Asianet Suvarna News Asianet Suvarna News

Vokkaliga reservation: ಮೀಸಲಾತಿ ಹೆಚ್ಚಳ ಮಾಡಿದ ಸರ್ಕಾರ: ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ಸ್ವಾಗತ

ಒಕ್ಕಲಿಗ ಸಮುದಾಯವನ್ನು ಒಳಗೊಂಡ ಪ್ರವರ್ಗ-2C (ಹಳೆ ಪ್ರವರ್ಗ-3A) ಗೆ ರಾಜ್ಯ ಸರ್ಕಾರವು ಶೇಕಡ 4 ರಿಂದ 6 ರಷ್ಟು ಹೆಚ್ಚಳ ಮಾಡಿರುವುದನ್ನು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯು ಸ್ವಾಗತಿಸಿದೆ. 

The state government has increased the reservation for vakkalig community at bengaluru rav
Author
First Published Mar 25, 2023, 4:24 PM IST

ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು

ಬೆಂಗಳೂರು (ಮಾ.25): ಒಕ್ಕಲಿಗ ಸಮುದಾಯವನ್ನು ಒಳಗೊಂಡ ಪ್ರವರ್ಗ-2C (ಹಳೆ ಪ್ರವರ್ಗ-3A) ಗೆ ರಾಜ್ಯ ಸರ್ಕಾರವು ಶೇಕಡ 4 ರಿಂದ 6 ರಷ್ಟು ಹೆಚ್ಚಳ ಮಾಡಿರುವುದನ್ನು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯು ಸ್ವಾಗತಿಸಿದೆ. 

ನಮ್ಮ ಬೇಡಿಕೆ ಹೆಚ್ಚಿದ್ದರೂ ರಾಜ್ಯ ಸರ್ಕಾರವು ಕಾನೂನಿನ ಇತಿಮಿತಿಯಲ್ಲಿ ಪ್ರವರ್ಗ-2ಸಿ ಅಡಿಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಶೇಕಡ 4 ರಿಂದ 6 ರಷ್ಟು ಮೀಸಲಾತಿಯನ್ನು ಹೆಚ್ಚಳ ಮಾಡಿರುವುದು ಸಂತಸದ ಸಂಗತಿಯೇ ಸರಿ. ಮುಂದಿನ ದಿನಗಳಲ್ಲ ಹೆಚ್ಚಿನ ಪ್ರವರ್ಗ2Cಗೆ ಮೀಸಲಾತಿಯನ್ನು ನೀಡಲು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು.

ಒಕ್ಕಲಿಗ ಮೀಸಲಾತಿ ಹೋರಾಟಕ್ಕೆ ಸದಾ ಬೆಂಬಲ: ಎಚ್‌.ಡಿ.ಕುಮಾರಸ್ವಾಮಿ

ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು, ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಗಳು ಹಾಗೂ ಶ್ರೀ 'ಶ್ರೀ ಶ್ರೀ ಡಾ| ನಂಜಾವದೂತ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ, ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯು ಸುಮಾರು ಮೂರು ವರ್ಷಗಳ ಕಾಲ ಸತತವಾಗಿ ಮೀಸಲಾತಿ ಹೆಚ್ಚಳದ ಬಗ್ಗೆ, ಹೋರಾಟ ಮಾಡಿದ ಫಲವಾಗಿ ನಮ್ಮ ಸಮಾಜಕ್ಕೆ ರಾಜ್ಯ ಸರ್ಕಾರವು ಶೇಕಡ 4 ರಿಂದ ಶೇಕಡ 6 ಕ್ಕೆ ಮೀಸಲಾತಿ ಹೆಚ್ಚಳ ಮಾಡುವುದರ ಮೂಲಕ ಹಳ್ಳಿಗಾಡಿನ ರೈತಾಪಿ ವರ್ಗದ ಮಕ್ಕಳಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶವನ್ನು ಕಲ್ಪಸಲಾಗಿದೆ.

ಈ ಹೋರಾಟದಲ್ಲಿ ಸಮಾಜದ ಹಿರಿಯರು, ವಕೀಲರು, ಸಾಹಿತಿಗಳು, ಪತ್ರಕರ್ತರು, ಚಲನಚಿತ್ರ ಕಲಾವಿದರು. ವೈದ್ಯರು, ಕೈಗಾರಿಕೋದ್ಯಮಿಗಳು, ರೈತರು, ಯುವಕರು, ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳಾ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಹೋರಾಟಗಾರರು ಇನ್ನೂ ಮುಂತಾದ ಸಮಾಜ ಗಣ್ಯರುಗಳ ಹೋರಾಟದ ಫಲವಾಗಿ ಮೀಸಲಾತಿ ಹೆಚ್ಚಳವಾಗಿರುತ್ತದೆ. ಈ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ ಹೋರಾಟ ಸಮಿತಿಯು ಹೃತ್ವೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಮನವಿಯನ್ನು ಪರಿಗಣಿಸಿ ಒಕ್ಕಲಿಗ ಸಮುದಾಯ(Vakkaliga community)ವನ್ನು ಒಳಗೊಂಡ ಹಿಂದುಳಿದ ವರ್ಗದವರಿಗೆ ಪ್ರವರ್ಗ-2C ಅಡಿಯಲ್ಲಿ ಶೇಕಡ 6 ರಷ್ಟು ಮೀಸಲಾತಿಯನ್ನು ನೀಡಿದ ಕರ್ನಾಟಕ ಸರ್ಕಾರಕ್ಕೆ ಸಮಿತಿಯು ಕೃತಜ್ಞತೆಯನ್ನು ಸಲ್ಲಿಸುತ್ತದೆ. ವಿಶೇಷವಾಗಿ ರಾಜ್ಯದ ಮುಖ್ಯಮಂತ್ರಿಯಾದ ಶ್ರೀ. ಬಸವರಾಜ್ ಬೊಮ್ಮಾಯಿ ಹಾಗೂ ಒಕ್ಕಲಿಗ ಸಮಾಜದ ಮಂತ್ರಿಗಳಾದ ಶ್ರೀ. ಆರ್. ಅಶೋಕ, ಶ್ರೀ, ಅಶ್ವಥ್‌ನಾರಾಯಣ, ಶ್ರೀ. ಕೆ. ಗೋಪಾಲಯ್ಯ, ಶ್ರೀ. ಎಸ್.ಟಿ. ಸೋಮಶೇಖರ್, ಶ್ರೀ. ಅರಗಜ್ಞಾನೇಂದ್ರ, ಡಾ|| ಸುಧಾಕರ್ ಮತ್ತು ಶ್ರೀ. ನಾರಾಯಣಗೌರಿಗೆ ಸಮಿತಿಯು ಈ ಮೂಲಕ ಕೃತಜ್ಞತೆಗಳನ್ನು ರಾಜ್ಯ ಒಕ್ಕಲಿಗರ ಸಮಿತಿ ತಿಳಿಸಿದೆ.

ಇನ್ನೂ ಕರ್ನಾಟಕ ರಾಜ್ಯ ಒಂದರಲ್ಲೇ ನೆಲಸಿರುವ ಸುಮಾರ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆವುಳ್ಳ “ಒಕ್ಕಲಿಗ" ಸಮಾಜದ 115 ಉಪ ಪಂಗಡಗಳು ಅಪ್ಪಟ ಶ್ರಮಜೀವಿ ಹಾಗೂ ಭೂಮಿಯೊಡನೆ ನೇರ ಸಂಬಂಧವಿಟ್ಟುಕೊಂಡಿರುವ ಶುದ್ಧ ರೈತಾಪಿ ಶೂದ್ರ ಜನಾಂಗ, ಈ ಸಮುದಾಯವು ರಾಜ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು. ಆಗುತ್ತಿರುವ ತಾರತಮ್ಯಗಳ ಬಗ್ಗೆ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ ಅತಿ ಹಿಂದುಳದ ಈ ದ್ರಾವಿಡ ಜನಾಂಗಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಂವಿಧಾನದ ಆಶಯದಂತೆ ರಾಜ್ಯ ಸರ್ಕಾರದಿಂದ ಸಿಗಬೇಕಾದ ಪ್ರಾತಿನಿಧ್ಯ, ಪ್ರೋತ್ಸಾಹ ಮತ್ತು ಸವಲತ್ತುಗಳು ದೊರಕುತ್ತಿಲ್ಲ. ಈ ಜನಸಮುದಾಯದ ಇಹಪರ ಏಳೆಗಾಗಿ ಮತ್ತು ಅವರ ಬೇಕು-ಬೇಡಗಳ ಬಗ್ಗೆ ಹಾಗೂ ಸಂವಿಧಾನದ ಮೀಸಲಾತಿ ಹಕ್ಕಿನ ಬಗ್ಗೆ ಅಖಂಡ ಒಕ್ಕಲಿಗರನ್ನು ಸಂವಿಧಾನದ ಅನುಚ್ಛೇದ 15 (4) ಮತ್ತು 16(4) ರನ್ವಯ ಈಗಿರುವ ಮೀಸಲಾತಿ ಪ್ರಮಾಣವನ್ನು ಶೇಕಡ 4 ರಿಂದ ಶೇಕಡ 12ರ ಪ್ರಮಾಣಕ್ಕೆ ಹೆಚ್ಚಿಸಿ ಒಕ್ಕಲಿಗ ಜಾತಿಯ 115 ಉಪ ಪಂಗಡಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲು ಸರ್ಕಾರವನ್ನು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಸುಮಾರು 3 ವರ್ಷಗಳಿಂದ ಹಲವಾರು ಬಾರಿ ಮನವಿ ಮಾಡುತ್ತಲೇ ಬಂದಿದೆ.

ಪ್ರವರ್ಗ-3ಎ ಅಡಿಯಲ್ಲಿ ಬರುವ ಒಕ್ಕಲಿಗ ಸಮುದಾಯದ ಎಲ್ಲಾ ಉಪ ಪಂಗಡಗಳು ಸೇರಿ ಒಟ್ಟು ಜನಸಂಖ್ಯೆ ರಾಜ್ಯದ ಜನಸಂಖ್ಯೆಯ ಶೇಕಡ 16 ಕ್ಕಿಂತಲೂ ಹೆಚ್ಚಿಗೆ ಇದೆ. ಆದರೆ ಒಕ್ಕಲಗರೊಡನೆ ಬಅಜ, ಕೊಡವ, ರೆಡ್ಡಿ, ಕಾಪು ಇನ್ನಿತರೆ ಉಪಜಾತಿಗಳನ್ನು ಸೇರಿಸಿದ್ದು, ಆ ಸಮಾಜದವರನ್ನೂ ಸೇರಿಸಿ ಶೇಕಡ 21 ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರವರ್ಗ-3ಎ ಗೆ ಕೊಟ್ಟದ್ದ ಮೀಸಲಾತಿ ಕೇವಲ ಶೇಕಡ 4 ಮಾತ್ರ. ಈ 4% ಮೀಸಲಾತಿಯಲ್ಲಿ ಶೇಕಡ 16ಕ್ಕಿಂತ ಹೆಚ್ಚಿರುವ ಒಕ್ಕಲಿಗ ಸಮುದಾಯಕ್ಕೆ ಸಿಗುತ್ತಿರುವುದು ಕೇವಲ 3 ಕ್ಕೂ ಕಡಿಮೆ ಮೀಸಲಾತಿ ಮಾತ್ರ. ಆದುದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಕ್ಕಲಿಗರ ಹಾಗೂ ಇನ್ನಿತರೆ ಹಿಂದುಳಿದ ಜಾತಿಯನ್ನು ಒಳಗೊಂಡ ಪ್ರವರ್ಗ-3ಎ ಅಡಿಯಲ್ಲಿ ಶೇಕಡ 12 ರಷ್ಟು ಮೀಸಲಾತಿಯನ್ನು ನೀಡಲು ರಾಜ್ಯ ಸರ್ಕಾರಕ್ಕೆ ಕೋರಲಾಗಿತ್ತು.

Vokkaliga: ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಪಟ್ಟು: ಆದಿಚುಂಚನಗಿರಿ ಶ್ರೀ ನೇತೃತ್ವದಲ್ಲಿ ಸಭೆ

ಇನ್ನೂ ಸುದ್ದಿಗೋಷ್ಟಿಯಲ್ಲಿ ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ಅಧ್ಯಕ್ಷರಾದ ಡಾ.ಗಾನಂ ಶ್ರೀ ಕಂಠಯ್ಯರವರು (ನಿವೃತ ಐ.ಎಫ್.ಎಸ್) ಮತ್ತು ಪ್ರಧಾನ ಸಂಚಾಲಕರಾದ ಅಡಿಟರ್ ನಾಗರಾಜ್ ಯಲಚವಾಡಿ, ಸಮುದಾಯದ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು

Follow Us:
Download App:
  • android
  • ios