್‌ಗಳಿಗೆ ಸೂಚಿಸಿದರು ಎನ್ನಲಾಗಿದೆ. ಎರಡೂ ಕಡೆಯಿಂದ ದೂರು ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಕೋಣನಕುಂಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

Women's Day: ಅವಳು ಬಹುವಚನ, ಮಹಿಳಾ ದಿನವನ್ನಲ್ಲ, ಮಹಿಳಾತನವನ್ನು ಸಂಭ್ರಮಿಸಬೇಕು

ಬದುಕಿದ್ದಾಗಲೇ ಮರಣ ಪತ್ರ ನೀಡಿರುವ ಭೂಪರು!

ಹಾರೋಹಳ್ಳಿ: ಹಾರೋಹಳ್ಳಿಯಲ್ಲಿ ಮಹಿಳೆಯೊಬ್ಬರು ಬದುಕಿದ್ದಾಗಲೇ ಆಕೆಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರವನ್ನು ವಿತರಿಸಲಾಗಿದ್ದು ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಹಾರೋಹಳ್ಳಿ ಅಡೆ ಬೀದಿ ನಿವಾಸಿ ಎಚ್‌.ಆರ್‌.ರುದ್ರಮ್ಮ 2023ರ ಫೆ.18ರಂದು ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಅಂತಿಮ ವಿಧಿ ವಿಧಾನದ ನಂತರ ಅವರ ಕುಟುಂಬಸ್ಥರು ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಹೆಸರಿನಲ್ಲಿ 2022ರ ಜೂನ್‌ 30ರಂದು ಮರಣ ಪ್ರಮಾಣ ಪತ್ರ ವಿತರಣೆ ಯಾಗಿರುವುದು ಈ ವೇಳೆ ಕಂಡು ಬಂದಿದೆ. ಹಾರೋಹಳ್ಳಿಯ ವೃತ್ತ ಗ್ರಾಮ ಲೆಕ್ಕಾಧಿಕಾರಿ ಹೆಸರಿನಲ್ಲಿ ಈ ಪ್ರಮಾಣ ಪತ್ರವನ್ನು ನೀಡಲಾಗಿದ್ದು ಈ ವಿವರ ಕೇಳಿ ಕುಟುಂಬಸ್ಥರು ದಂಗು ಬಡಿದು ಹೋಗಿದ್ದಾರೆ.