Asianet Suvarna News Asianet Suvarna News

ಟಿಪ್ಪು ದೇಶ ಕಂಡ ಶ್ರೇಷ್ಠ ವ್ಯಕ್ತಿಯೆಂದು ಓದಿದ್ದೇವೆ.! - ಶಿಕ್ಷಣ ಸಚಿವ ನಾಗೇಶ್‌

ರಾಜ್ಯದಲ್ಲಿ ಕೆಲವು ರಾಜಕೀಯ ಪಕ್ಷಗಳು ಟಿಪ್ಪು ವಿಚಾರವಾಗಿ ಸುಳ್ಳು ಹೇಳಿಕೊಂಡು ಬಂದಿದ್ದರ ಫಲವಾಗಿ ನಾವೆಲ್ಲರೂ ಟಿಪ್ಪು ಸುಲ್ತಾನ್‌ ದೇಶಕಂಡ ಶ್ರೇಷ್ಠ ವ್ಯಕ್ತಿ ಎಂದು ಓದಿಕೊಂಡು ಬಂದಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

We read that Tipu was a great person Education Minister Nagesh Sat
Author
First Published Nov 13, 2022, 4:55 PM IST

ಗದಗ (ನ.13): ರಾಜ್ಯದಲ್ಲಿ ಕೆಲವು ರಾಜಕೀಯ ಪಕ್ಷಗಳು ಟಿಪ್ಪು ವಿಚಾರವಾಗಿ ಸುಳ್ಳು ಹೇಳಿಕೊಂಡು ಬಂದಿದ್ದರ ಫಲವಾಗಿ ನಾವೆಲ್ಲರೂ ಟಿಪ್ಪು ಸುಲ್ತಾನ್‌ ದೇಶಕಂಡ ಶ್ರೇಷ್ಠ ವ್ಯಕ್ತಿ ಎಂದು ಓದಿಕೊಂಡು ಬಂದಿದ್ದೇವೆ. ಈಗ ಜನರು ಸುಳ್ಳು ಹೇಳುವುದನ್ನು ವಿರೋಧಿಸುವ ಅಭ್ಯಾಸವನ್ನು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ, ಹೊರ ಜಗತ್ತಿಗೆ ಸತ್ಯ ತಿಳಿಯುತ್ತಿರುವುದರಿಂದ ಸುಳ್ಳು ಹೇಳಿದವರ ಭವಿಷ್ಯಕ್ಕೆ ಕುತ್ತು ಬರುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

ರಂಗಾಯಣ (Rangayana) ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ 'ಟಿಪ್ಪು ನಿಜ ಕನಸು' (Tippu Nija Kanasu) ನಾಟಕ ಪ್ರದರ್ಶನಕ್ಕೆ ವಿರೋಧದ ಕುರಿತು ಮಾತನಾಡಿದ ಶಿಕ್ಷಣ ಸಚಿವ, ಟಿಪ್ಪು ವಿಚಾರವಾಗಿ ಈಗ ಸತ್ಯ ಗೊತ್ತಾಗುತ್ತಿದೆ. ಕೆಲವರು ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ. ಇನ್ನು ಕೆಲವರು ಸುಳ್ಳಿನ ಆಧಾರದಲ್ಲಿಯೇ ತಜ್ಞರಾಗಿದ್ದಾರೆ.  ನಾವೆಲ್ಲರೂ ಟಿಪ್ಪು ಸುಲ್ತಾನ್‌ ದೇಶಕಂಡ ಶ್ರೇಷ್ಠ ವ್ಯಕ್ತಿ ಎಂದು ಓದಿಕೊಂಡು ಬಂದಿದ್ದೇವೆ. ಶ್ರೀರಂಗಪಟ್ಟಣದಲ್ಲಿದ್ದ (Shrirangapattana) ಆಂಜನೇಯ ದೇವಸ್ಥಾನ (Anjaneya Temple) ಒಡೆದು ಮಸೀದಿ ಕಟ್ಟಿದ್ದು ಗೊತ್ತಾಗಿದೆ. ಪಹಣಿಯಲ್ಲಿ ಇರುವುದು ಪರ್ಷಿಯನ್ (Persian) ಪದ ಎಂತಲೂ ತಿಳಿದಿದೆ. ಪಹಣಿ (Pahani) ಮತ್ತು ಶಿರಸ್ತೆದಾರ ಎನ್ನುವ ಪದಗಳು ಕನ್ನಡದ ಪದ ಎಂದುಕೊಂಡಿದ್ದೆವು. ಆದರೆ, ಕನ್ನಡವನ್ನ ಕಲೆ ಮಾಡಿದ್ದು ಟಿಪ್ಪು ಎಂಬುದು ಈಗ ಗೊತ್ತಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕ: ಸಚಿವ ನಾಗೇಶ್‌

ಬಲವಂತದ ಮತಾಂತರ:
ನಮ್ಮ ರಾಜ್ಯದ ಕಿತ್ತಳೆ ಬೆಳೆಯುವ ಪ್ರದೇಶವಾದ ಕೊಡಗು (Kodagu), ನೆರೆಯ ಕೇರಳದಲ್ಲಿ (Kerala) ಟಿಪ್ಪು ಅಧಿಕಾರದಲ್ಲಿದ್ದಾಗ ಬಲವಂತವಾಗಿ ಮತಾಂತರ (Forcible conversion) ಮಾಡಿದ್ದನು. ಮತಾಂತರ ಆಗದಿರುವ ಜನರನ್ನು ಕೊಲೆ  ಮಾಡಿದ್ದಾನೆ. ಟಿಪ್ಪು ಸುಲ್ತಾನ್ ಬ್ರಿಟಿಷರಿಗೆ (British) ಬರೆದ ಪತ್ರದ ಮೂಲಕವೇ ಈ ಎಲ್ಲ ವಿಷಯಗಳು ಗೊತ್ತಾಗುತ್ತಿದೆ. ಇದರಲ್ಲಿ ದೊಡ್ಡ ದುರಾದೃಷ್ಟ ಎಂದರೆ ನಮ್ಮ ದೇಶದಲ್ಲಿ ಟಿಪ್ಪುವನ್ನು, ಕೆಂಪೇಗೌಡರನ್ನ ಹೋಲಿಸಲಾಗುತ್ತಿದೆ. ಕೆಂಪೇಗೌಡರು (Kempegowda) ಎಲ್ಲರೂ ಚನ್ನಾಗಿರಬೇಕು ಎಂದು ಕೆಲಸ ಮಾಡಿದ್ದಾರೆ. ನಮ್ಮ ದೇಶ ಮತ್ತು ಅವರು ಕಟ್ಟಿದ ಬೆಂಗಳೂರು ಮುಂದಿನ 100 ವರ್ಷಗಳ ನಂತರ ಹೇಗಿರಬೇಕು ಎಂದು ಕನಸು (Dream) ಕಂಡಿದ್ದರು. ಆದರೆ, ಟಿಪ್ಪು ಸುಲ್ತಾನ್ ಜನರಿಗೆ ಏನು ಮಾಡಿದಾನೆ ಎಂದು ಗೊತ್ತಿದ್ದರೂ, ಅವನನ್ನು ಇಟ್ಟುಕೊಂಡು ಪೂಜಿಸುತ್ತಾರೆ ಎಂದರೆ ಅಂಥವರ ಮಾನಸಿಕತೆಯನ್ನು (Mentality) ನಾವು ಅರ್ಥ ಮಾಡಿಕೊಳ್ಳಬೇಕು. ಈ ದೇಶದಲ್ಲಿ ಕೆಲವರು ಟಿಪ್ಪು ಬಯಸಿದ ರಾಷ್ಟ್ರ ನಿರ್ಮಾಣವಾಗಬೇಕು ಎಂದು ಹೊರಟಿದ್ದಾರೆ‌ ಎಂದರು.

ರಾಜ್ಯಾದ್ಯಂತ ಶಾಲೆಗಳ ಕೊಠಡಿಯಲ್ಲಿ ಏಕರೂಪದ ವಿವೇಕ ಬಣ್ಣ: ಮತ್ತೆ ಕೇಸರಿ ವಾಗ್ವಾದ ಶುರುವಾಗುವ ಸಾಧ್ಯತೆ

ವಾಸ್ತಶಿಲ್ಪಿಗಳು ಹೇಳಿದರೆ ಕೇಸರಿ ಬಣ್ಣ ಹಾಕ್ತೀವಿ:
ರಾಜ್ಯದಲ್ಲಿ ವಿವೇಕ ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ (Saffron color) ಹಚ್ಚುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ನಾಗೇಶ್, ಶಾಲೆಗಳ ಗೋಡೆ, ಬಾಗಿಲು, ಕಿಟಕಿ ಹಾಗೂ ಬಣ್ಣಗಳ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ, ವಾಸ್ತುಶಿಲ್ಪಿಗಳು (Architects) ನಿರ್ಧಾರ ಕೈಗೊಳ್ಳಲು ಸ್ವಾತಂತ್ರ (Freedom) ನೀಡಲಾಗಿದೆ.  ಅವರು ಕೊಡವ ವಿನ್ಯಾಸದ ಆಧಾರದ ಮೇಲೆ ನಾವು ತೀರ್ಮಾನ ಮಾಡುತ್ತೇವೆ. ವಾಸ್ತುಶಿಲ್ಪಿಗಳು ಬಣ್ಣ ಚನ್ನಾಗಿದೆಯೆಂದರೆ ಕೆಸರಿ ಬಣ್ಣವನ್ನು ಹಚ್ಚುತ್ತೇವೆ.  ಆದರೆ, ಕೆಲವೊಂದಿಷ್ಟು ಜನಕ್ಕೆ ಕೇಸರಿ ಬಣ್ಣದ ಅಲರ್ಜಿ ಇದೆ. ಅವರ ಧ್ವಜದಲ್ಲೂ (Flag) ಕೆಸರಿ ಇದೆ. ಅದನ್ನ ಯಾಕೆ ಇಟ್ಟುಕೊಂಡಿದ್ದಾರೆ. ಅವರ ಧ್ವಜವನ್ನು ಪೂರ್ತಿಯಾಗಿ ಹಸಿರು ಮಾಡಿಕೊಳ್ಳಲಿ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಟಾಂಗ್ ನೀಡಿದರು.

ಜನರಿಂದಲೇ ತೀರ್ಮಾನ:
ಮೈಸೂರಿನಲ್ಲಿ ಟಿಪ್ಪು ಸುಲ್ತಾನದ ಪ್ರತಿಮೆ ನಿರ್ಮಾಣ ವಿಚಾರದ ಬಗ್ಗೆ ಸ್ವತಃ ಕಾಂಗ್ರೆಸ್‌ ನಲ್ಲಿಯೇ ಒಮ್ಮತವಿಲ್ಲ. ತನ್ವೀರ್ ಸೇಠ್ (Tanveer Sait) ಅವರ ವೈಯಕ್ತಿಕ ಹೇಳಿಕೆಗೂ ಮತ್ತು ಪಕ್ಷಕ್ಕೆ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಒಂದು ವೇಳೆ ವಿರೋಧದ ನಡುವೆಯೂ ಟಿಪ್ಪು ಪ್ರತಿಮೆ ನಿರ್ಮಿಸಿದಲ್ಲಿ ಜನರೇ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸಚಿವ ನಾಗೇಶ್‌ ತಿಳಿಸಿದರು.
 

Follow Us:
Download App:
  • android
  • ios