Ban on MES: ಕರ್ನಾಟಕ ಬಂದ್‌ ಕೈಬಿಡಿ ಎಂದ ಸಿಎಂ: ಮಾಡಿಯೇ ಸಿದ್ಧ: ವಾಟಾಳ್‌

*  ಎಂಇಎಸ್‌ ಪುಂಡಾಟಿಕೆಗೆ ಸಂಬಂಧಿಸಿದಂತೆ ಕಠಿಣ ಕ್ರಮ 
*  ಸಂಘಟನೆ ನಿಷೇಧಿಸುವ ಬಗ್ಗೆ ಕಾನೂನಾತ್ಮಕವಾಗಿ ಪರಿಶೀಲನೆ 
*  ಬಂದ್‌ ಮಾಡುವುದು ಎಲ್ಲ ಸಮಸ್ಯೆಗಳಿಗೆ ಉತ್ತರವಲ್ಲ

Vatal Nagaraj React on CM Basavaraj Bommai Statement grg

ಹುಬ್ಬಳ್ಳಿ(ಡಿ.30):  ಎಂಇಎಸ್‌ ನಿಷೇಧಿಸಬೇಕೆಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಡಿ.31ಕ್ಕೆ ಕರೆ ನೀಡಿರುವ ‘ಕರ್ನಾಟಕ ಬಂದ್‌’ ಕೈ ಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮನವಿ ಮಾಡಿದ್ದಾರೆ. ಬಿಜೆಪಿ ಕಾರ್ಯಕಾರಿಣಿ(BJP Meeting) ಬಳಿಕ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಎಂಇಎಸ್‌(MES) ಪುಂಡಾಟಿಕೆಗೆ ಸಂಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಸಂಘಟನೆ ನಿಷೇಧಿಸುವ ಬಗ್ಗೆ ಕಾನೂನಾತ್ಮಕವಾಗಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಬಂದ್‌(Bandh) ಮಾಡುವುದು ಎಲ್ಲ ಸಮಸ್ಯೆಗಳಿಗೆ ಉತ್ತರವಲ್ಲ. ಬಂದ್‌ ಕರೆ ಬಿಟ್ಟು ಬೇರೆ ರೀತಿಯ ಹೋರಾಟಗಳಿವೆ. ಕೋವಿಡ್‌(Covid19) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಂದ್‌ ಮಾಡುವುದು ಸರಿಯಲ್ಲ. ಕನ್ನಡಪರ ಸಂಘಟನೆಗಳು(Kannada Organizations) ಬಂದ್‌ ಕರೆಯನ್ನು ಕೈಬಿಡಬೇಕೆಂದು ಮನವಿ ಮಾಡಿದರು. ಬಲವಂತದ ಬಂದ್‌ ಮಾಡಿದರೆ ಅಲ್ಲೇ ಉತ್ತರ ಕೊಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದರು.

Karnataka Bandh: ನೈತಿಕ ಬೆಂಬಲ ಎಂದ ಸಿದ್ದು, ಬಂದ್ ಬೇಕೇನ್ರಿ ಎಂದ ಡಿಕೆಶಿ, ಮೂಡದ ಒಮ್ಮತ

ಕನ್ನಡ ಸಂಘಟನೆಗಳ ಒಡಕು ಮತ್ತೆ ಬಹಿರಂಗ

ಬೆಂಗಳೂರು: ಎಂಇಎಸ್‌ ನಿಷೇಧಕ್ಕೆ ಆಗ್ರಹಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್‌ ಕನ್ನಡಪರ ಸಂಘಟನೆಗಳಲ್ಲಿನ ಒಡಕನ್ನು ಮತ್ತೊಮ್ಮೆ ಬಹಿರಂಗಗೊಳಿಸಿದೆ.

ಕನ್ನಡ ಧ್ವಜ(Kannada Flag) ಸುಟ್ಟ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬಸವಣ್ಣರ ಪ್ರತಿಮೆಗಳನ್ನು ವಿರೂಪಗೊಳಿಸಿದ ಎಂಇಎಸ್‌ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಒಕ್ಕೂಟದ ವಾಟಾಳ್‌ ನಾಗರಾಜ್‌(Vatal Nagaraj) ಕರೆ ನೀಡಿರುವ ಬಂದ್‌ಗೆ ಹಲವು ಕನ್ನಡಪರ ಸಂಘಟನೆಗಳು ಬಹಿರಂಗವಾಗಿಯೇ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

ಕರ್ನಾಟಕ ರಕ್ಷಣಾ ವೇದಿಕೆಯಿಂದ (ಟಿ.ಎ.ನಾರಾಯಣಗೌಡ ಬಣ) ಡಿ.31ರ ರಾಜ್ಯ ಬಂದ್‌(Karnataka Bandh) ಬದಲಾಗಿ ಎಂಇಎಸ್‌ ನಿಷೇಧಕ್ಕೆ ಒತ್ತಾಯಿಸಿ ಡಿ.30ರಂದು ಬೆಂಗಳೂರಿನಲ್ಲಿ(Bengaluru) ಟೌನ್‌ಹಾಲ್‌ನಿಂದ ರಾಜಭವನದವರೆಗೆ ಪ್ರತಿಭಟನಾ ರಾರ‍ಯಲಿ ಹಮ್ಮಿಕೊಳ್ಳಲಾಗಿದೆ. ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ನಾರಾಯಣಗೌಡ ನೇರವಾಗಿ ಹೇಳಿದ್ದಾರೆ.

ಉಳಿದಂತೆ ಜಯ ಕರ್ನಾಟಕ ರಾಜ್ಯಾಧ್ಯಕ್ಷ ಜಗದೀಶ್‌ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ(Karnataka Rakshna Vedike) ಪ್ರವೀಣ್‌ ಶೆಟ್ಟಿ ಅವರು ವಾಟಾಳ್‌ ನಾಗರಾಜ್‌ಗೆ ಪತ್ರ ಬರೆದು ಬಂದ್‌ ಮುಂದೂಡುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಕನ್ನಡಪರ ಸಂಘಟನೆಗಳಲ್ಲೇ ಒಡಕು ಕಾಣಿಸಿಕೊಂಡಿದೆ.

ನಾಳೆ ಕರ್ನಾಟಕ ಬಂದ್‌ ಶತಃಸಿದ್ಧ: ವಾಟಾಳ್‌

ಬೆಳಗಾವಿ(Belagavi): ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಆಗ್ರಹಿಸಿ ಡಿ.31ರಂದು ಕರೆ ನೀಡಿರುವ ಕರ್ನಾಟಕ ಬಂದ್‌ ವಿಚಾರದಲ್ಲಿ ಯಾವುದೇ ಬದಲಾವಣೆ ಪ್ರಶ್ನೆಯೇ ಇಲ್ಲ. ಸೂರ್ಯ ಈ ಕಡೆ ಬಂದು, ಚಂದ್ರ ಆ ಕಡೆ ಹೋದರೂ ಬಂದ್‌ ನಡೆದೇ ನಡೆಯುತ್ತದೆ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ ಸ್ಪಷ್ಟಪಡಿಸಿದ್ದಾರೆ. 

Karnataka Bandh: ಕರುನಾಡು ಬಂದ್‌ಗೆ ಬೆಳಗಾವಿಯಲ್ಲೇ ಇಲ್ಲ ಬೆಂಬಲ..!

ಸುದ್ದಿಗಾರರ ಜತೆ ಮಾತನಾಡಿದ ಅವರು, ಅಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್‌ ಆಗಲಿದ್ದು ಬೆಂಗಳೂರಿನ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು. ಇದೇವೇಳೆ ರಾಜ್ಯ ಸರ್ಕಾರ(Government of Karnataka) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ನಕ್ಷತ್ರ ನೋಡಿಕೊಂಡು, ಪಂಚಾಂಗ ನೋಡಿಕೊಂಡು ಎಂಇಎಸ್‌ ನಿಷೇಧ ಮಾಡಲಿಕ್ಕಾಗದು. ಕ್ಯಾಬಿನೆಟ್‌ ತೀರ್ಮಾನ ಕೈಗೊಂಡು ಕೇಂದ್ರಕ್ಕೆ ಸಿಎಂ ಹೋಗಿ ಬದ್ಧತೆ ತೋರಬೇಕು ಎಂದು ಆಗ್ರಹಿಸಿದರು.

ಡಿ. 31ಕ್ಕೆ ಹೆದ್ದಾರಿಗಳು ಬಂದ್

ದೊಡ್ಡಬಳ್ಳಾಪುರ: ಬೆಳಗಾವಿಯಲ್ಲಿ ಎಂಇಎಸ್‌ ಪುಂಡಾಟಿಕೆ ಖಂಡಿಸಿ ಮತ್ತು ಎಂಇಎಸ್‌ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ಕರೆ ನೀಡಲಾಗಿರುವ ಕರ್ನಾಟಕ ಬಂದ್‌ ಬೆಂಬಲಿಸಿ ದೊಡ್ಡ ಬಳ್ಳಾಪುರದ ಕನ್ನಡ (Kannada) ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ (Protest) ನಡೆಸಲು ತೀರ್ಮಾನಿಸಲಾಗಿದೆ.
 

Latest Videos
Follow Us:
Download App:
  • android
  • ios