ಭಟ್ಕಳದಲ್ಲಿ 14 ಪಾಕಿಸ್ತಾನಿಯರಿದ್ದರೂ ಅವರು ಇಲ್ಲಿನವರನ್ನು ವಿವಾಹ ಆಗಿರುವುದರಿಂದ ಅವರು ದೇಶ ತೊರೆಯದೆ, ಇಲ್ಲೇ ವಾಸಿಸಬಹುದಾಗಿದೆ. ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ತಮ್ಮ ದೇಶಕ್ಕೆ ಹೋಗಲು 48 ಗಂಟೆ ಕೇಂದ್ರ ಸರ್ಕಾರ ಗಡುವು ನೀಡಿದೆ.
ಭಟ್ಕಳ (ಏ.25): ಭಟ್ಕಳದಲ್ಲಿ 14 ಪಾಕಿಸ್ತಾನಿಯರಿದ್ದರೂ ಅವರು ಇಲ್ಲಿನವರನ್ನು ವಿವಾಹ ಆಗಿರುವುದರಿಂದ ಅವರು ದೇಶ ತೊರೆಯದೆ, ಇಲ್ಲೇ ವಾಸಿಸಬಹುದಾಗಿದೆ. ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ತಮ್ಮ ದೇಶಕ್ಕೆ ಹೋಗಲು 48 ಗಂಟೆ ಕೇಂದ್ರ ಸರ್ಕಾರ ಗಡುವು ನೀಡಿದೆ. ಆದರೆ ಇಲ್ಲಿರುವ ಬಹುತೇಕರು ಮಹಿಳೆಯರಾಗಿದ್ದು, ಅವರನ್ನು ಸ್ಥಳೀಯರನ್ನು ವಿವಾಹವಾಗಿದ್ದು, ದೀರ್ಘಕಾಲೀನ ವೀಸಾ ಹೊಂದಿದ್ದಾರೆ. ಹೀಗಾಗಿ ಸದ್ಯಕ್ಕಂತೂ ಇವರು ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ. ಪ್ರಸ್ತುತ ಭಟ್ಕಳದಲ್ಲಿ ಒಟ್ಟು 14 ಪಾಕಿಸ್ತಾನಿ ಮೂಲದವರಿದ್ದು, ಅವರಲ್ಲಿ 10 ಮಹಿಳೆಯರಾಗಿದ್ದಾರೆ, ಮೂವರು ಮಕ್ಕಳು. ಇನ್ನೊಬ್ಬ ಮಹಿಳೆ ಅಕ್ರಮ ವಲಸಿಗರಾಗಿದ್ದು, ಅವರ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.
ಈ ಮಹಿಳೆ ಬಾಂಗ್ಲಾದೇಶದ ಮೂಲಕ ನುಸುಳಿ ಭಟ್ಕಳಕ್ಕೆ ಬಂದು ಇಲ್ಲಿ ಸಂಸಾರ ಮಾಡುತ್ತಿದ್ದು, ಆಕೆಯ ಮೇಲೆ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಇಲ್ಲಿಯೇ ವಾಸವಾಗಿದ್ದಾಳೆ. ಭಟ್ಕಳಕ್ಕೂ ಹಾಗೂ ಪಾಕಿಸ್ತಾನಕ್ಕೂ ಬಹಳ ಹಿಂದಿನಿಂದಲೂ ನಂಟಿದೆ. ಇಲ್ಲಿನ ಅನೇಕರ ಸಂಬಂಧಿಗಳು ಪಾಕಿಸ್ತಾನದಲ್ಲಿ ಇರುವುದರಿಂದ ಇಂದಿಗೂ ಅವರ ಹಾಗೂ ಭಟ್ಕಳದವರ ನಡುವೆ ವೈವಾಹಿಕ ಸಂಬಂಧಗಳು ನಡೆಯುತ್ತಲೇ ಇರುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಪಾಕಿಸ್ತಾನದಿಂದ ಒಟ್ಟು 4 ಜನರು ಸಂದರ್ಶನ ವೀಸಾದಲ್ಲಿ ಬಂದು ಹೋಗಿದ್ದಾರೆ. ಆದರೆ, ಸದ್ಯ ಪಾಕಿಸ್ತಾನದಿಂದ ಪ್ರವಾಸಿ ವೀಸಾದೊಂದಿಗೆ ಬಂದಿದ್ದ ಪ್ರಜೆಗಳು ಯಾರೂ ಇಲ್ಲ ಎಂದು ತಿಳಿದು ಬಂದಿದೆ.
ಹಿಂದೂಗಳ ಧರಣಿ: ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪದಾಕರ ಗುಂಪು ಅಮಾಯಕ ಪ್ರವಾಸಿಗಳನ್ನು ಹತ್ಯೆ ಮಾಡಿದ ದುಷ್ಕೃತ್ಯ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬಿಜೆಪಿ, ಹಿಂದು ಪರ ಸಂಘಟನೆಗಳು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದವು. ನಗರದ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಬಳಿಯಿಂದ ಸಮಿತಿ ಮುಖಂಡರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಹಿಂದು ಧರ್ಮೀಯರು ಭಯೋತ್ಪಾದಕರ ಕೃತ್ಯ ಖಂಡಿಸಿ ಘೋಷಣೆ ಕೂಗುತ್ತಾ ಉಪ ವಿಭಾಗಾಧಿಕಾರಿ ಕಚೇರಿ ಬಳಿ ತಲುಪಿ, ಸುಮಾರು ಹೊತ್ತು ರಸ್ತೆ ತಡೆ ನಡೆಸಿ, ನಂತರ ಎಸಿ ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಪಾಕ್ ಪ್ರಜೆಗಳ ಎಲ್ಲಾ ವೀಸಾಗಳೂ ಈಗ ರದ್ದು: ದೇಶ ಬಿಟ್ಟು ತೊಲಗಲು ನಾಳೆಯೇ ಕಡೆಯ ದಿನ
ಇದೇ ವೇಳೆ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಂನಲ್ಲಿ ಭಯೋತ್ಪಾದಕರ ಕೃತ್ಯ ಖಂಡನೀಯವಾಗಿದ್ದು, 370ನೇ ವಿಧಿ ರದ್ಧತಿ ನಂತರ ಅಲ್ಲಿ ನೆಲೆಸಿದ್ದ ಶಾಂತಿ, ಸಾಮರಸ್ಯ ಕದಡುವ ದುರುದ್ದೇಶದಿಂದ, ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ಗುಂಡು ಹಾರಿಸಿ, ಹತ್ಯೆ ಮಾಡಿದ್ದಾರೆ ಎಂದರು. ಪಹಲ್ಗಾಂನಲ್ಲಿ ಪ್ರವಾಸಿಗರ ಹೆಸರು, ಧರ್ಮವನ್ನು ಕೇಳಿ, ಹಿಂದುಗಳನ್ನು ವಿಶೇಷವಾಗಿ ಪುರುಷರನ್ನಷ್ಟೇ ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗಿದೆ. ಬಟ್ಟೆಗಳನ್ನು ಬಿಚ್ಚಿಸಿ, ಗುಂಡು ಹಾರಿಸಿ, ಕೊಲೆ ಮಾಡಿದ್ದು, ಇಂತಹ ಘೋರ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
