ರಾಜ್ಯಾದ್ಯಂತ ಶಾಲೆಗಳ ಕೊಠಡಿಯಲ್ಲಿ ಏಕರೂಪದ ವಿವೇಕ ಬಣ್ಣ: ಮತ್ತೆ ಕೇಸರಿ ವಾಗ್ವಾದ ಶುರುವಾಗುವ ಸಾಧ್ಯತೆ
ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ 8,100 ಶಾಲಾ ಕಾಲೇಜು ಕೊಠಡಿಗೆ ಸ್ವಾಮಿ ವಿವೇಕಾನಂದ ಅವರು ಹೆಸರು ಇಡಲು ನಿರ್ಧಾರ ಮಾಡಲಾಗಿದ್ದು, ವಿವೇಕಾನಂದ ಪರಿಕಲ್ಪನೆಯ ಬಣ್ಣ ಬಳಸಲು ಸರ್ಕಾರ ಚಿಂತನೆ ನಡೆಸಿದೆ.
ಬೆಂಗಳೂರು (ನ.13): ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ 8,100 ಶಾಲಾ ಕಾಲೇಜು ಕೊಠಡಿಗೆ ಸ್ವಾಮಿ ವಿವೇಕಾನಂದ ಅವರು ಹೆಸರು ಇಡಲು ನಿರ್ಧಾರ ಮಾಡಲಾಗಿದ್ದು, ವಿವೇಕಾನಂದ ಪರಿಕಲ್ಪನೆಯ ಬಣ್ಣ ಬಳಸಲು ಸರ್ಕಾರ ಚಿಂತನೆ ನಡೆಸಿದೆ. ಹೌದು! ರಾಜ್ಯಾದ್ಯಂತ ಶಾಲೆಗಳಲ್ಲಿ ಕೊಠಡಿಯಲ್ಲಿ ಏಕರೂಪದ ವಿವೇಕಾನಂದ ಪರಿಕಲ್ಪನೆಯ ಬಣ್ಣ ಮಾಡಲು ಮುಂದಾಗಿದ್ದು, ರೂಂಗಳಿಗೆ ಸ್ವಾಮಿ ವಿವೇಕಾನಂದ ಹೆಸರಿಡಲು ಮುಂದಾಗಿದೆ. ಹೀಗಾಗಿ ಮತ್ತೊಂದು ಸುತ್ತಿನ ಕೇಸರಿ ವಾಗ್ವಾದ ಶುರುವಾಗುವ ಸಾಧ್ಯತೆಯಿದ್ದು, 992 ಕೋಟಿ ವೆಚ್ಚದಲ್ಲಿ ಶಾಲಾ-ಕಾಲೇಜು ಕೊಠಡಿಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.
ವಿರೋಧ ಯಾಕೆ?: ಕಮಲ ಸರ್ಕಾರದ ಕೇಸರೀಕರಣ ವಿರುದ್ಧ ಪ್ರತಿಪಕ್ಷಗಳ ಅಪಸ್ವರ ಕೇಳಿ ಬರುವ ಸಾಧ್ಯತೆಯಿದ್ದು, ಪಠ್ಯ ಪರಿಷ್ಕರಿಣದ ವೇಳೆ ಬಲ ಪಂಥೀಯ ವಿಚಾರ ಸೇರಿಸಲಾಗಿತ್ತು ಎಂಬ ಆರೋಪವಿದೆ. ಮತ್ತೊಮ್ಮೆ ಪಠ್ಯ ಮರು ಪರಿಸ್ಕರಿಸಲಾಗಿದ್ದು, ಭಗತ್ ಸಿಂಗ್ ಗದ್ಯ ಕೈಬಿಟ್ಟು ಆರ್‌ಎಸ್‌ಎಸ್ ಸಂಸ್ಥಾಪಕ ಕೆಬಿ ಹೆಡಗೇವಾರ್ ಭಾಷಣ ಸೇರಿಸಿದ್ದಾರೆಂಬ ಅಂಶ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಶಾಲಾ ಕೊಠಡಿಯ ಹೆಸರಲ್ಲಿ ಕ್ಯಾತೆ ಮಾಡಲಾಗುತ್ತಿದ್ದು, ಮೌಲ್ಯಕ್ಕೆ, ಆದರ್ಶಕ್ಕಾಗಿ ವಿವೇಕಾನಂದರ ಹೆಸರಿಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಸದ್ಯ ಮಕ್ಕಳನ್ನ ಆರ್ಕಷಿಸುವ ಸಲುವಾಗಿ ಶಿಕ್ಷಣ ಇಲಾಖೆ ಪ್ಲಾನ್ ಮಾಡಿಕೊಂಡಿದ್ದು, ಇದ್ರಲ್ಲೂ ರಾಜಕೀಯ ಬೇಡಾ..! ಬಣ್ಣಗಳಲ್ಲಿ ಬೇಧಬಾವ ಮಾಡದೆ ಮಕ್ಕಳಿಗೆ ಶಿಕ್ಷಣ ಮುಖ್ಯ. ಕಲಿಯಲು ಬಿಡಿ, ಪಠ್ಯಪುಸ್ತಕ, ಶಿಕ್ಷಣ ವಿಚಾರದಲ್ಲಿ ರಾಜಕೀಯ ನಿಲ್ಲಿಸಿ, ಗುಣಮಟ್ಟದ ಶಿಕ್ಷಣದ ಅಭಿವೃದ್ಧಿಗೆ ಕೈಜೋಡಿಸಿ ಮಕ್ಕಳ ಶಿಕ್ಷಣದಲ್ಲಿ ಪಾಲಿಟಿಕ್ಸ್ ನಿಲ್ಸಿ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.