Bengaluru Viral post : ಫ್ರೂಟ್ ಬೌಲ್ ಹಾಗೂ ಹಣ್ಣನ್ನು ಮಾರಾಟ ಮಾಡುವ ತಳ್ಳು ಗಾಡಿಯ ಗ್ಲಾಸ್ ಗೆ ಒಂದು ಪೋಸ್ಟ್ ಅಂಟಿಸಲಾಗಿದೆ. ಅದ್ರಲ್ಲಿ, ಹಾಯ್ ನಾನು ಕಾರ್ತಿಕ್. ಈ ಪೋಸ್ಟ್ ನಂತ್ರ ಸೇಲ್ ಹೆಚ್ಚಾಗುತ್ತೆ ಅಂತ ನಾನು 

 ಫ್ರೂಟ್ ಬೌಲ್ (Fruit bowl) ಮಾರಾಟ ಮಾಡೋ ಅಂಗಡಿಗೆ ಹೋದ್ರೆ ನಮಗಿಷ್ಟದ ಹಣ್ಣು ತಿಂದು ವಾಪಸ್ ಬರ್ತೇವೆ. ಅವರ ಮಾರಾಟ ಹೇಗಿದೆ, ಲಾಭ ಆಗ್ತಿದ್ಯಾ, ನಷ್ಟ ಆಗ್ತಿದ್ಯಾ ಅನ್ನೋದನ್ನೆಲ್ಲ ಆಲೋಚನೆ ಮಾಡೋಷ್ಟು ಟೈಂ ಜನರಿಗಿಲ್ಲ. ಆದ್ರೆ ಕೆಲವರು ಬೇರೆಯವರ ಸಹಾಯಕ್ಕೆ ನಿಲ್ತಾರೆ. ಬೀದಿ ಬದಿ ವ್ಯಾಪಾರಿಗಳ ವ್ಯಾಪಾರ ಹೆಚ್ಚಿಸಲು ತಮ್ಮ ಕೈಲಾದ ಸಹಾಯ ಮಾಡ್ತಾರೆ. ಹಣ ಪಡೆದು, ವ್ಲಾಗ್, ಯೂಟ್ಯೂಬ್ ಗಳಲ್ಲಿ ವಿಡಿಯೋ ಪೋಸ್ಟ್ ಮಾಡಿ ಪ್ರಮೋಶನ್ ಮಾಡುವ ಕಾಲ ಇದು. ಆದ್ರೆ ಇಲ್ಲೊಬ್ಬರು ಬರೀ ಅಂಗಡಿ ಗ್ಲಾಸ್ ಮೇಲೆ ಒಂದು ಪೋಸ್ಟ್ ಹಾಕಿ ವ್ಯಾಪಾರ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.

ವೈರಲ್ ಆಯ್ತು ಪೋಸ್ಟ್

ಫ್ರೂಟ್ ಬೌಲ್ ಹಾಗೂ ಹಣ್ಣನ್ನು ಮಾರಾಟ ಮಾಡುವ ತಳ್ಳು ಗಾಡಿಯ ಗ್ಲಾಸ್ ಗೆ ಒಂದು ಪೋಸ್ಟ್ ಅಂಟಿಸಲಾಗಿದೆ. ಅದ್ರಲ್ಲಿ, ಹಾಯ್ ನಾನು ಕಾರ್ತಿಕ್. ಈ ಪೋಸ್ಟ್ ನಂತ್ರ ಸೇಲ್ ಹೆಚ್ಚಾಗುತ್ತೆ ಅಂತ ನಾನು ಇವರಿಗೆ ಪ್ರಾಮೀಸ್ ಮಾಡಿದ್ದೇನೆ. ದಯವಿಟ್ಟು ಇವರಿಂದ ಹಣ್ಣು ಖರೀದಿಸಿ ಅಂತ ಗ್ಲಾಸ್ ಮೇಲೆ ಬರೆಯಲಾಗಿದೆ. ಎಕ್ಸ್ ಖಾತೆಯಲ್ಲಿ ಅಶ್ವಿನ್ ಕುಮಾರ್ ಎನ್ನುವವರು ಇದ್ರ ಫೋಟೋ ಪೋಸ್ಟ್ ಮಾಡಿದ್ದಾರೆ. ಇದು ಇಂದಿನ @peakbengaluru. ಇಷ್ಟವಾಯಿತು ಅಂತ ಶೀರ್ಷಿಕೆ ಹಾಕಿದ್ದಾರೆ.

ಪಶ್ಚಿಮ ಘಟ್ಟದ ಎದೆ ಬಗೆದ ಸತ್ಯ: ಅಧ್ಯಯನ ವರದಿ ಬಿಚ್ಚಿಟ್ಟ ಮಹಾ ಅಪಾಯ, ಶೇ. 60.7ರಷ್ಟು

ಇದ್ರಲ್ಲಿ ಕಾರ್ತಿಕ್ ಯಾರು, ಅವರ್ಯಾಕೆ ಈ ಪೋಸ್ಟ್ ಹಾಕಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದ್ರೆ ಕಾರ್ತಿಕ್ ಬುದ್ಧಿವಂತಿಕೆಯನ್ನು ಜನರು ಮೆಚ್ಚಿದ್ದಾರೆ. ಕಾರ್ತಿಕ್ ಕಾರಣಕ್ಕೆ ಪೋಸ್ಟ್ ಮಾತ್ರ ವೈರಲ್ ಆಗಿಲ್ಲ, ಅಂಗಡಿಯಲ್ಲಿ ವ್ಯಾಪಾರ ಹೆಚ್ಚಾಗೋದು ಗ್ಯಾರಂಟಿ. ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಈ ಪೋಸ್ಟ್ 97 ಸಾವಿರಕ್ಕಿಂತಲೂ ಹೆಚ್ಚು ವೀವ್ಸ್ ಪಡೆದಿದೆ. ನೂರಾರು ಮಂದಿ ಇದನ್ನು ರೀ ಪೋಸ್ಟ್ ಮಾಡಿದ್ದಲ್ಲದೆ ಅನೇಕರು ಕಮೆಂಟ್ ಮಾಡಿದ್ದಾರೆ. ಈ ಅಂಗಡಿ ಎಲ್ಲಿದೆ ಅಂತ ಕೆಲವರು ಕೇಳಿದ್ದಾರೆ. 

ನಿಮ್ಹಾನ್ಸ್‌ ಆಸ್ಪತ್ರೆಗೆ ಅನಂತ್ ಸುಬ್ಬರಾವ್ ದೇಹದಾನ; ಸಾವಿನಲ್ಲೂ ಸಾರ್ಥಕತೆ ಮೆರೆದ ಹೋರಾಟಗಾರ!

ಈ ಅಂಗಡಿಯಿಂದ ಹಣ್ಣು ಖರೀದಿ ಮಾಡುವ ಆಸಕ್ತಿಯನ್ನು ಕೆಲವರು ತೋರಿಸಿದ್ದಾರೆ. ಮತ್ತೊಂದಿಷ್ಟು ತಮಾಷೆ ಕಮೆಂಟ್ ಕೂಡ ನೀವು ನೋಡ್ಬಹುದು. ಇಲ್ಲಿ ಇಂಟರೆಸ್ಟಿಂಗ್ ವಿಷ್ಯ ಅಂದ್ರೆ ಅಂಗಡಿ ಮಾಲೀಕನೇ ಕಾರ್ತಿಕ್ ಅಂತ ಒಬ್ಬರು ತಮಾಷೆ ಮಾಡಿದ್ರೆ ಮತ್ತೊಬ್ಬರು ಹಣ್ಣು ಖರೀದಿಗೆ ನನ್ನ ಗೆಳೆಯನನ್ನು ಕಳಿಸ್ತೇನೆ ಅಂತ ಕಮೆಂಟ್ ಮಾಡಿದ್ದಾರೆ. ಅಶ್ವಿನ್ ಮಾಹಿತಿ ಪ್ರಕಾರ, ಸನ್ನಿ ಬಿಸಿನೆಸ್ ಸೆಂಟರ್, ಬಿನ್ನಮಂಗಲ, ಸ್ಟೇಜ್ 1, ಇಂದಿರಾನಗರದಲ್ಲಿ ಪೋಸ್ಟ್ ಹಾಕಿರುವ ಈ ತಳ್ಳು ಹಣ್ಣಿನಂಗಡಿ ಇದೆ.

ಕಮೆಂಟ್ ಸೆಕ್ಷನ್ ನಲ್ಲಿ ಕಾರ್ತಿಕ್ ಪೋಸ್ಟ್ ಕೂಡ ಇದೆ. ಆದ್ರೆ ಪೋಸ್ಟ್ ಹಾಕಿರುವ ಕಾರ್ತಿಕ್ ಇವರೇನಾ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಕಾರ್ತಿಕ್ ಎನ್ನುವವರು ಕಮೆಂಟ್ ಸೆಕ್ಷನ್ ನಲ್ಲಿ, ನಾನೇ ಈ ಪೋಸ್ಟ್ ಹಾಕಿದ್ದು, ಇದು ಎಕ್ಸ್ ನಲ್ಲಿ ವೈರಲ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಇಲ್ಲಿಂದ ಹಣ್ಣು ತೆಗೆದುಕೊಳ್ತಿದ್ದೀರಾ ಅಂತ ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಕೆಲವರು ಬೆಂಗಳೂರಿಗರ ಮನಸ್ಥಿತಿಯನ್ನು ಹೊಗಳುತ್ತಿದ್ದಾರೆ. ಸಮುದಾಯ ಮನೋಭಾವವೇ ಮತ್ತು ದಯೆಯಿಂದ ಬೆಂಗಳೂರು ನಿಜವಾಗಿಯೂ ವಿಶೇಷವಾಗಿದೆ ಎಂದು ಜನರು ಕಮೆಂಟ್ ಮಾಡಿದ್ದಾರೆ.

Scroll to load tweet…