ಐಟಿಬಿಪಿ ಯೋಧರಿಗೆ ವರ್ಷದಲ್ಲಿ 100 ದಿನ ಕುಟುಂಬ ಸ್ನೇಹಿ ಕರ್ತವ್ಯ: ಅಮಿತ್ ಶಾ
‘ದೇಶದ ಗಡಿ ರಕ್ಷಣೆಗೆ ದುರ್ಗಮ ಪ್ರದೇಶದಲ್ಲಿ ಹಗಲಿರುಳು ದುಡಿವ ‘ಹಿಮ ವೀರ’ ಐಟಿಬಿಪಿ (ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್) ಸೈನಿಕರು ವರ್ಷಕ್ಕೆ 100 ದಿನಗಳ ಕಾಲ ತಮ್ಮ ಕುಟುಂಬದ ಜೊತೆಗಿರಲು ಸಾಧ್ಯವಾಗುವಂತೆ ಕರ್ತವ್ಯದ ಅವಧಿಯನ್ನು ನಿಗದಿಪಡಿಸುವ ಬಗ್ಗೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಶ್ವಾಸನೆ ನೀಡಿದರು.
ಬೆಂಗಳೂರು (ಜ.01): ‘ದೇಶದ ಗಡಿ ರಕ್ಷಣೆಗೆ ದುರ್ಗಮ ಪ್ರದೇಶದಲ್ಲಿ ಹಗಲಿರುಳು ದುಡಿವ ‘ಹಿಮ ವೀರ’ ಐಟಿಬಿಪಿ (ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್) ಸೈನಿಕರು ವರ್ಷಕ್ಕೆ 100 ದಿನಗಳ ಕಾಲ ತಮ್ಮ ಕುಟುಂಬದ ಜೊತೆಗಿರಲು ಸಾಧ್ಯವಾಗುವಂತೆ ಕರ್ತವ್ಯದ ಅವಧಿಯನ್ನು ನಿಗದಿಪಡಿಸುವ ಬಗ್ಗೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಶ್ವಾಸನೆ ನೀಡಿದರು. ಅವರು ಶನಿವಾರ ದೇವನಹಳ್ಳಿ ಸಮೀಪದ ಆವತಿ ಗ್ರಾಮದಲ್ಲಿ ಬಿಪಿಆರ್‌ಆ್ಯಂಡ್‌ಡಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ, ಬಳಿಕ ಐಟಿಬಿಪಿ ಬೆಂಗಳೂರು ವಿಭಾಗದ ಕಟ್ಟಡವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.
‘ಸಿಎಪಿಎಫ್‌ನಲ್ಲಿಯೇ ಐಟಿಬಿಪಿ ಯೋಧರ ಪಾತ್ರ ಮಹತ್ವದ್ದು. ಭಾರತದ ಒಂದಿಂಚೂ ಜಮೀನು ಅತಿಕ್ರಮಣವಾಗದಂತೆ ಐಟಿಬಿಪಿ ಯೋಧರು ಎಚ್ಚರಿಕೆಯ ದೇಶಸೇವೆ ಮಾಡುತ್ತಿದ್ದಾರೆæ. ವಿಷಮ ಹವಾಮಾನ, ಕಠಿಣಾತಿ ಕಠಿಣ ಪರಿಸ್ಥಿತಿಯಿರುವ ಅರುಣಾಚಲ, ಕಾಶ್ಮೀರ, ಲಡಾಖ್‌ನಲ್ಲಿ ಉತ್ಕೃಷ್ಟದೇಶಭಕ್ತಿಯಲ್ಲಿ ಸೇವೆ ಸಲ್ಲಿಸುವ ಯೋಧರಿಗೆ ಜನತೆ ‘ಹಿಮ ವೀರ’ ಎಂದು ಗೌರವದಿಂದ ಕರೆಯುತ್ತಾರೆ. ಇದು ಸರ್ಕಾರ ನೀಡುವ ಪದ್ಮವಿಭೂಷಣ, ಪದ್ಮಶ್ರೀ ಪ್ರಶಸ್ತಿಗಿಂತಲೂ ಹೆಚ್ಚಿನ ಗೌರವ ಎಂಬುದು ನನ್ನ ವೈಯಕ್ತಿಯ ಭಾವನೆ’ ಎಂದರು.
ದಿಲ್ಲಿಗೆ ಬನ್ನಿ: ರಮೇಶ್ ಜಾರಕಿಹೊಳಿಗೆ ಅಮಿತ್ ಶಾ ಸೂಚನೆ
‘ಇಂತಹ ಹಿಮ ವೀರರ ಮೇಲಿನ ಒತ್ತಡ ಇಳಿಸುವ ಸಲುವಾಗಿ, ಮಾನವೀಯ ದೃಷ್ಟಿಯಿಂದ ಐಟಿಬಿಪಿ ಯೋಧರು 100 ದಿನಗಳ ಕಾಲ ಕುಟುಂಬದ ಜೊತೆ ಕಳೆಯುವಂತಾಗಲು ಮತ್ತು ಹೆಡ್ ಕ್ವಾರ್ಟರ್ಸ್‌ಗಳಲ್ಲಿ ಕರ್ತವ್ಯ ನಿಯೋಜಿಸಲು ಕ್ರಮ ಕೈಗೊಳ್ಳುತ್ತೇವೆ. ಮುಂದಿನ ಚುನಾವಣೆಯ ಒಳಗಾಗಿ ಈ ನಿರ್ಧಾರ ಪ್ರಕಟಿಸಲು ಪ್ರಯತ್ನಿಸಲಾಗುತ್ತದೆ; ಎಂದು ಶಾ ನುಡಿದರು.
ಯೋಧರಿಗೆ ಸಕಲ ವ್ಯವಸ್ಥೆ: ‘ಯೋಧರಿಗಾಗಿ ಗಡಿ ಸುರಕ್ಷಾ ದಳಗಳ ಕೇಂದ್ರ ಸ್ಥಾನಗಳಲ್ಲಿ ವಸತಿ ನಿರ್ಮಾಣ, ಆರೋಗ್ಯ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆದ್ಯತೆ ನೀಡಿದ್ದಾರೆ. ಇ-ಆವಾಸ್ ಪೋರ್ಟಲ… ಮೂಲಕ ವಸತಿ ಸೌಕರ್ಯಗಳ ಸುಧಾರಣೆ ಮಾಡಲಾಗುತ್ತಿದೆ. ಕಳೆದ 8 ವರ್ಷದಲ್ಲಿ ಯೋಧರಿಗಾಗಿ 31 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. 17 ಸಾವಿರ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಮುಂಬರುವ ಬಜೆಟ್‌ನಲ್ಲಿ ಯೋಧರಿಗೆ 15 ಸಾವಿರಕ್ಕೂ ಹೆಚ್ಚಿನ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದು. ಇದರಿಂದ ಕೇಂದ್ರೀಯ ಸುರಕ್ಷಾ ಬಲದ ಒಟ್ಟಾರೆ ವಸತಿ ಯೋಜನೆ ತೃಪ್ತಿ ಅನುಪಾತ ಶೇ. 60ಕ್ಕಿಂತಲೂ ಹೆಚ್ಚು ಪ್ರಗತಿ ಸಾಧಿಸಿದಂತಾಗಲಿದೆ. ಗೃಹ ಸಚಿವನಾಗಿ ಇದು ವೈಯಕ್ತಿಕವಾಗಿ ನನಗೆ ಹೆಚ್ಚು ಸಂತೃಪ್ತಿ ನೀಡಿದೆ’ ಎಂದರು.
ಬಿಜೆಪಿಗೂ ಕರ್ನಾಟಕ ರಾಜ್ಯ ಎಟಿಎಂ: ಅಮಿತ್ ಶಾಗೆ ಎಚ್‌ಡಿಕೆ ತಿರುಗೇಟು
‘ಇನ್ನು, ಯೋಧರ, ಅವರ ಕುಟುಂಬಸ್ಥರ ಆರೋಗ್ಯವನ್ನು ಗಮದಲ್ಲಿಟ್ಟುಕೊಂಡು ಆಯುಷ್ಮಾನ್ ಸಿಎಪಿಎಫ್ ಯೋಜನೆ ಅಡಿ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ. ಕೇವಲ ಸಿಎಪಿಎಫ್ ಆಸ್ಪತ್ರೆ ಮಾತ್ರವಲ್ಲದೆ ಹಲವು ಆಸ್ಪತ್ರೆಗಳನ್ನು ಈ ಯೋಜನೆ ಅಡಿ ಸೇರ್ಪಡೆ ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ 20ಕೋಟಿ ರು. ಹೆಚ್ಚಿನ ಮೊತ್ತದ ಆರೋಗ್ಯ ತಪಾಸಣೆ, ಚಿಕಿತ್ಸೆಯ ಲಾಭವನ್ನು ಯೋಧರು ಪಡೆಯಲು ಸಾಧ್ಯವಾಗಿದೆ’ ಎಂದು ಅವರು ತಿಳಿಸಿದರು.