ರಾಜ್ಯವ್ಯಾಪಿ ಭರ್ಜರಿ ಮಳೆ ಮುಂದುವರಿದಿದ್ದು ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮೇ 24ರವರೆಗೂ ಮುಂಗಾರು ಪೂರ್ವ ಮಳೆ ಅಬ್ಬರಿಸಲಿದೆ.

ಬೆಂಗಳೂರು (ಮೇ.21): ರಾಜ್ಯವ್ಯಾಪಿ ಭರ್ಜರಿ ಮಳೆ ಮುಂದುವರಿದಿದ್ದು ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮೇ 24ರವರೆಗೂ ಮುಂಗಾರು ಪೂರ್ವ ಮಳೆ ಅಬ್ಬರಿಸಲಿದೆ. ಈ ನಡುವೆ, ದಿನನಿತ್ಯ ಮಳೆಯಾಗುತ್ತಿರುವುದರಿಂದ ರಾಜ್ಯದ ಬಹುತೇಕ ಎಲ್ಲ ಭಾಗದಲ್ಲಿ ಉಷ್ಣತೆಯಲ್ಲಿ ಗಣನೀಯ ಇಳಿಕೆ ದಾಖಲಾಗಿದೆ. ಬೇಸಿಗೆಯಲ್ಲಿ 40 ಡಿಗ್ರಿಗಿಂತ ಹೆಚ್ಚು ತಾಪ ಕಾಣುತ್ತಿದ್ದ ಕಲಬುರಗಿಯಲ್ಲಿ ಗರಿಷ್ಠ 35.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. 

ಉಳಿದಂತೆ ಬೀದರ್‌ 34.6 ಡಿಗ್ರಿ ಸೆಲ್ಸಿಯಸ್‌, ರಾಯಚೂರು 30.4 ಡಿಗ್ರಿ ಸೆಲ್ಸಿಯಸ್‌, ಮೈಸೂರು 30 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಆದರೆ ಈ ಎಲ್ಲ ಜಿಲ್ಲೆಗಳಲ್ಲೂ ವಾಡಿಕೆಗಿಂತ ಕಡಿಮೆ ಉಷ್ಣತೆ ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳು, ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ 25 ಡಿಗ್ರಿಗಿಂತ ಕಡಿಮೆ ತಾಪಮಾನ ವರದಿಯಾಗಿದೆ. ಶಿವಮೊಗ್ಗ, ಮಂಡ್ಯ, ಬೆಳಗಾವಿ, ಬೆಂಗಳೂರು, ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ವಾಡಿಕೆಗಿಂತ 10 ಡಿಗ್ರಿಗಿಂತ ಕಡಿಮೆ ತಾಪಮಾನ ದಾಖಲಾಗಿದೆ.

Hubballi: ಅವಳಿ ನಗರದಲ್ಲಿ ವರುಣನ ಆರ್ಭಟ: ಒಂದೇ ರಾತ್ರಿಯಲ್ಲಿ ಸುರಿಯಿತು 80ಮೀ.ಮಿ‌ ಮಳೆ!

ಗರಿಷ್ಠ 21 ಸೆಂ.ಮೀ. ಮಳೆ: ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಶಿವಮೊಗ್ಗದ ಪುರದಾಲು, ಉಡುಪಿಯ ಶಿರೂರು ತಲಾ 21 ಸೆಂ.ಮೀ, ಧಾರವಾಡದ ಯರಗುಪ್ಪಿ, ಶಿವಮೊಗ್ಗದ ಹೊಸನಗರ, ಉತ್ತರಕನ್ನಡದ ಕೊಪ್ಪ, ವಿಜಯನಗರದ ಹಗರನೂರು ತಲಾ 20 ದಾವಣಗೆರೆಯ ಕುಲಂಬಿ 19. ಉಡುಪಿಯ ಕೊಲ್ಲೂರು 18 ಸೆಂ.ಮೀ ಮಳೆಯಾಗಿದೆ.

ಮಂಡ್ಯದ ಜನತೆ ತತ್ತ​ರ: ಮಂಡ್ಯ​ದಲ್ಲಿ ಕಳೆದ ಕೆಲ ದಿನ​ಗ​ಳಿಂದ ಸುರಿ​ಯು​ತ್ತಿ​ರುವ ಬೇಸಿಗೆ ಮಳೆ ಭಾರಿ ಅನಾ​ಹು​ತ​ವನ್ನೇ ಸೃಷ್ಟಿ​ಸಿ​ದೆ. ಹಲವು ಕೆರೆ​ಕ​ಟ್ಟೆ​ಗಳು ತುಂಬಿ​ ಹರಿ​ಯು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ನಗ​ರದ ಹಲವು ಬಡಾ​ವ​ಣೆ​ಗ​ಳಿಗೆ ನೀರು ನುಗ್ಗಿ ಅವಾಂತರವಾಗಿದೆ. ಹಾಲ​ಹಳ್ಳಿ, ಶಂಕ​ರ​ಪು​ರದ ಹಲವು ಮನೆ​ಗ​ಳಿಗೆ ನೀರು ನುಗ್ಗಿ ಜನ ರಾತ್ರಿ​ಯಿಡೀ ಜಾಗ​ರಣೆ ಮಾಡಿದ್ದಾರೆ. ಮೇಲುಕೋಟೆ ರಸ್ತೆಯಲ್ಲಿರುವ ಎನ್‌.ಎಫ್‌. ಇಂಡಸ್ಟ್ರೀಸ್‌ಗೆ ನೀರು ನುಗ್ಗಿ ಅಪಾ​ರ ಪ್ರಮಾ​ಣದ ಖಾರದ ಪುಡಿ ನೀರು​ಪಾ​ಲಾ​ಗಿ​ದೆ ಮಂಡ್ಯದ ಇಂಡುವಾಳು ಬಳಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯೊಂದು ಕೊಚ್ಚಿಹೋಗಿದ್ದು, ಕೆಲ​ಕಾಲ ಸಂಚಾರ ಅಸ್ತವ್ಯಸ್ತ​ಗೊಂಡಿ​ತ್ತು. ಹಳ್ಳ​ದಲ್ಲಿ ನೀರಿನ ರಭಸ ಹೆಚ್ಚಾದ ಕಾರಣ ಈ ಘಟನೆ ನಡೆದಿದೆ.

ಕರಾ​ವ​ಳಿ​ಯಲ್ಲಿ ಅಬ್ಬ​ರದ ಮಳೆ: ಕರಾ​ವಳಿ ಜಿಲ್ಲೆ​ಗ​ಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನ​ಡ​ದಲ್ಲಿ ಭರ್ಜರಿ ಮಳೆ​ಯಾ​ಗಿ​ದೆ. ಗುರು​ವಾರ ಮಳೆಯ ತೀವ್ರತೆ ಕಡಿಮೆ ಇತ್ತಾ​ದರೂ ಬುಧ​ವಾರ ರಾತ್ರಿ​ಯಿಂದ ಬಿರು​ಸಿನ ಮಳೆ ಸುರಿ​ದ ಕಾರಣ ಪ್ರವಾ​ಹದ ಆತಂಕ ಸೃಷ್ಟಿ​ಸಿದೆ. ಕೊಡಗಿನ​ಲ್ಲೂ ಉತ್ತಮ ಮಳೆ​ಯಾ​ಗು​ತ್ತಿ​ದ್ದು, ಚಿಕ್ಲಿಹೊಳೆ ಜಲಾಶಯ ತುಂಬಿ ಹರಿಯಲಾರಂಭಿಸಿದೆ. ಮಳೆಯಿಂದಾಗಿ ಮಡಿಕೇರಿ-ಚೆಟ್ಟಳ್ಳಿ ರಸ್ತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿಯಲಾರಂಭಿಸಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

ಬೆಂಗ್ಳೂರಲ್ಲಿ ಕಳೆದ 50 ವರ್ಷದಲ್ಲೇ ಅತೀ ತಣ್ಣನೆಯ ದಿನ ದಾಖಲು: ಗಾರ್ಡನ್‌ ಸಿಟಿ ಕೂಲ್‌ ಕೂಲ್‌..!

ದಾವ​ಣ​ಗೆ​ರೆ​ಯಲ್ಲಿ 2 ಸಾವಿರ ಎಕ​ರೆಗೂ ಹೆಚ್ಚು ಬೆಳೆ ಹಾನಿ​ಯಾ​ಗಿದೆ. ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದ ಯುವ ರೈತ ನಾಗರಾಜ (28 ವರ್ಷ) ನೀರಿ​ನಲ್ಲಿ ಮುಳು​ಗಿದ್ದ ಪಂಪ್‌ಸೆಟ್‌ ತೆರವು ಮಾಡಲು ಹೋಗಿದ್ದಾಗ ವಿದ್ಯುತ್‌ ತಗುಲಿ ಮೃತಪಟ್ಟಿದ್ದಾರೆ. ಬೀದರ್‌, ಯಾದ​ಗಿ​ರಿಯಲ್ಲಿ ಮಳೆ​ಯ​ಬ್ಬರ ಕಡಿಮೆ ಇದ್ದರೂ ಸಿಡಿಲು-ಗಾಳಿಯಬ್ಬ​ರಕ್ಕೆ ಹಲವು ಮನೆ​ಗಳ ಚಾವಣಿಗೆ ಹಾನಿ​ಯಾ​ಗಿದೆ. ಸಿಡಿಲು ಬಡಿದು ಯಾದ​ಗಿ​ರಿ​ಯ ಹುಣ​ಸಗಿ ತಾಲೂ​ಕಿನ ವರ​ಹಟ್ಟಿಗ್ರಾಮ​ದಲ್ಲಿ ಭೀಮಪ್ಪ, ಬೀದ​ರ್‌​ನಲ್ಲಿ ಚಿಮಕೋಡ ಗ್ರಾಮದ ವಿದ್ಯಾವತಿ ಟೊಳ್ಳೆ (52) ಮೃತ​ಪ​ಟ್ಟಿ​ದ್ದಾ​ರೆ.