ಬೆಂಗಳೂರು (ಮೇ.11): ಬೆಂಗಳೂರಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಏರುತ್ತಲಿದೆ. ದೇಶದಲ್ಲಿ ಅತಿ ಹೆಚ್ಚು ಸೋಂಕಿತರು ಬೆಂಗಳೂರಿನಲ್ಲಿದ್ದು ಮಹಾಮಾರಿ ಕಂಟ್ರೋಲ್ ಗೆ ಸ್ವತಃ ಸಿಎಂ ಬಿ ಎಸ್ ಯಡಿಯೂರಪ್ಪ ಅವರೇ ಫೀಲ್ಡ್ ಗೆ ಇಳಿದಿದ್ದಾರೆ. 

ಸಚಿವರನ್ನು ಬಿಟ್ಟು ತಾವೊಬ್ಬರೇ ಇಂದು ಬೆಂಗಳೂರಿನಲ್ಲಿರುವ ಆರೋಗ್ಯ ಸೌಧಕ್ಕೆ ದಿಢೀರ್ ಸಿಎಂ ಭೇಟಿ ನೀಡಿದ್ದಾರೆ.  ಆರೋಗ್ಯ ಸೌಧದಲ್ಲಿರುವ ವಾರ್ ರೂಮ್ ಗೆ ಭೇಟಿ ನೀಡಿದ್ದು ಅಧಿಕಾರಿಗಳ ಬಳಿ ಕೊರೋನಾ ಕಂಟ್ರೋಲ್‌ಗೆ ತೆಗೆದುಕೊಂಡ ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಮೂಲಕ ಸರ್ಕಾರ ಮಾಡಿರುವ ವ್ಯವಸ್ಥೆಗಳನ್ನು ತಾವೇ ಸ್ವತಃ ಪರಿಶೀಲನೆ ಮಾಡಲು ಸಿಎಂ ಮುಂದಾಗಿದ್ದಾರೆ. 

ಸಿಎಂ ಸಭೆಯಲ್ಲಿ ತೆಗೆದುಕೊಂಡ‌ ಪ್ರಮುಖ ನಿರ್ಧಾರಗಳು..!

ಆರೋಗ್ಯ ಸೌಧದ ಭೇಟಿಗೂ ಮುನ್ನ ಮಾತನಾಡಿದ ಸಿಎಂ ದೇಶದಲ್ಲಿ ಕೊರೋನಾ ಕಂಟ್ರೋಲ್ ಗೆ ಬರುತ್ತಿದೆ.  ರಾಜ್ಯದಲ್ಲಿ ಮಾತ್ರ ಸೋಂಕು ಏರುತ್ತಿದೆ. ಜನರು ಸಾಕಷ್ಟು ಮುನ್ನೆಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದರು.  

ಜನ ಮಾಸ್ಕ್ ಹಾಕಿ ಅಂತರ ಕಾಯ್ದುಕೊಳ್ಳಬೇಕು. ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ  ಅಗತ್ಯ ವಸ್ತುಗಳನ್ನು ತರಲು ತೆರಳಬೇಕು. ಜನರ ಸಹಕಾರ ಇದ್ದಾಗ ಮಾತ್ರವೇ ಮಹಾಮಾರಿ ನಿಯಂತ್ರಣ ಸಾಧ್ಯ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು. 

ಹಿರಿಯ ಸಚಿವರು, ಅಧಿಕಾರಿಗಳ ದಿಢೀರ್ ಸಭೆ ಕರೆದ ಸಿಎಂ ಬಿಎಸ್‌ವೈ .

ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಹಿನ್ನೆಲೆ ಇಂದು ಜೆಮ್ ಶೆಡ್ ಪುರದಿಂದ ಆಕ್ಸಿಜನ್ ಬಂದಿದೆ.  ಸ್ವತಃ ಪ್ರಧಾನಿಯವರೇ ಈ ಸಂಬಂಧ ನನ್ನ‌ಜೊತೆ ಮಾತನಾಡಿದ್ದಾರೆ.  ಕೇಂದ್ರದಿಂದ ಎಲ್ಲಾ ರೀತಿಯ ಸಹಕಾರವನ್ನು ಕೊಡುತ್ತಿದ್ದಾರೆ ಎಂದರು. 

ಇನ್ನು ಕೊರೋನಾ ಸಂದರ್ಭದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದ್ದು ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಬಿ ಎಸ್ ಯಡಿಯೂರಪ್ಪ ಇನ್ನೂ ಅಂತಹ ಯಾವುದೇ ರೀತಿಯ ಯೋಚನೆಗಳು ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. 

ದೆಹಲಿಗೆ ಭೇಟಿ  ವಿಚಾರ : ದೆಹಲಿ ತೆರಳುವ ಬಗ್ಗೆ ಮಾತನಾಡಿದ ಸಿಎಂ ಬಿ ಎಸ್ ಯಡಿಯೂರಪ್ಪ ನಾನ್ಯಾಕೆ ದೆಹಲಿಗೆ ಹೋಗಲಿ. ಮೊನ್ನೆ ಬಸವರಾಜ ಬೊಮ್ಮಾಯಿ‌ಹೋಗಿ ಬಂದಿದ್ದಾರೆ.  ರಾಜ್ಯಕ್ಕೆ ಬೇಕಾದ ಸಹಕಾರ ಕೇಳಿ ಬಂದಿದ್ದಾರೆ. ನಾನು ಕೇಂದ್ರ ನಾಯಕರ ಜೊತೆ ಸಂಪರ್ಕದಲ್ಲಿದ್ದೇನೆ.  ಪ್ರಧಾನಿ ನರೇಂದ್ರ  ನಿರಂತರ ಸಂಪರ್ಕದಲ್ಲಿದ್ದೇನೆ.  ದೆಹಲಿಗೆ ಹೋಗುವ ಅವಶ್ಯಕತೆಯಿಲ್ಲ ಎಂದು ಸಿಎಂ ಬಿ ಎಸ್ ಯಡಿಯುರಪ್ಪ ಹೇಳಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona