ಜಿಂಕೆ ಕೊಂದು ಭಕ್ಷಿಸಿ, ಕೊಂಬು ಮಾರಲು ಬಂದಿದ್ದವರ ಬಂಧನ
ಕಾಡಂಚಿನ ಹೊಲಗಳಿಗೆ ಮೇಯಲು ಬರುತ್ತಿದ್ದ ಜಿಂಕೆಗಳನ್ನು ಕೊಂದು ಭಕ್ಷಿಸಿ ಬಳಿಕ ಅವುಗಳ ಕೊಂಬು ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಕೃಷಿ ಕೂಲಿ ಕಾರ್ಮಿಕರು ಬೆಂಗಳೂರಿನ ವೈಯಾಲಿಕಾವಲ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು (ನ.8) : ಕಾಡಂಚಿನ ಹೊಲಗಳಿಗೆ ಮೇಯಲು ಬರುತ್ತಿದ್ದ ಜಿಂಕೆಗಳನ್ನು ಕೊಂದು ಭಕ್ಷಿಸಿ ಬಳಿಕ ಅವುಗಳ ಕೊಂಬು ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಕೃಷಿ ಕೂಲಿ ಕಾರ್ಮಿಕರು ಬೆಂಗಳೂರಿನ ವೈಯಾಲಿಕಾವಲ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕರಿತ್ಯಾನಹಳ್ಳಿ ಗ್ರಾಮದ ಕೆ.ಎಂ.ಶೇಖರ್ ಹಾಗೂ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕುಪ್ಪೆದೊಡ್ಡಿ ಗ್ರಾಮದ ರೈಮಂಡ್ ಬಂಧಿತರಾಗಿದ್ದು, ಆರೋಪಿಗಳಿಂದ ₹12 ಲಕ್ಷ ಮೌಲ್ಯದ 12 ಜಿಂಕೆ ಕೊಂಬುಗಳನ್ನು ಜಪ್ತಿ ಮಾಡಲಾಗಿದೆ. ಜಿಂಕೆ ಕೊಂಬುಗಳ ಮಾರಾಟಕ್ಕೆ ಇಬ್ಬರು ಯತ್ನಿಸಿರುವ ಬಗ್ಗೆ ಇನ್‌ಸ್ಪೆಕ್ಟರ್ ಶಂಕರಗೌಡ ಬಸವಗೌಡ ಅವರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಜಾಗ್ರತರಾದ ಪೊಲೀಸರು, ಜಿಂಕೆ ಕೊಂಬು ಖರೀದಿಸುವವರ ಸೋಗಿನಲ್ಲಿ ಶೇಖರ್ ಹಾಗೂ ರೈಮಂಡ್‌ನನ್ನು ಸಂಪರ್ಕಿಸಿದ್ದಾರೆ. ಆಗ ಜಿಂಕೆ ಕೊಂಬು ಮಾರಾಟಕ್ಕೆ ನಗರಕ್ಕೆ ಬಂದ ಆರೋಪಿಗಳು ವೈಯಾಲಿಕಾವಲ್ ಪೊಲೀಸರ ಗಾಳಕ್ಕೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿಕ್ಕಮಗಳೂರು: ಮನೆಯಲ್ಲಿ ಜಿಂಕೆ-ಚಿರತೆ ಚರ್ಮ ಸಿಕ್ಕಿದ್ದ ಶಾಖಾದ್ರಿ ವಿಚಾರಣೆಗೆ ಗೈರು
ವರ್ಷದಲ್ಲಿ 6 ಜಿಂಕೆಗಳ ಹನನ:
ಕನಕಪುರ ತಾಲೂಕಿನ ಕಾಡಂಚಿನ ಹಳ್ಳಿಗಳ ಹೊಲಕ್ಕೆ ಬರುತ್ತಿದ್ದ ಜಿಂಕೆಗಳನ್ನು ಹೊಂಚು ಹಾಕಿ ಶೇಖರ್ ಹಾಗೂ ರೈಮಂಡ್ ಕೊಲ್ಲುತ್ತಿದ್ದರು. ಬಳಿಕ ಅರಣ್ಯದಂಚಿನಲ್ಲಿ ಜಿಂಕೆ ಮಾಂಸವನ್ನು ತಿಂದು ಅವುಗಳ ಕೊಂಬುಗಳನ್ನು ಆರೋಪಿಗಳು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು.
ಬೆಂಗಳೂರು: ಬನ್ನೇರುಘಟ್ಟ ಪಾರ್ಕ್‌ನಲ್ಲಿ ನಿಲ್ಲದ ಪ್ರಾಣಿಗಳ ಮಾರಣ ಹೋಮ, ಮತ್ತೆ ಜಿಂಕೆಗಳು ಸಾವು
ಇದೇ ರೀತಿ ವರ್ಷದಲ್ಲಿ 6 ಜಿಂಕೆಗಳನ್ನು ಹತ್ಯೆಗೈದು 12 ಕೊಂಬುಗಳನ್ನು ಸಂಗ್ರಹಿಸಿದ್ದ ಆರೋಪಿಗಳು, ತಲಾ ಕೊಂಬಿಗೆ ₹1 ಲಕ್ಷದಂತೆ ಬಿಕರಿ ಮಾಡಲು ಸಿದ್ಧತೆ ನಡೆಸಿದ್ದರು. ರಾಜಧಾನಿಯಲ್ಲಿ ಗ್ರಾಹಕರನ್ನು ಸಂಪರ್ಕಿಸುವಾಗ ಆರೋಪಿಗಳ ಕುರಿತು ಮಾಹಿತಿ ಸಿಕ್ಕಿತು. ಆಗ ತಾವು ಗ್ರಾಹಕರಂತೆ ಶೇಖರ್ ಹಾಗೂ ರೈಮಂಡ್‌ಗೆ ಕರೆ ಮಾಡಿ ಮಾತನಾಡಿದ್ದೇವು. ಅಂತೆಯೇ ಕೊಂಬುಗಳನ್ನು ತಲುಪಿಸಲು ಬಂದಾಗ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.