ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮೈಸೂರಿನ ಉದಯಗಿರಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ನ ನಿರುದ್ಯೋಗಿ ನಾಯಕರು ಆರ್‌ಎಸ್‌ಎಸ್‌ ಮತ್ತು ಮುಸ್ಲಿಮರ ಬಗ್ಗೆ ದೂಷಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೆಯೇ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಕೂಡ ಆರೋಪಿಸಿದ್ದಾರೆ.

ಹುಬ್ಬಳ್ಳಿ (ಫೆ.19):  ಮೈಸೂರಿನ ಉದಯಗಿರಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್‌ನ ನಿರುದ್ಯೋಗಿ ನಾಯಕರ ಕಡೆಯಿಂದ ಆ ಬಗ್ಗೆ ಮಾತನಾಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ಈ ಮೂಲಕ ಆರ್‌ಎಸ್‌ಎಸ್‌ ಕುರಿತು ಬಿ.ಕೆ.ಹರಿಪ್ರಸಾದ ನೀಡಿರುವ ಹೇಳಿಕೆಗೆ ಕಿಡಿ ಕಾರಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ನಿರುದ್ಯೋಗಿ ನಾಯಕರಿಗೆ ಮುಸ್ಲಿಮರ ಸಮರ್ಥನೆ, ಆರ್‌ಎಸ್‌ಎಸ್‌ ದೂಷಣೆ ಮಾಡುವುದೇ ದೊಡ್ಡ ಕಾಯಕವೆಂಬಂತಾಗಿದೆ ಎಂದು ತಿರುಗೇಟು ನೀಡಿದರು.

ಪಾಕಿಸ್ತಾನಕ್ಕೆ, ಭಯೋತ್ಪಾದಕರಿಗೆ ಬೆಂಬಲದ ರೀತಿಯಲ್ಲಿ ಈ ಹಿಂದೆ ಕಾಂಗ್ರೆಸ್‌ ನಾಯಕರು ಹೇಳಿಕೆ ನೀಡಿದ್ದರು. ದೇಶವನ್ನು ಮಾರಿಯಾದರೂ, ದೇಶ ಹಿತವನ್ನು ಕಡೆಗಣಿಸಿದರೂ ಅಧಿಕಾರದಲ್ಲಿರಬೇಕು ಎಂಬುದು ಕಾಂಗ್ರೆಸ್‌ನ ನೀತಿ ಎಂದರು.

ಇದನ್ನೂ ಓದಿ: ಉದಯಗಿರಿ ಠಾಣೆ ಮೇಲೆ ದಾಳಿ ಪ್ರಕರಣ: ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಇಂಥ ಕೃತ್ಯ ನಡೆಯುತ್ತವೆ: ಯದುವೀರ್ ಒಡೆಯರ್ ಕಿಡಿ

ಹಿಂದೂ ವಿರೋಧಿ ನೀತಿಗೆ ಬಗ್ಗೆ ಮಾತನಾಡಿದರೆ ಅವರಿಗೆ ಕಾಂಗ್ರೆಸ್‌ನಲ್ಲಿ ಹುದ್ದೆ ಕೊಡುತ್ತಾರೆ. ಹರಿಯಾಣ ಉಸ್ತುವಾರಿಗಳು ತಾವೇ ಪ್ರಧಾನಿಗಳಂತೆ ಮಾತನಾಡುತ್ತಿದ್ದಾರೆ. ಬಿ.ಕೆ. ಹರಿಪ್ರಸಾದ ಏನೇ ಮಾತನಾಡಿದರೂ ಸಚಿವ ಸ್ಥಾನ ಸಿಗಲ್ಲ. ಅವರನ್ನು ಸಿದ್ದರಾಮಯ್ಯ ಸಚಿವರನ್ನಾಗಿ ಮಾಡಲ್ಲ ಎಂದರು.

ಇದನ್ನೂ ಓದಿ: ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ: ಗೃಹ ಸಚಿವ ಪರಮೇಶ್ವರ್

ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಗೃಹಲಕ್ಷ್ಮಿ, ಅನ್ನಭಾಗ್ಯದ ಹೆಚ್ಚುವರಿ ಅಕ್ಕಿ ಇಲ್ಲ, ಹಣನೂ ಇಲ್ಲ. ಇದಕ್ಕೆಲ್ಲ ಮೋದಿ ಸರ್ಕಾರ ಕಾರಣ ಎಂದು ಸಿಎಂ ಯಾವಾಗಲೂ ಬೊಟ್ಟು ತೋರಿಸುತ್ತಾರೆ ಎಂದ ಅವರು, ಕೇಂದ್ರ ಸರ್ಕಾರ ₹28ಗೆ ಅಕ್ಕಿ ನೀಡಲು ಸಿದ್ಧವಿದೆ. ಇದಕ್ಕೆ ಸಚಿವ ಕೆ.ಎಚ್‌. ಮುನಿಯಪ್ಪ ಮೊದಲಿಗೆ ಸ್ಪಂದಿಸಿದ್ದರು. ಆದರೆ, ಈ ವರೆಗೆ ರಾಜ್ಯ ಸರ್ಕಾರ ಆರ್ಡರ್ ನೀಡಿಲ್ಲ. ಕೇಂದ್ರದಿಂದ ಅಕ್ಕಿ ಖರೀದಿ ಮಾಡಲು ರಾಜ್ಯ ಸರ್ಕಾರ ಸಿದ್ಧವಿಲ್ಲ. ಕೇಂದ್ರದಿಂದ ಅಕ್ಕಿ ಖರೀದಿಸಿದರೆ 2080 ಕೋಟಿ ರಾಜ್ಯಕ್ಕೆ ಉಳಿತಾಯ ಆಗುತ್ತದೆ. ಆದರೆ, ರಾಜ್ಯ ಸರ್ಕಾರ ಅದನ್ನು ಮಾಡುತ್ತಿಲ್ಲ. ಏಕೆಂದರೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಹಾಲಿನದರ, ಪೆಟ್ರೋಲ್, ಜನನ ಮರಣ ಪತ್ರ ಸಹ ದರ ಸಹ ಜಾಸ್ತಿಯಾಗಿದೆ ಎಂದರು.