cubbon park in bengaluru ಭಾರೀ ವಿರೋಧ ವ್ಯಕ್ತವಾದ ಬಳಿಕ ರಾಜ್ಯ ಸರ್ಕಾರ ಕಬ್ಬನ್‌ ಪಾರ್ಕ್‌ನಲ್ಲಿ 10 ಅಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡುವ ಪ್ಲ್ಯಾನ್‌ಅನ್ನು ಕೈಬಿಟ್ಟಿದೆ. ಚುನಾವಣಾ ಆಯೋಗ ಸೇರಿದಂತೆ ಕೆಲವು ಸರ್ಕಾರಿ ಇಲಾಖೆಗಳನ್ನು ಇಲ್ಲಿಗೆ ಶಿಫ್ಟ್‌ ಮಾಡಲು ಯೋಜಿಸಿತ್ತು. 

ಬೆಂಗಳೂರು (ಫೆ.13): ಕೊನೆಗೂ ರಾಜ್ಯ ಸರ್ಕಾರ ತನ್ನ ಯಡವಟ್ಟು ಪ್ಲ್ಯಾನ್‌ಅನ್ನುಕೈಬಿಟ್ಟಿದೆ. ರಾಜ್ಯ ರಾಜಧಾನಿಯ ಹೃದಯಭಾಗದಲ್ಲಿರುವ ಅತಿದೊಡ್ಡ ಉದ್ಯಾನವನವಾಗಿರುವ ಕಬ್ಬನ್‌ ಪಾರ್ಕ್‌ನಲ್ಲಿ 10 ಅಂತಸ್ತಿನ ಕಟ್ಟಡ ಕಟ್ಟುವ ತನ್ನ ಪ್ಲ್ಯಾನ್‌ನಿಂದ ಹಿಂದೆ ಸರಿದಿದೆ. ಜನರ ಭಾರೀ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಈ ನಿರ್ಧಾರ ಮಾಡಿದೆ. ಚುನಾವಣಾ ಆಯೋಗ ಸೇರಿದಂತೆ ಇನ್ನೂ ಕೆಲವು ಪ್ರಮುಖ ಸರ್ಕಾರಿ ಕಚೇರಿಗಳನ್ನು ಇಲ್ಲಿಗೆ ಶಿಫ್ಟ್‌ ಮಾಡುವ ಬಗ್ಗೆ ರಾಜ್ಯ ಸರ್ಕಾರ ಯೋಚಿಸಿತ್ತು. ಆ ನಿಟ್ಟಿನಲ್ಲಿ ಹಳೇ ಚುನಾವಣಾ ಆಯೋಗದ ಬಿಲ್ಡಿಂಗ್‌ಅನ್ನು ಕೆವಿ ಅಲ್ಲಿ ಹತ್ತು ಅಂತಸ್ತಿನ ದೊಡ್ಡ ಕಟ್ಟದ ನಿರ್ಮಾಣ ಮಾಡಲು ಸರ್ಕಾರ ಯೋಚನೆ ಮಾಡಿತ್ತು. ದೊಡ್ಡ ಪ್ರಮಾಣದ ಕಟ್ಟಡ ನಿರ್ಮಾಣ ಮಾಡಬೇಕಾದಲ್ಲಿ ಕಬ್ಬನ್‌ ಪಾರ್ಕ್‌ನಲ್ಲಿ ಮರ ಕಡಿಯಬೇಕಾಗಿತ್ತು. ಅದಲ್ಲದೆ, ಪಾರ್ಕ್‌ನಲ್ಲಿ ಮಾನವ ಹಾಗೂ ವಾಹನ ಸಂಚಾರಗಳು ಏರಿಕೆಯಾಗುವ ಕಾರಣ ಪರಿಸರವಾದಿಗಳು ಹಾಗೂ ಸಾರ್ವಜನಿಕರು ಸರ್ಕಾರ ಈ ಪ್ಲ್ಯಾನ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಯಾವುದೇ ಕಾರಣಕ್ಕೂ ಇದನ್ನು ಮುಂದುವರಿಯಲು ಬಿಡೋದಿಲ್ಲ ಎಂದಿದ್ದರು. ಇನ್ನು ಕಬ್ಬನ್‌ ಪಾರ್ಕ್‌ನ ವಾಕರ್ಸ್‌ ಅಸೋಸಿಯೇಷನ್‌ ಭಾನುವಾರ ಪ್ರತಿಭಟನೆ ನಡೆಸಿದ ಬೆನ್ನಲ್ಲಿಯೇ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

2019ರಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರ ಈ ಬಾರಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿತ್ತು. ಅಗತ್ಯವಿದ್ದಾಗ ಕಬ್ಬನ್‌ ಪಾರ್ಕ್‌ನಲ್ಲಿ ಮರಗಳನ್ನು ನಿರ್ಮಾಣ ಮಾಡಬಹುದು, ಆದರೆ, ಇದಕ್ಕಾಗಿ ಯಾವುದೇ ಮರಗಳನ್ನು ಕಡಿಯುವಂತಿಲ್ಲ ಎಂದು ಹೈಕೋರ್ಟ್‌ ಆದೇಶ ನೀಡಿತ್ತು. ಇದರಿಂದಾಗಿ ಹೊಸ ಹತ್ತು ಅಂತಸ್ತಿನ ಕಟ್ಟದ ನಿರ್ಮಾಣ ಮಾಡಿ, ಕೆಲ ಸರ್ಕಾರಿ ಕಚೇರಿಗಳನ್ನು ಅಲ್ಲಿಗೆ ಶಿಫ್ಟ್‌ ಮಾಡುವ ನಿಟ್ಟಿನಲ್ಲಿ ಪ್ಲ್ಯಾನ್‌ ರೂಪಿಸಿತ್ತು.

2019ರಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರ ಈ ಬಾರಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿತ್ತು. ಅಗತ್ಯವಿದ್ದಾಗ ಕಬ್ಬನ್‌ ಪಾರ್ಕ್‌ನಲ್ಲಿ ಮರಗಳನ್ನು ನಿರ್ಮಾಣ ಮಾಡಬಹುದು, ಆದರೆ, ಇದಕ್ಕಾಗಿ ಯಾವುದೇ ಮರಗಳನ್ನು ಕಡಿಯುವಂತಿಲ್ಲ ಎಂದು ಹೈಕೋರ್ಟ್‌ ಆದೇಶ ನೀಡಿತ್ತು. ಇದರಿಂದಾಗಿ ಹೊಸ ಹತ್ತು ಅಂತಸ್ತಿನ ಕಟ್ಟದ ನಿರ್ಮಾಣ ಮಾಡಿ, ಕೆಲ ಸರ್ಕಾರಿ ಕಚೇರಿಗಳನ್ನು ಅಲ್ಲಿಗೆ ಶಿಫ್ಟ್‌ ಮಾಡುವ ನಿಟ್ಟಿನಲ್ಲಿ ಪ್ಲ್ಯಾನ್‌ ರೂಪಿಸಿತ್ತು.

Humble Politician Nograj ಪ್ಲ್ಯಾನ್‌ ನಿಜ ಮಾಡಿದ ಸರ್ಕಾರ, ಕಬ್ಬನ್‌ ಪಾರ್ಕ್‌ನಲ್ಲಿ ಏಳುತ್ತೆ ಅಪಾರ್ಟ್‌ಮೆಂಟ್‌!

ಈಗಾಗಲೇ ಕಬ್ಬನ್‌ ಪಾರ್ಕ್‌ನ ಆವರಣದಲ್ಲಿ ತಿಂಗಳ 2 ಮತ್ತು 4ನೇ ಶನಿವಾರ ವಾಹನ ಸಂಚಾರಕ್ಕೆ ಅನುವು ಮಾಡಿ ಸರ್ಕಾರ ಆದೇಶ ನೀಡಿದೆ. ಫೆಬ್ರವರಿ 8 ರಂದು ತೋಟಗಾರಿಕಾ ಇಲಾಖೆ ಈ ಆದೇಶ ನೀಡಿದ್ದು, ಈ ಭಾಗದಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಗೆ ಸಂತಸ ನೀಡಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಬ್ಬನ್ ಪಾರ್ಕ್ ಆವರಣದೊಳಗೆ ಹೈಕೋರ್ಟ್‌ನಿಂದ ಸಿದ್ದಲಿಂಗಯ್ಯ ವೃತ್ತ ಮತ್ತು ಸಿದ್ದಲಿಂಗಯ್ಯ ವೃತ್ತದಿಂದ ಹೈಕೋರ್ಟ್​ ಭಾಗದವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೂರು ತಿಂಗಳ ಕಾಲ ಪ್ರಾಯೋಗಿಕ ಆಧಾರದ ಮೇಲೆ ಈ ಅವಕಾಶ ನೀಡಲಾಗಿದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

ಇನ್ನು ಪಾರ್ಕ್‌ನಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದಕ್ಕೂ ಆಕ್ರಶೊ ವ್ಯಕ್ತವಾಗಿದೆ.ಎರಡನೇ ಮತ್ತು ನಾಲ್ಕನೇ ಶನಿವಾರದಂದು ಪಾರ್ಕ್​ನೊಳಗೆ ವಾಹನ ಸಂಚಾರಕ್ಕೆ ಅನುವುಮಾಡಿಕೊಡುವುದರಿಂದ ಕಬ್ಬನ್ ಪಾರ್ಕ್‌ಗೆ ಬರುವ 3,000, 5,000 ಮಂದಿಗೆ ತೊಂದರೆಯಾಗಲಿದೆ ಎಂದು ಕಬ್ಬನ್‌ ಪಾರ್ಕ್‌ ಸಂರಕ್ಷಣಾ ಸಮಿತಿ ಹೇಳಿದೆ. ತೋಟಗಾರಿಕೆ ಇಲಾಖೆಯ ಉನ್ನತಾಧಿಕಾರಿಗಳು ಕಬ್ಬನ್ ಪಾರ್ಕ್‌ನ ನಿರ್ವಹಣೆ ಅಥವಾ ಪರಿಸರ ವ್ಯವಸ್ಥೆಯ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸಮಿತಿ ದೂರಿದೆ.

Bengaluru rains: ಗಾಳಿಗೆ ಕಬ್ಬನ್‌ ಪಾರ್ಕಲ್ಲಿ 25ಕ್ಕೂ ಹೆಚ್ಚು ಮರ ಧರೆಗೆ!