Asianet Suvarna News Asianet Suvarna News

ಗುಣವಾದ್ರೂ ಆಸ್ಪತ್ರೇಲಿರೋರ ವಿರುದ್ಧ ಸಿಎಂ ಗರಂ : ಚೇತರಿಸಿಕೊಂಡ ತಕ್ಷಣ ಬಿಡುಗಡೆಗೆ ಸೂಚನೆ

  • ಗುಣಮುಖರಾಗಿದ್ದರೂ ಆಸ್ಪತ್ರೆಯಲ್ಲಿರುವವರನ್ನು ತಕ್ಷಣ ಆಸ್ಪತ್ರೆಯಿಂದ ಮನೆಗೆ ಕಳುಹಿಸಲು ಕ್ರಮ
  • ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚನೆ
  • ಬಿಬಿಎಂಪಿ ಪಶ್ಚಿಮ ವಲಯದ ವಾರ್‌ ರೂಂಗೆ ಹಠಾತ್‌ ಭೇಟಿ 
Who Cure From Covid Discharge immediately  order CM BS yediyurappa snr
Author
Bengaluru, First Published May 12, 2021, 8:45 AM IST

ಬೆಂಗಳೂರು (ಮೇ.12):  ಕೋವಿಡ್‌ನಿಂದ ಗುಣಮುಖರಾಗಿದ್ದರೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರನ್ನು ತಕ್ಷಣ ಆಸ್ಪತ್ರೆಯಿಂದ ಮನೆಗೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚಿಸಿದ್ದಾರೆ.

ಮಂಗಳವಾರ ಆರೋಗ್ಯ ಸೌಧದಲ್ಲಿರುವ ಕೋವಿಡ್‌ ವಾರ್‌ ರೂಂ, ಬಿಬಿಎಂಪಿ ಪಶ್ಚಿಮ ವಲಯದ ವಾರ್‌ ರೂಂಗೆ ಹಠಾತ್‌ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ ಅವರು, ಗುಣಮುಖರಾಗಿರುವರಿಗೆ ವೈದ್ಯರು ಡಿಸ್‌ಚಾರ್ಜ್ ಆಗುವಂತೆ ಸೂಚಿಸಿದ್ದರೂ ಕೂಡ 20, 30 ದಿನಗಳಿಂದ ಆಸ್ಪತ್ರೆಯಲ್ಲೇ ಇದ್ದು ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಹಳ ದಿನಗಳಿಂದ ಆಸ್ಪತ್ರೆಯಲ್ಲಿರುವ ಸೋಂಕಿತರನ್ನು ತಕ್ಷಣವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದರು.

ಲಸಿಕೆ ಇಲ್ಲ, ಟೆಸ್ಟಿಂಗ್ ಇಲ್ಲ! ಕೊರೋನಾ ಮತ್ತು ಕರ್ನಾಟಕ ...

ರಾಜ್ಯದಲ್ಲಿ ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿ 1 ರಿಂದ 10 ದಿನ ಆಗಿರುವ 6,500, 11 ರಿಂದ 20 ದಿನ ಆಗಿರುವ 1,900, 20 ದಿನ ಮೀರಿದ 503, 30 ದಿನ ಮೀರಿದ 337 ರೋಗಿಗಳು ಹೀಗೆ ಒಟ್ಟು 9,242 ಮಂದಿ ಇದ್ದಾರೆ. 30 ದಿನ ಚಿಕಿತ್ಸೆ ಪಡೆಯುವ ಅಗತ್ಯ ಏನಿದೆ, ಅವರು ಬೇರೆಯವರಿಗೆ ಜಾಗ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು.ನಮ್ಮಲ್ಲಿನ ವಾರ್‌ ರೂಂ ಬಹಳ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ನಮ್ಮ ಕೋವಿಡ್‌ ವಾರ್‌ ರೂಂ ನ ಕಾರ್ಯವೈಖರಿ ದೇಶಕ್ಕೆ ಮಾದರಿ. ನಮ್ಮ ಅಧಿಕಾರಿಗಳು ಮೂರು ಪಾಳಿಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಏನಾದರೂ ಸುಧಾರಣೆ ತರಬೇಕು ಎಂದಾದರೆ ಅದಕ್ಕೆ ಸರ್ಕಾರ ಸಿದ್ಧ ಎಂದು ಶ್ಲಾಘಿಸಿದರು.

ಇದಕ್ಕೂ ಮೊದಲು ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ನೀವೆಲ್ಲ ಬಹಳ ಶ್ರಮ ಪಟ್ಟು ಕೆಲಸ ಮಾಡುತ್ತಿದ್ದೀರಿ. ಸಾವಿನ ಪ್ರಮಾಣ ಹೆಚ್ಚಿರುವುದು ಆತಂಕ ಮೂಡಿಸಿದೆ. ಸಾವಿನ ಪ್ರಮಾಣ ಕಡಿಮೆ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ನೀವು ಕೂಡ ಸಹಕಾರ ನೀಡುತ್ತಿದ್ದೀರಿ. ನೀವು ಇನ್ನೂ ಹೆಚ್ಚಿನ ಆಸಕ್ತಿಯಿಂದ ಶ್ರಮಿಸಿ. ನಿಮಗೆ ಬರುವ ಮಾಹಿತಿಯನ್ನು ಬೇರೆಯವರೊಂದಿಗೆ ಸಕಾಲದಲ್ಲಿ ಹಂಚಿಕೊಳ್ಳಿ. ಕೊರೋನಾ ನಿಯಂತ್ರಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂದು ಮನವಿ ಮಾಡಿದರು..ಇದೇ ವೇಳೆ ವಾರ್‌ ರೂಂನಲ್ಲಿ ಕೋವಿಡ್‌ ರೋಗಿಗಳ ಬಗ್ಗೆ ಮಾಹಿತಿ, ಆಸ್ಪತ್ರೆಗಳಲ್ಲಿನ ಬೆಡ್‌ ಸ್ಥಿತಿ, ಆಮ್ಲಜನಕ ಮತ್ತು ಇತರ ಕೋವಿಡ್‌ ಔಷಧಗಳ ಲಭ್ಯತೆ ಮುಂತಾದವುಗಳ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡರು.

ಕೊರೋನಾ ಕಂಟ್ರೋಲ್‌ : ಸ್ವತಃ ಫೀಲ್ಡಿಗಿಳಿದ ಸಿಎಂ ಬಿಎಸ್ ಯಡಿಯೂರಪ್ಪ ...

ರಾಜ್ಯದಲ್ಲಿ ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗಿ 1 ರಿಂದ 10 ದಿನ ಆಗಿರುವ 6,500, 11 ರಿಂದ 20 ದಿನ ಆಗಿರುವ 1,900, 20 ದಿನ ಮೀರಿದ 503, 30 ದಿನ ಮೀರಿದ 337 ರೋಗಿಗಳು ಹೀಗೆ ಒಟ್ಟು 9,242 ಮಂದಿ ಇದ್ದಾರೆ. 30 ದಿನ ಚಿಕಿತ್ಸೆ ಪಡೆಯುವ ಅಗತ್ಯ ಏನಿದೆ? ಅವರು ಬೇರೆಯವರಿಗೆ ಜಾಗ ಬಿಟ್ಟುಕೊಡಬೇಕು.

-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios