Hubballi: ಅವಳಿ ನಗರದಲ್ಲಿ ವರುಣನ ಆರ್ಭಟ: ಒಂದೇ ರಾತ್ರಿಯಲ್ಲಿ ಸುರಿಯಿತು 80ಮೀ.ಮಿ ಮಳೆ!
ಹುಬ್ಬಳ್ಳಿ ಧಾರವಾಡ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ಕಳೆದ ಎರಡು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಕ್ಷರಶಃ ತತ್ತರಿಸಿ ಹೋಗಿದೆ.
ಹುಬ್ಬಳ್ಳಿ (ಮೇ.20): ಹುಬ್ಬಳ್ಳಿ ಧಾರವಾಡ (Hubballi Dharwad) ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ ವರುಣನ ಆರ್ಭಟ (Heavy Rain) ಜೋರಾಗಿದೆ. ಕಳೆದ ಎರಡು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಕ್ಷರಶಃ ತತ್ತರಿಸಿ ಹೋಗಿದೆ. ಧಾರವಾಡ ಜಿಲ್ಲೆಯ ಮಳೆಯ ಹೈಲೈಟ್ ಇಲ್ಲಿದೆ ನೋಡಿ. ಉಕ್ಕಿ ಹರಿಯುತ್ತಿರುವ ಹಳ್ಳ- ಕೊಳ್ಳಗಳು, ಕುಸಿದು ಬಿದ್ದ ಮನೆಗಳು, ಕೋಡಿ ಬಿದ್ದು ಧುಮ್ಮಿಕ್ಕುವ ಕೆರೆಗಳು, ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿರುವುದರಿಂದ ಪರದಾಡುತ್ತಿರುವ ಜನರು. ಹೌದು! ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿದ ಧಾರಾಕಾರ ಮಳೆಗೆ ಜನಜೀವನ ತತ್ತರಿಸಿಹೋಗಿದೆ.
"
ರಣ ಮಳೆ ಆರ್ಭಟಕ್ಕೆ ಹುಬ್ಬಳ್ಳಿಯಲ್ಲಿ ಅವಾಂತರಗಳೇ ಸೃಷ್ಟಿಯಾಗಿದ್ದು, ಜನರು ಹೈರಾಣಾಗಿದ್ದಾರೆ. ಹುಬ್ಬಳ್ಳಿಯ ವಾರ್ಡ್ ನಂಬರ್ 54ರ ಗಣೇಶ ನಗರದಲ್ಲಿ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು. ಮೊಣಕಾಲು ಉದ್ದ ನೀರು ಮನೆಯಲ್ಲಿ ನಿಂತಿದ್ದರಿಂದ ನೀರು ಹೊರ ಹಾಕಲು ಪರದಾಡುವಂತಾಯಿತು. ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ, ಅರ್ಧಂಬರ್ಧ ಮಾಡಿದ ನಾಲ ಕಾಮಗಾರಿಯಿಂದ ಮಳೆಯ ನೀರು ನೇರವಾಗಿ ಮನೆಗಳಿಗೆ ನುಗ್ಗಿದ್ದ ಮನೆಯಲ್ಲಿದ್ದವರು ಹೊರಬರಲಾಗದೆ ಜಲ ದಿಗ್ಬಂಧನಕ್ಕೆ ಒಳಗಾದರು.
ಧಾರವಾಡ ಕೇಂದ್ರ ಕಾರಾಗೃಹಕ್ಕೆ ನ್ಯಾ.ಬಿ.ವೀರಪ್ಪ ಅವರ ಅನಿರೀಕ್ಷಿತ ಭೇಟಿ: ಕೈದಿಗಳೊಂದಿಗೆ ಆಪ್ತ ಸಮಾಲೋಚನೆ
ಹುಬ್ಬಳ್ಳಿ ರೈಲ್ವೆ ಅಂಡರ್ ಪಾಸ್ ನೀರು ತುಂಬಿ ಪ್ರಯಾಣಿಕರ ಪರದಾಟ: ಇನ್ನು ಮಳೆಯಿಂದಾಗಿ ಹುಬ್ಬಳ್ಳಿಯ ವಿನೋಬಾ ನಗರ, ವಾಳ್ವೇಕರ್ ಹಕ್ಕಲ, ನವೀನ ಪಾರ್ಕ್, ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿರುವ ಅಂಡರ್ ಪಾಸ್ ಜಲಾವೃತಗೊಂಡಿದೆ. ಅಂಡರ್ ಪಾಸ್‌ನಲ್ಲಿ ನೀರು ನಿಂತಿರುವ ಪರಿಣಾಮ ಪ್ರಯಾಣಿಕರು ಒಂದು ಪ್ಲಾಟ್ ಫಾರಂ ನಿಂದ ಮತ್ತೊಂದು ಪ್ಲಾಟ್ ಫಾರಂಗೆ ತೆರಳಲು ಪರದಾಡುವಂತಾಗಿದೆ. ರೈಲ್ವೆ ಸಿಬ್ಬಂದಿ ತುಂಬಿದ ನೀರನ್ನು ಹೊರಹಾಕಲು ಹರಸಾಹಸ ಪಡುವಂತಾಯಿತು.
Congress Politics: ಕಾಂಗ್ರೆಸ್‌ಗೆ ಮುಜುಗರ ತಂದ ಹೇಳಿಕೆ: ದೀಪಕ್ ಚಿಂಚೋರೆಗೆ ನೋಟಿಸ್ ಜಾರಿ
ಪ್ರವಾಹದಲ್ಲಿ ಸಿಲುಕಿದ ನಾಲ್ವರ ರಕ್ಷಣೆ- ಸಂಪರ್ಕ ಕಳೆದುಕೊಂಡ ಹಲವು ಹಳ್ಳಿಗಳು: ಮತ್ತೊಂದೆಡೆ ಬೆಣ್ಣೆ ಹಳ್ಳದ ತೀರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಂದಗೋಳ ತಾಲೂಕಿನ ಸಂಶಿ- ಚಾಕಲಬ್ಬಿ ಬಳಿ ಉಕ್ಕಿ ಹರಿಯುವ ಹಳ್ಳದಲ್ಲಿ ಲಾರಿ ಸಮೇತ ಕೊಚ್ಚಿಕೊಂಡ ಹೋಗಿದ್ದ ನಾಲ್ವರನ್ನು ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ರಕ್ಷಿಸಲಾಗಿದೆ. ಹಳ್ಳದ ನೀರಿನ ಆಳ ತಿಳಿಯದೆ ಲಾರಿ ಸಮೇತ ಹಳ್ಳ ದಾಟಲು ಯತ್ನಿಸಿದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಪ್ರವಾಹದಲ್ಲಿ ಸಿಲುಕಿದ್ದ ಮಂಜುನಾಥ ಸಿದ್ದಪ್ಪ, ಅಭಿಷೇಕ, ಶರಣಪ್ಪ ಎಂಬುವವರನ್ನು ರಕ್ಷಿಸಲಾಗಿದೆ. ನಿರಂತರವಾಗಿ ಸುರಿದಮಳೆಗೆ ಹಲವು ಹಳ್ಳಿಗಳು ಸಂಪರ್ಕ ಕಡಿದುಕೊಂಡಿವೆ. ಬೆಣ್ಣೆ ಹಳ್ಳ ಉಕ್ಕಿಹರಿಯುತ್ತಿರುವುದರಿಂದ ಕುಂದಗೋಳ ತಾಲೂಕಿನ ಹಿರೇನರ್ತಿ ಹಾಗೂ ಚಿಕ್ಕನರ್ತಿ ಸಂಪರ್ಕ ಕಳೆದುಕೊಂಡಿದೆ. ಯರಗುಪ್ಪಿ ಮಾರ್ಗವಾಗಿ ಹುಬ್ಬಳ್ಳಿ ತಲುಪಲು ರಸ್ತೆ ಸಂಪೂರ್ಣ ಮುಳುಗಡೆ ಆಗಿದ್ದು ಜನರು ಗ್ರಾಮಗಳಿಂದ ಹೊರಬರಲಾದೆ ಪರದಾಡುತ್ತಿದ್ದಾರೆ.
"