ಬೆಂಗಳೂರಿನನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ತಾಪಮಾನ ಗಣನೀಯವಾಗಿ ಕುಸಿದಿದೆ. ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15.5 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ನಾಲ್ಕು ವರ್ಷಗಳ ದಾಖಲೆ ಮುರಿದಿದೆ. ನವೆಂಬರ್ 24ರವರೆಗೆ ಇದೇ ರೀತಿಯ ಚಳಿಯ ವಾತಾವರಣ ಮುಂದುವರೆಯಲಿದೆ.
- Home
- News
- State
- Karnataka Latest News Live: Winter - ಬೆಂಗಳೂರಿನಲ್ಲಿ ತಾಪಮಾನ ದಿಢೀರ್ ಕುಸಿತ - ನವೆಂಬರ್‌ನಲ್ಲಿ ಚಳಿ ದಾಖಲೆ ಉಡೀಸ್
Karnataka Latest News Live: Winter - ಬೆಂಗಳೂರಿನಲ್ಲಿ ತಾಪಮಾನ ದಿಢೀರ್ ಕುಸಿತ - ನವೆಂಬರ್‌ನಲ್ಲಿ ಚಳಿ ದಾಖಲೆ ಉಡೀಸ್

ಬೆಂಗಳೂರು: ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸ್ಪಷ್ಟ ಭರವಸೆ ದೊರೆಯದ ಹೊರತು ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸ್ವಾತಂತ್ರ್ಯ ಉದ್ಯಾನವನ ದಕ್ಕೆ ಆಗಮಿಸಿರುವ ಆಶಾ ಕಾರ್ಯಕರ್ತೆಯರು ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಮಂಗಳವಾರದಿಂದ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಮನವೊಲಿಸಲು ಯತ್ನಿಸಿದರೂ, ನಿಖರ ಭರವಸೆ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಸಚಿವಯು.ಟಿ.ಖಾದರ್ ಅವರು ಮಂಗಳವಾರ ಸಂಜೆ ಸ್ಥಳಕ್ಕೆ ಆಗಮಿಸಿ, ಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ನಡೆಸಲಾಗುವುದು ಎಂದಿದ್ದರೂ ಪ್ರತಿಭಟನೆ ಮುಂದು ವರೆಸಲಾಗಿತ್ತು. ಗುರುವಾರ ಖುದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಘಟನೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರೂ ಸಮಸ್ಯೆ ಪರಿಹಾರವಾಗಿಲ್ಲ.
Karnataka News Live 21 November 2026 Winter - ಬೆಂಗಳೂರಿನಲ್ಲಿ ತಾಪಮಾನ ದಿಢೀರ್ ಕುಸಿತ - ನವೆಂಬರ್‌ನಲ್ಲಿ ಚಳಿ ದಾಖಲೆ ಉಡೀಸ್
Karnataka News Live 21 November 2026 ಅಣ್ಣಾವ್ರ ಅಪಹರಣದಿಂದ ಅಪ್ಪು ಅಗಲಿಕೆವರೆಗೆ; ಸ್ಯಾಂಡಲ್‌ವುಡ್‌ಗೆ ಆದ ಮರೆಯಲಾಗದ ಐದು ಆಘಾತಗಳು!
Karnataka News Live 21 November 2026 ಕಿಡ್ನಿ ದಾನ ಮಾಡಿ ಉಳಿಸಿಕೊಂಡಿದ್ದ ಪತ್ನಿ ಹಿಟ್ ಅಂಡ್ ರನ್ ಗೆ ಬಲಿ, ವಿಧಿಯ ಕ್ರೂರ ಆಟಕ್ಕೆ ಕಣ್ಣೀರಿಟ್ಟ ಪತಿ!
ರಾಷ್ಟ್ರೀಯ ಹೆದ್ದಾರಿ-48ರ ಎಡೇಹಳ್ಳಿ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ವೀಣಾ ಬಾಯಿ (38) ಸ್ಥಳದಲ್ಲೇ ಮೃತಪಟ್ಟಿದ್ದಾರೆ. 6 ವರ್ಷಗಳ ಹಿಂದೆ ಪತಿ ಶಿವಾಜಿ ರಾವ್ ಕಿಡ್ನಿ ದಾನ ಮಾಡಿ ಪತ್ನಿಯನ್ನು ಉಳಿಸಿದ್ದರು. ಸಿದ್ದಗಂಗಾ ಮಠದ ಪೂಜೆ ಮುಗಿಸಿ ಬೈಕ್‌ನಲ್ಲಿ ಮರಳುವಾಗ ಅಪಘಾತ ಸಂಭವಿಸಿದೆ.
Karnataka News Live 21 November 2026 ಸ್ಯಾಂಕಿ ಟ್ಯಾಂಕ್ ಬಳಿ ಹೊಸ ಬದಲಾವಣೆ - ಶ್ರೀರಾಂಪುರ ಮೆಟ್ರೋ ಬಳಿ ಬಹುಮಹಡಿ ಪಾರ್ಕಿಂಗ್
ಮಲ್ಲೇಶ್ವರಂನ ಸ್ಯಾಂಕಿ ಟ್ಯಾಂಕಿ ಪ್ರವೇಶ ದ್ವಾರದ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಸ್ಕೈವಾಕ್ ನಿರ್ಮಿಸಲು ಜಿಬಿಎ ಮುಂದಾಗಿದೆ. ಶಾಸಕ ಡಾ. ಅಶ್ವತ್ ನಾರಾಯಣ್ ನೇತೃತ್ವದ ಸಭೆಯಲ್ಲಿ ಶ್ರೀರಾಮಪುರ ಮೆಟ್ರೋ ಬಳಿ ಬಹುಮಹಡಿ ಪಾರ್ಕಿಂಗ್ ಮತ್ತು ಇತರ ಕಾಮಗಾರಿಗಳ ತ್ವರಿತಗತಿಗೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.