ಶಿಕ್ಷಣ ಕ್ಷೇತ್ರದಿಂದ ದೇಶದಲ್ಲಿ ವಿಶಿಷ್ಟಸಾಧನೆ ಮಾಡಲು ಸಾಧ್ಯವಿದ್ದು, ರಾಜ್ಯದಲ್ಲಿ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು. 

ರಾಣಿಬೆನ್ನೂರು (ಅ.31): ಶಿಕ್ಷಣ ಕ್ಷೇತ್ರದಿಂದ ದೇಶದಲ್ಲಿ ವಿಶಿಷ್ಟಸಾಧನೆ ಮಾಡಲು ಸಾಧ್ಯವಿದ್ದು, ರಾಜ್ಯದಲ್ಲಿ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು. ತಾಲೂಕಿನ ಕೋಣನತಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. 

ಪ್ರತಿಯೊಂದು ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳು ನಿರ್ಮಾಣವಾಗಬೇಕು. ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣದ ದೊರಕಲಿ ಎಂಬ ಉದ್ದೇಶದಿಂದ ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದರು. ಶಾಸಕ ಅರುಣಕುಮಾರ ಪೂಜಾರ ಮಾತನಾಡಿದರು. ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಚ್‌. ಪಾಟೀಲ, ಅಕ್ಷರ ದಾಸೋಹ ನಿರ್ದೇಶಕ ಲಿಂಗರಾಜ ಸುತ್ತಕೋಟಿ, ನಿಟ್ಟೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಹೊನ್ನಜ್ಜೇರ, ಶಿವಶಂಕರ, ಮಾಕನೂರ, ಬೀರಪ್ಪ ಜೋಗೇರ, ಹನುಮಕ್ಕ ಹರಿಜನ, ಉಜ್ಜಪ್ಪ ಬಣಕಾರ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಮಕ್ಕಳ ಪೋಷಕರಿಂದ 100 ರೂ ದೇಣಿಗೆ ಸಂಗ್ರಹ ರದ್ದು: ಶಿಕ್ಷಣ ಸಚಿವ ಸೂಚನೆ

ಮಕ್ಕಳಿಗೆ ದೇಶದ ಇತಿಹಾಸ ತಿಳಿಸಿಕೊಡುವ ಕೆಲಸ: ತಿಪಟೂರು ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮತ್ತಿಹಳ್ಳಿ, ಬೈರಾಪುರ, ಸಿದ್ದಾಪುರ, ಕರೀಕೆರೆ, ಕೊನೇಹಳ್ಳಿ ಮತ್ತಿತರ ಗ್ರಾಮಗಳಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದ ಕಾರ್ಯಕ್ರಮಕ್ಕೆ, ಆಯಾ ಗ್ರಾಮದ ಗ್ರಾಮಸ್ಥರು ಪೂರ್ಣಕುಂಭ ಸ್ವಾಗತದೊಂದಿಗೆ ಅಭಿಯಾನವನ್ನು ಬರಮಾಡಿಕೊಂಡರು. ಈ ವೇಳೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮತ್ತೀಹಳ್ಳಿಯಲ್ಲಿ ಮಾತನಾಡಿ, ನಮ್ಮ ದೇಶ ಭಾರತಕ್ಕೆ ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದ್ದು ಈ ಬಗ್ಗೆ ಮಕ್ಕಳಿಗೆ ದೇಶದ ಮಹಾನ್‌ ನಾಯಕನ ಇತಿಹಾಸವನ್ನು ತಿಳಿಸುವ ಕೆಲಸವನ್ನು ಶಿಕ್ಷಣದ ಮೂಲಕ ಹೇಳಿಕೊಡಲಾಗುತ್ತಿದೆ. 

ಇಂತಹ ದೇಶದಲ್ಲಿ ನಾಡಪ್ರಭು ಕೆಂಪೇಗೌಡರಂತಹ ಮಹಾನ್‌ ನಾಯಕರು, ರಾಜ ಮಹಾರಾಜರು ಜನಪರವಾಗಿ ಜನರ ಹಿತಕ್ಕಾಗಿ ಆಡಳಿತ ನಡೆಸಿ ಜನರ ಮನಸ್ಸಿನಲ್ಲಿ ಅಜಾರಾಮರವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಂದ ನ.11 ರಂದು ಅನಾವರಣಗೊಳ್ಳುತ್ತಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೆಗೌಡ ಪ್ರತಿಮೆಗೆ ಪ್ರತಿ ಗ್ರಾಮದಿಂದ ಭೂಮಿ ತಾಯಿಯನ್ನು ಪೂಜೆ ಮಾಡಿ ಸಂಗ್ರಹಿಸುತ್ತಿರುವ ಮಣ್ಣನ್ನು ತಳಹದಿಯಲ್ಲಿ ಹಾಕುವ ಕೆಲಸವನ್ನು ತಾಲೂಕಿನಾದ್ಯಾಂತ ಮಾಡಲಾಗುತ್ತಿದೆ ಎಂದರು. 

5, 8ನೇ ತರಗತಿ ಮಕ್ಕಳಿಗೆ ಈ ವರ್ಷ ಹೊಸ ಪರೀಕ್ಷೆ: ಬಿ.ಸಿ.ನಾಗೇಶ್‌

ಈ ಸಂದರ್ಭದಲ್ಲಿ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಅದ್ಯಕ್ಷ ಚನ್ನಬಸವಣ್ಣ, ಸದಸ್ಯರಾದ ಎಂ.ಪಿ. ಹರೀಶ್‌, ರೇಣುಕಮ್ಮ ಓಂಕಾರಮೂರ್ತಿ, ರಮೇಶ್‌, ಪವಿತ್ರ ರಘು, ನಟರಾಜು, ಗ್ರೇಡ್‌-2 ತಹಸೀಲ್ದಾರ್‌ ಜಗನ್ನಾಥ್‌, ಸಿಡಿಪಿಒ ಓಂಕಾರಪ್ಪ, ಮೇಲ್ವಿಚಾರಕಿ ಪ್ರೇಮಾ, ರಾಜಸ್ವ ನೀರಿಕ್ಷಕರಾದ ರವಿಕುಮಾರ್‌, ಪಿಡಿಒ ಗೋಪಿನಾಥ್‌, ಸಮಾಜ ಸೇವಕ ಅರಣ್ಯ ಶಶಿಧರ್‌ ಭೈರಾಪುರ, ಲಿಂಗರಾಜು ಮತ್ತಿಹಳ್ಳಿ, ಬೋಜೆಗೌಡ, ಮಾಜಿ ಗ್ರಾಪಂ ಸದಸ್ಯ ಪರಮೇಶ್‌, ಲಿಂಗರಾಜು, ಗಂಗಾಧರ, ಮಲ್ಲೇಶ್‌, ಕಿಸಾನ್‌ ಸಂಘದ ಗ್ರಾಮ ಘಟಕದ ಅಧ್ಯಕ್ಷ ಶಿವಾನಂದಸ್ವಾಮಿ, ಪಟೇಲ್‌ ಜಯಣ್ಣ, ಅಶೋಕ್‌ ಮಾದಿಹಳ್ಳಿ, ಪ್ರದೀಪ್‌ ಕರೀಕೆರೆ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಯಣ್ಣ, ಪಂಚಾಕ್ಷರಯ್ಯ, ಉಮೇಶ್‌ ಅಂಚೆಕೊಪ್ಪಲು, ದಿನೇಶ್‌, ಲತೇಶ್‌, ಅರುಣ್‌ಕುಮಾರ್‌ ಸೇರಿದಂತೆ ಗ್ರಾಮ ಲೆಕ್ಕಿಗರು, ಪಂಚಾಯಿತಿ ಸಿಬ್ಬಂದಿ, ಸ್ತ್ರೀಶಕ್ತಿ ಸಂಘ, ಆರೋಗ್ಯ ಇಲಾಖೆ ಹಾಗೂ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.