Karnataka Bandh: ಕರುನಾಡು ಬಂದ್‌ಗೆ ಬೆಳಗಾವಿಯಲ್ಲೇ ಇಲ್ಲ ಬೆಂಬಲ..!
* ಎಂಇಎಸ್ ವಿರುದ್ಧ ಸಿಎಂ ಬೊಮ್ಮಾಯಿ ಕಠೋರ ನಿಲುವು ಕೈಗೊಂಡಿದ್ದು ಐತಿಹಾಸಿಕ ನಿರ್ಧಾರ
* ಎಂಇಎಸ್ ನಿಷೇಧಿಸಲು ಕಾನೂನು ರೀತಿ ಕ್ರಮ ಕೈಗೊಳ್ಳಬೇಕಿದೆ
* ವಾಟಾಳ್ ನಾಗರಾಜ ಬೆಂಗಳೂರಲ್ಲಿ ಕುಳಿತು ಕರ್ನಾಟಕ ಬಂದ್ ಅಂದ್ರೆ ಹೇಗೆ?
ಬೆಳಗಾವಿ(ಡಿ.26): ಡಿ.31ರ ಕರ್ನಾಟಕ ಬಂದ್‌ಗೆ(Karnataka Bandh) ಬೆಂಬಲಿಸದಿರಲು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ನಿರ್ಧರಿಸಿದೆ. ಹೌದು, ಈ ಮೂಲಕ ಕರ್ನಾಟಕ ಬಂದ್‌ಗೆ ಬೆಳಗಾವಿಯಲ್ಲೇ(Belagavi) ಬೆಂಬಲ ಇಲ್ಲದಂತಾಗಿದೆ.
ಎಂಇಎಸ್(MES) ನಿಷೇಧಕ್ಕೆ ಆಗ್ರಹಿಸಿ ಡಿ.31ರಂದು ಕರ್ನಾಟಕ ಬಂದ್‌ಗೆ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಎಂಇಎಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಕಠೋರ ನಿಲುವು ಕೈಗೊಂಡಿದ್ದು ಐತಿಹಾಸಿಕ ನಿರ್ಧಾರವಾಗಿದೆ. ದೇಶದ್ರೋಹ, ಗೂಂಡಾ ಕಾಯ್ದೆಗೆ ಕ್ರಮ ಕೈಗೊಂಡಿದ್ದು ಐತಿಹಾಸಿಕ ನಿರ್ಧಾರವಾಗಿದೆ. ಈ ಹಿಂದೆ ಸಾಮಾನ್ಯ ಐಪಿಸಿ ಸೆಕ್ಷನ್ ಅಡಿ ಕೇಸ್ ಹಾಕ್ತಿದ್ರು, ಅವರು ಜಾಮೀನು ಪಡೀತಿದ್ರು. ಈಗ ಎಷ್ಟೋ ಎಂಇಎಸ್ ಗೂಂಡಾಗಳು ಹೆದರಿ ಊರು ಬಿಟ್ಟಿದ್ದಾರೆ. ಎಂಇಎಸ್ ನಿಷೇಧಿಸಲು ಕಾನೂನು ರೀತಿ ಕ್ರಮ ಕೈಗೊಳ್ಳಬೇಕಿದೆ ಅಂತ ತಿಳಿಸಿದ್ದಾರೆ.
Karnataka Bandh: ಕರ್ನಾಟಕ ಬಂದ್‌ಗೆ ಯಶ್ ಸಪೋರ್ಟ್ ಮಾಡ್ತಾರಾ.?
ಡಿ.31ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ ವಾಟಾಳ್ ನಾಗರಾಜ್(Vatal Nagaraj) ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಶೋಕ ಚಂದರಗಿ ಅವರು, ವಾಟಾಳ್ ನಾಗರಾಜ ಬೆಂಗಳೂರಲ್ಲಿ ಕುಳಿತು ಕರ್ನಾಟಕ ಬಂದ್ ಅಂದ್ರೆ ಹೇಗೆ?. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಕೋವಿಡ್‌ನಿಂದ(Covid19) ಜನ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಡಿ.31 ಹೊಸ ವರ್ಷದ ಮುನ್ನಾ ದಿನ ವ್ಯಾಪಾರ, ವಹಿವಾಟಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ.ಹೀಗಾಗಿ ನಾವು ಕರ್ನಾಟಕ ಬಂದ್ ನಿರ್ಧಾರ ಒಪ್ಪೋದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ 28 ಸಂಸದರು ಎಂಇಎಸ್ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರವನ್ನು(Central Government) ಆಗ್ರಹಿಸಬೇಕು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಸಂಸದರ ಮನೆ, ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಅಂತ ಅಶೋಕ ಚಂದರಗಿ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪರ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ, ಮೂಡದ ಒಮ್ಮತ
ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ, ನಾಡಧ್ವಜ ದಹನ ಮಾಡಿರುವ ಎಂಇಎಸ್ ಸಂಘಟನೆಯ ನಿಷೇಧಕ್ಕಾಗಿ ಡಿ.31ರಂದು ಕರೆದಿರುವ ಕರ್ನಾಟಕ ಬಂದ್ ಕೇವಲ ಕನ್ನಡಪರ ಸಂಘಟನೆಗಳ ಬಂದ್ ಅಲ್ಲ, ಇಡೀ ನಾಡಿನ ಸ್ವಾಭಿಮಾನಿ ಕನ್ನಡಿಗರ ಬಂದ್ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ(Praveen Kumar Shetty) ಹೇಳಿದ್ದಾರೆ. ಆದರೆ ಈ ಬಂದ್ ಬಗ್ಗೆ ಒಂದಷ್ಟು ಗೊಂದಲಗಳಿವೆ. ಕನ್ನಡ ಚಿತ್ರರಂಗ ನೈತಿಕ ಬೆಂಬಲ ನೀಡುವುದಾಗಿ ಹೇಳಿದೆ. ನಮಗೆ ನೈತಿಕ ಬೆಂಬಲ ಬೇಡ, ಬಾಹ್ಯ ಬೆಂಬಲ ಘೋಷಿಸಿ ಎಂದು ಕನ್ನಡಪರ ಸಂಘಟನೆಗಳು(Kannada Organizations) ಒತ್ತಾಯಿಸಿವೆ.
Karnataka Bandh: ಕನ್ನಡಮ್ಮನಿಗೆ ಬೈದ್ರೆ ಸಾಯ್ಸೋಕು ಹೇಸಲ್ಲ: ಅದಿತಿ ಪ್ರಭುದೇವ
ನೈತಿಕ ಬೆಂಬಲ ಎಂದ ಸ್ಯಾಂಡಲ್‌ವುಡ್, ಕನ್ನಡ ಸಂಘಟನೆಗಳ ಆಕ್ರೋಶ
ಮಹಾರಾಷ್ಟ್ರದಲ್ಲಿ (Maharashtra) ಕರ್ನಾಟಕ ಧ್ವಜ(Kannada Flag) ಸುಟ್ಟ ಘಟನೆ ಹಾಗೂ ಬೆಳಗಾವಿಯಲ್ಲಿ (Belagavi) ಎಂಇಎಸ್‌ನ ಪುಂಡಾಟಿಕೆಯನ್ನು ವಿರೋಧಿಸಿ ಡಿ.31ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ(Sandalwood) ನೈತಿಕ ಬೆಂಬಲ ವ್ಯಕ್ತಪಡಿಸಿದೆ.
'ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗ ಈಗಷ್ಟೆ ಚೇತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪ್ರತಿ ವಾರ ಚಿತ್ರಗಳು ಬಿಡುಗಡೆ ಆಗುತ್ತಿವೆ. ಹಲವು ಚಿತ್ರಗಳು ಚಿತ್ರೀಕರಣದಲ್ಲಿವೆ. ಇಂಥ ಸಂದರ್ಭದಲ್ಲಿ ಚಿತ್ರರಂಗವನ್ನು ಸಂಪೂರ್ಣವಾಗಿ ಬಂದ್ ಮಾಡಲು ಸಾಧ್ಯವಿಲ್ಲ. ಚಿತ್ರೋದ್ಯಮ ಕನ್ನಡಪರವಾದ ಯಾವುದೇ ರೀತಿಯ ಹೋರಾಟಗಳಿಗೆ ಜತೆಯಾಗಿರುತ್ತದೆ. ಆದರೆ, ಡಿ. 31ರಂದು ಚಿತ್ರಗಳು ಬಿಡುಗಡೆಗೆ ತಯಾರಿ ಮಾಡಿಕೊಂಡಿವೆ. ಈಗ ಇದ್ದಕ್ಕಿದ್ದಂತೆ ಸಿನಿಮಾ ಪ್ರದರ್ಶನ ಸೇರಿದಂತೆ ಚಿತ್ರರಂಗದ ಚಟುವಟಿಕೆಗಳನ್ನು ಬಂದ್ ಮಾಡುವುದು ಕಷ್ಟವಾಗುತ್ತದೆ. ಹೋರಾಟಕ್ಕೆ ನೈತಿಕ ಬೆಂಬಲ(Moral Support) ಖಂಡಿತ ಇರುತ್ತದೆ’ ಎಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್.ಜೈರಾಜ್ ಹೇಳಿದರು.
'ನಮಗೆ ನೈತಿಕ ಬೆಂಬಲ ಬೇಡ. ಸಂಫೂರ್ಣ ಬೆಂಬಲಕ್ಕೆ ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ ನಡೆಸಿದರು. ಕನ್ನಡ ಚಿತ್ರರಂಗ ಈ ಹೋರಾಟದ ಜೊತೆ ನಿಲ್ಲಬೇಕು' ಎಂದು ಒತ್ತಾಯಿಸಿದರು.