ಮಂಗಳೂರಿನ ಫಲ್ಗುಣಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೂವರು ಯುವಕರಿದ್ದ ದೋಣಿ ಮಗುಚಿದ್ದು, ಇಬ್ಬರು ನೀರುಪಾಲಾಗಿದ್ದಾರೆ.. ಈ ದುರಂತದಲ್ಲಿ ಓರ್ವ ಈಜಿ ದಡ ಸೇರಿದ್ದು, ಇನ್ನೊಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಫಲ್ಗುಣಿ ನದಿಯಲ್ಲಿ ಮೀನುಗಾರಿಕಾ ಬೋಟ್ ಮಗುಚಿ ಇಬ್ಬರು ಯುವಕರು ನೀರುಪಾಲು

ಮಂಗಳೂರು: ಮಂಗಳೂರಿನ ಫಲ್ಗುಣಿ ನದಿಯಲ್ಲಿ ಮೀನುಗಾರಿಕಾ ಬೋಟ್ ಮಗುಚಿ ಇಬ್ಬರು ಯುವಕರು ನೀರುಪಾಲಾದ ಘಟನೆ ನಡೆದಿದೆ. ಮಂಗಳೂರಿನ ಫಲ್ಗುಣಿ ನದಿಯಲ್ಲಿ ಮೀನುಗಾರಿಕೆ ವೇಳೆ ದೋಣಿ ಮುಗುಚಿ ಇಬ್ಬರು ನೀರು ಪಾಲಾಗಿದ್ದಾರೆ. ಅವರಲ್ಲೊಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮೃತರಾದವರನ್ನು ಕುಂಜತ್‌ಬೈಲ್ ನಿವಾಸಿ 28 ವರ್ಷದ ಗಣೇಶ್ ಎಂದು ಗುರುತಿಸಲಾಗಿದೆ ಹಾಗೂ ನೀರು ಪಾಲಾದ ಮತ್ತೊಬ್ಬ ಯುವಕನನ್ನು 24 ವರ್ಷದ ರಾಯಲ್ ಎಂದು ಗುರುತಿಸಲಾಗಿದೆ. ರಾಯಲ್‌ಗಾಗಿ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ನದಿಯ ಮಧ್ಯಭಾಗ ತಲುಪಿದಾಗ ದೋಣಿ ಹಠಾತ್ತನೆ ಮಗುಚಿ ಬಿದ್ದು ದುರಂತ

ಒಟ್ಟು ಮೂರು ಜನ ಮೀನು ಹಿಡಿಯುವುದಕ್ಕೆ ಹೋಗಿದ್ದರು ಅವರಲ್ಲಿ 29 ವರ್ಷದ ನಿತೇಶ್ ಅವರು ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಣೇಶ್, ರಾಯಲ್ ಮತ್ತು ನಿತೇಶ್ ಎಂಬ ಮೂವರು ಯುವಕರ ತಂಡ ಬುಧವಾರ ಮುಂಜಾನೆ ಸುಮಾರು 1:30 ರ ಸುಮಾರಿಗೆ ಸಣ್ಣ ನಾಡದೋಣಿಯಲ್ಲಿ ಮೀನುಗಾರಿಕೆಗಾಗಿ ನದಿಗೆ ತೆರಳಿದ್ದರು. ನದಿಯ ಮಧ್ಯಭಾಗ ತಲುಪಿದಾಗ ದೋಣಿ ಹಠಾತ್ತನೆ ಮಗುಚಿ ಬಿದ್ದು ಮೂವರೂ ನೀರಿಗೆ ಬಿದ್ದಿದ್ದಾರೆ. ಈ ಪೈಕಿ ನಿತೇಶ್ ಅವರು ಈಜಿ ದಡ ಸೇರಿದ್ದಾರೆ. ಗಣೇಶ್ ಮತ್ತು ರಾಯಲ್ ಅವರಿಗೆ ಈಜಲು ಬಾರದೆ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ತನ್ನಂತೆ ಇರುವವನ ಕರೆಸಿ ಸ್ನೇಹಿತನಿಗೆ ಏಪ್ರಿಲ್ ಫೂಲ್ ಮಾಡಿದ ಸಚಿನ್ ತೆಂಡೂಲ್ಕರ್

ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಶೋಧ ಕಾರ್ಯ ಆರಂಭಿಸಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಗಣೇಶ್ ಅವರ ಮೃತದೇಹ ಪತ್ತೆಯಾಗಿದ್ದು, ರಾಯಲ್ ಅವರ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸ್ವಲ್ಪ ರೆಕಾರ್ಡ್ ಮಾಡಿ ಅಂತ ಫೋನ್ ಕೊಟ್ಟು ಹೈಕೋರ್ಟ್ ಮುಂದೆಯೇ ವಾಹನಗಳಿಗೆ ಬೆಂಕಿ ಹಚ್ಚಿದ ಮಹಿಳೆ