ಕಾವೇರಿ ವನ್ಯಜೀವಿ ಧಾಮದಲ್ಲಿ ಬಿಳಿ ಕಡವೆ ಪತ್ತೆ: ವನ್ಯಜೀವಿ ತಜ್ಞರಿಗೆ ಆಶ್ಚರ್ಯ
ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದಲ್ಲಿ ಬಿಳಿ ಬಣ್ಣದ ಕಡೆವೆ ಪತ್ತೆಯಾಗಿದೆ. ಈ ಮೂಲಕ ರಾಜ್ಯದ ವನ್ಯಜೀವಿ ತಜ್ಞರಿಗೆ ಆಶ್ಚರ್ಯವೂ ಉಂಟಾಗಿದೆ.
ಚಾಮರಾಜನಗರ (ಸೆ.06): ರಾಜ್ಯದ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದಲ್ಲಿ ಬಿಳಿ ಬಣ್ಣದ ಕಡೆವೆ ಪತ್ತೆಯಾಗಿದೆ. ಈ ಮೂಲಕ ರಾಜ್ಯದ ವನ್ಯಜೀವಿಗಳಲ್ಲಿ ವಿಭಿನ್ನವಾದ ಬಿಳಿ ಬಣ್ಣದ ಕಡವೆ ಪತ್ತೆಯಾಗಿದ್ದರಿಂದ ಪ್ರಾಣಿ ಪ್ರಿಯರಿಗೆ ಸಂತಸವಾಗಿದೆ.
ವನ್ಯಜೀವಿ ತಜ್ಞ ಡಾ.ಸಂಜಯ್‌ಗುಬ್ಬಿ ತಂಡವು ಚಿರತೆಗಳ ಅಧ್ಯಯನಕ್ಕೆ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಬಿಳಿಬಣ್ಣದ ಕಡವೆಯ ಚಿತ್ರ ಸೆರೆಯಾಗಿದೆ. ಕಡವೆಗಳ ಗುಂಪಿನ ನಡುವೆ ಇದೊಂದು ಮಾತ್ರ ಬಿಳಿ ಬಣ್ಣದ ಕಡವೆ ಪತ್ತೆಯಾಗಿದೆ. ಈ ವಿಶೇಷ ಕಡವೆಯು ಎಲ್ಲ ಕಡವೆಗಳೊಂದಿಗೆ ಸಾಮಾನ್ಯವಾಗಿ ಹೊಂದಿಕೊಂಡಿದ್ದು, ಇದಕ್ಕೆ ಬಣ್ಣ ಮಾತ್ರ ಬದಲಾಗಿದೆ. ಉಳಿದಂತೆ ಎಲ್ಲ ಚಟುವಟಿಕೆಗಳು ಕೂಡ ಕಡವೆಗಳ ಹಿಂಡಿನಲ್ಲಿಯೇ ಮಾಡುತ್ತದೆ. ಇದೇ ಮೊದಲ ಬಾರಿಗೆ ಬಿಳಿ ಬಣ್ಣದ ಕಡವೆ ಕಂಡುಬಂದಿದ್ದು, ಪ್ರಾಣಿಪ್ರಿಯರು ಆಶ್ಚರ್ಯದ ಜೊತೆಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಹುಲಿಗೆ ಆಹಾರವಾದ 7 ವರ್ಷದ ಬಾಲಕ: ಅಪ್ಪ-ಅಮ್ಮನೆದುರೇ ಮಗನನ್ನು ಕೊಂದು ತಿಂದ ವ್ಯಾಘ್ರ
ಇನ್ನು ಇದೇ ಕಾವೇರಿ ವನ್ಯಜೀವಿಧಾಮದ ಇದೇ ಪ್ರದೇಶದಲ್ಲಿ ಬಿಳಿ ಕೆನ್ನಾಯಿ ಪತ್ತೆಯಾಗಿತ್ತು. ಜೊತೆಗೆ, ಜೇನ್‌ಹೀರ್ಕ ಅಥವಾ ತರಕರಡಿಗಳು ಗೋಚರವಾಗಿದ್ದವು. ಇದೀಗ ಬಿಳಿಬಣ್ಣದ ಕಡವೆಯ ಚಿತ್ರ ಇದೇ ಮೊದಲ ಬಾರಿಗೆ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದೆ. ಕಾವೇರಿ ವನ್ಯಜೀವಿ ಧಾಮದಲ್ಲಿ ಇನ್ನೂ ವಿಶೇಷ ಮಾದರಿಯ ಪ್ರಾಣಿಗಳು ಇರಬಹುದು ಎಂದು ವನ್ಯಜೀವಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಳಿ ಕಡವೆಯ ಇನ್ನಷ್ಟು ಚಿತ್ರಗಳು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದೆ. ಕರಿಚಿರತೆ, ಬಿಳಿ ಕೆನ್ನಾಯಿ ಹಾಗೂ ಬಿಳಿ ಕಡವೆಯ ಮೂಲಕ ಕಾವೇರಿ ವನ್ಯಜೀವಿಧಾಮ ವಿಶೇಷ ತಾಣವಾಗಿ ಕಂಡುಬರುತ್ತಿದೆ.
ಹುಲಿಗೆ ಆಹಾರವಾದ 7 ವರ್ಷದ ಬಾಲಕ : ಮೈಸೂರು (ಸೆ.04): ಕಳೆದ ಎರಡು ತಿಂಗಳಿಂದ ಕಡಿಮೆಯಾಗಿದ್ದ ಹುಲಿ ದಾಳಿ ಪ್ರಕರಣ ಮತ್ತು ಅರಣ್ಯದಂಚಿನ ಗ್ರಾಮಗಳಲ್ಲಿ ಶುರುವಾಗಿದೆ. ಹೆಚ್.ಡಿ. ಕೋಟೆಯಲ್ಲಿ ತಂದೆ- ತಾಯಿ ಜೊತೆಗೆ ಹೊಲಕ್ಕೆ ಹೋಗಿ ಮರದ ಕೆಳಗೆ ಕುಳಿತಿದ್ದ 7 ವರ್ಷದ ಬಾಲಕನ್ನು ಹುಲಿ ಎಳೆದುಕೊಂಡು ಹೋಗಿ ತಿಂದುಹಾಕಿದೆ. ಮೈಸೂರು ಜಿಲ್ಲೆ ಹೆಚ್‌ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನಿನಲ್ಲಿ ಮರದ ಕೆಳಗೆ ಕುಳಿತಿದ್ದ ಬಾಲಕನ ಮೇಲೆ ದಾಳಿ ಮಾಡಿದ ಹುಲಿ, ಆತನನ್ನು ಎಳೆದುಕೊಂಡು ಹೋಗಿ ತಿಂದು ಹಾಕಿದೆ. ಮೃತ ಬಾಲಕನನ್ನು ಕೃಷ್ಣಾಯಕರ ಅವರ ಪುತ್ರ ಚರಣ್ (7) ಎಂದು ಗುರುತಿಸಲಾಗಿದೆ.
ಸಿಐಡಿ ಪೊಲೀಸಪ್ಪನ ಕಾಮಪುರಾಣ, ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಪತ್ನಿ: ಶತ್ರುವಿಗೂ ಬೇಡ ಇಂಥ ಗಂಡ
ಅರ್ಧ ದೇಹವನ್ನು ತಿಂದು ಕಳೇಬರ ಬಿಟ್ಟುಹೋದ ಹುಲಿ: ಕಾಡಂಚಿನ ಗ್ರಾಮವಾದ ಕಲ್ಲಹಟ್ಟಿಯಲ್ಲಿ ಜಮೀನಿನಲ್ಲಿ ಕೆಲಸಕ್ಕೆ ಹೋದ ವೇಳೆ ಬಿಸಿಲು ಹೆಚ್ಚಾಗಿದ್ದರಿಂದ ಚಿಕ್ಕ ಬಾಲಕ ಚರಣ್‌ನನ್ನು ವಿಶ್ರಾಂತಿ ಪಡೆಯಲು ಮರದ ಕೆಳಗೆ ಕೂರಿಸಲಾಗಿತ್ತು. ಪೋಷಕರು ಮರದ ಕೆಳಗೆ ಕಣ್ಣಾಡಿಸಿದಾಗ ಮಗ ಅಲ್ಲಿ ಕಾಣಿಸಲಿಲ್ಲ. ಕೂಡಲೇ ಕ್ಷಣ ಮಾತ್ರದಲ್ಲಿ ಕಣ್ಮರೆಯಾದ ಬಾಲಕನನ್ನು ಪೋಷಕರು ಹುಡುಕುತ್ತಾ ಹೋಗಿದ್ದಾರೆ. ಆಗ, ಸುತ್ತಲಿನ ಪ್ರದೇಶಗಳಲ್ಲಿ ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಆಗ, ಬಾಲಕನ್ನು ಎಳೆದುಕೊಂಡು ಹೋಗುವಾಗ ಚಪ್ಪಲಿ ಬಿದ್ದಿರುವುದು ನೋಡಿದಾಗ ಅಲ್ಲಿ ಹುಲಿ ಹೆಜ್ಜೆಗಳು ಇರುವುದು ಕೂಡ ಕಂಡುಬಂದಿದೆ. ಹುಲಿಯ ಹೆಜ್ಜೆಯ ಜಾಡು ಹುಡುಕಿದಾಗ ಕೊಂಚ ದೂರದಲ್ಲಿ ಬಾಲಕನನ್ನು ಹುಲಿ ತಿನ್ನುತ್ತಿರುವ ದೃಶ್ಯ ಕಂಡಿದೆ. ನಂತರ, ಅರ್ಧ ದೇಹವನ್ನು ತಿಂದು ಕಳೇಬರವನ್ನು ಅಲ್ಲಿಯೇ ಬಿಟ್ಟು ಹೋಗಿದೆ.