ಮಾಜಿ ಪತಿಗಾಗಿ ಎರಡನೇ ಪತಿ ಮನೆಯಲ್ಲಿಯೇ ದರೋಡೆ, ಲಕ್ಷಾಂತರ ಹಣ-ಚಿನ್ನ ಕದ್ದು ಓಡಿ ಹೋದ ಮಹಿಳೆ!

ಒಂಬತ್ತು ತಿಂಗಳ ಹಿಂದೆ ಸ್ವಂತ ಮನೆಯಲ್ಲಿ ಕಳ್ಳತನ ಮಾಡಿದ್ದ 31 ವರ್ಷದ ಮಹಿಳೆಯನ್ನು  ಮುಂಬೈನ ಕುರಾರ್ ಪೊಲೀಸರು ಬಂಧಿಸಿದ್ದಾರೆ. ಮಾಹಿ ಪತಿಗಾಗಿ ಈಕೆ ಈಗಿನ ಪತಿ ಮನೆಯಿಂದಲೇ ಕದ್ದು ಸಿಕ್ಕಿಬಿದ್ದಿದ್ದಾಳೆ.

Woman commits robbery in her own house run away with ex-husband in Mumbai gow

ಮುಂಬೈ (ಮಾ.5): ಒಂಬತ್ತು ತಿಂಗಳ ಹಿಂದೆ ಸ್ವಂತ ಮನೆಯಲ್ಲಿ ಕಳ್ಳತನ ಮಾಡಿದ್ದ 31 ವರ್ಷದ ಮಹಿಳೆಯನ್ನು  ಮುಂಬೈನ ಕುರಾರ್ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮಹಿಳೆಯ ಪತಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಆಕೆ ತನ್ನ ಮಾಜಿ ಪತಿಯೊಂದಿಗೆ ಸೇರಿ ಈ ದರೋಡೆಗೆ ಯೋಜನೆ ರೂಪಿಸಿ ಪರಾರಿಯಾಗಿದ್ದಳು. ಮಹಿಳೆ ತನ್ನ 43 ವರ್ಷದ ಪತಿಯಿಂದ ಒಟ್ಟು 8.5 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣ ದೋಚಿದ್ದಾಳೆ. ಪೊಲೀಸರು ಬೆರಳಚ್ಚು ಸಹಾಯದಿಂದ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. 

ಮಲಾಡ್ ಪೂರ್ವದಲ್ಲಿರುವ ಓಂಕಾರ್ ಎಸ್‌ಆರ್‌ಎ ಸೊಸೈಟಿಯಲ್ಲಿರುವ ದಂಪತಿಯ ಫ್ಲಾಟ್‌ನಲ್ಲಿ ಈ ಘಟನೆ ನಡೆದಿದೆ. ಮೇ 7, 2022 ರಂದು ದೂರುದಾರರು ಕಾರನ್ನು ಕ್ಲೀನ್ ಮಾಡಲು ಹೊರಟಾಗ ತನ್ನ ಎರಡನೇ ಪತಿಯೊಂದಿಗೆ ಸಂಬಂಧಿಕರನ್ನು ಭೇಟಿಯಾಗಲು ಸಾಂಗ್ಲಿಗೆ ಹೊರಡುವ ಕೆಲವು ಗಂಟೆಗಳ ಮೊದಲು ಪತ್ನಿ ದರೋಡೆ ನಡೆಸಿದ್ದಾಳೆ. ಅವಳು ಸ್ಕ್ರೂಡ್ರೈವರ್‌ನಿಂದ ಲಾಕರ್ ಅನ್ನು ಒಡೆದಳು, ನಂತರ ಒಳಗಿನ ಬಾಗಿಲಿನ ಮುರಿದ ಬೀಗವನ್ನು ಇಟ್ಟು, ಲಾಚ್ ಹೊಂದಿದ್ದ ಹೊರಗಿನ  ಬಾಗಿಲನ್ನು ಮುಚ್ಚಿದಳು ಮತ್ತು ದರೋಡೆ ಮಾಡಿ ಹೋಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೇ 13 ರಂದು  ಹಿಂದಿರುಗಿದಾಗ, ಅವಳು ತಕ್ಷಣ ಯಾವುದೋ ನೆಪದಲ್ಲಿ ಮನೆ ಬಿಟ್ಟು ತೆರಳಿದಳು.

Bengaluru: ಕಸದ ರಾಶಿಗೆ ಎಸೆದ 4-5 ತಿಂಗಳ ಮಗುವಿನ ಮೇಲೆ ವಾಹನ ಹರಿದು ಸಾವು!

ಲಕ್ಷಾಂತರ ನಗದು, ಚಿನ್ನಾಭರಣ ನಾಪತ್ತೆಯಾಗಿದೆ:
ಪತಿ  ಮನೆಗೆ ಬಂದಾಗ 4.57 ಲಕ್ಷ ರೂಪಾಯಿ ನಗದು ಮತ್ತು 3.77 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ತಕ್ಷಣ  ಪೊಲೀಸರಿಗೆ ಮಾಹಿತಿ ನೀಡಿದರು. ಪ್ರಕರಣ ಭೇದಿಸಲು ಡಿಸಿಪಿ (ವಲಯ 12) ಸ್ಮಿತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಹಿರಿಯ ಇನ್ಸ್‌ಪೆಕ್ಟರ್ ಸತೇಶ್ ಗಾವಡೆ, ಎಪಿಐ ಪುಂಕಜ್ ವಾಂಖೆಡೆ ಸೇರಿದಂತೆ ಇತರರನ್ನು ಒಳಗೊಂಡ ತಂಡವನ್ನು ರಚಿಸಲಾಯಿತು. ಸುರಕ್ಷತಾ ಲಾಚ್ ಒಡೆದಿರುವುದನ್ನು ಕಂಡು ತನಿಖಾ ತಂಡಕ್ಕೆ ಅನುಮಾನ ಬಂದಿತ್ತು. ಒಳಗಿನವರನ್ನು ಅನುಮಾನಿಸಿ, ಅಪರಾಧ ಸ್ಥಳದಿಂದ ಬೆರಳಚ್ಚುಗಳನ್ನು ತೆಗೆದುಕೊಂಡರು.

SUVARNA FOCUS: ಮಕ್ಕಳ ಹೆಸರಲ್ಲಿ ಕೋಟಿ ಕೋಟಿ ಆಸ್ತಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಂಪತ್ತಿನ ಸೀಕ್ರೆಟ್..!

ಪುನರ್‌ ಪರಿಶೀಲನೆ ನಡೆಸಿದ ನಂತರ ಪೊಲೀಸರು ದೂರುದಾರರ ಪತ್ನಿಯ ಮೇಲೆ ಅನುಮಾನ ಕೇಂದ್ರೀಕರಿಸಿದ್ದಾರೆ, ಬಳಿಕ ಮಹಿಳೆ  ಅಪರಾಧವನ್ನು ಒಪ್ಪಿಕೊಂಡ ನಂತರ  ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಅವರ 17 ವರ್ಷದ ಮಗನೊಂದಿಗೆ ಮಾಲ್ವಾನಿಯಲ್ಲಿ ವಾಸಿಸುವ ತನ್ನ ಮಾಜಿ ಪತಿ ಕೂಡ ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು. ಈ ಪ್ರಕರಣದಲ್ಲಿ ಈ ಹಿಂದೆಯೂ ನಗದು ಹಾಗೂ ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿರುವುದಾಗಿ ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

Latest Videos
Follow Us:
Download App:
  • android
  • ios