Asianet Suvarna News Asianet Suvarna News

Davanagere Child Marriage: ದಾವಣಗೆರೆಯಲ್ಲಿ ಬಾಲ್ಯ ವಿವಾಹದಿಂದ 5ನೇ ತರಗತಿ ವಿದ್ಯಾರ್ಥಿಯನ್ನು ಕಾಪಾಡಿದ ಶಿಕ್ಷಕರು

ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಶಿಕ್ಷಕರು ಬಾಲ್ಯ ವಿವಾಹದಿಂದ ಕಾಪಾಡಿರುವ ಘಟನೆ ನಡೆದಿದೆ.  ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕರು ಗ್ರಾಮಸ್ಥರ ಸಹಾಯದಿಂದ ಬಾಲಕಿಗೆ ವಿವಾಹವಾಗುವುದನ್ನು ತಡೆದಿದ್ದಾರೆ.

Teachers intervene save girl from child marriage in davagere near SBR Colony gow
Author
Bengaluru, First Published Feb 21, 2022, 7:10 PM IST

ದಾವಣಗೆರೆ(ಫೆ.21): ದಾವಣಗೆರೆ ಜಿಲ್ಲೆಯ ಸರಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪೋಷಕರ ಆಶಯದಂತೆ ಮದುವೆಯಾಗಿ ತನ್ನ ಅಮೂಲ್ಯ ಬಾಲ್ಯ ಜೀವನವನ್ನು (childhood) ಮಾತ್ರವಲ್ಲ ಶಾಲಾ ಕಲಿಕೆಯನ್ನು ಕಳೆದುಕೊಳ್ಳಬೇಕಾಗಿತ್ತು. ಆದರೆ ಎಚ್ಚೆತ್ತ ಆಕೆಯ ಶಾಲಾ ಶಿಕ್ಷಕರು ಗ್ರಾಮಸ್ಥರ ಸಹಾಯದಿಂದ 5ನೇ ತರಗತಿ ವಿದ್ಯಾರ್ಥಿನಿಯ ಬಾಲ್ಯವಿವಾಹವಾಗುವುದನ್ನು (Child marriage) ತಡೆದಿದ್ದಾರೆ.  ಇದು ನಡೆದಿರುವುದು ದಾವಣಗೆರೆ  (Davanagere) ಜಿಲ್ಲೆಯ ಸಂತೆಬೆನ್ನೂರು (Santhebennur) ಎಂಬ ಗ್ರಾಮದಲ್ಲಿ.

ವಿದ್ಯಾರ್ಥಿನಿ (Student) ತನ್ನ ಎಸ್‌ಬಿಆರ್‌ ಕಾಲೊನಿಯಲ್ಲಿ ಅಜ್ಜಿಮನೆಯಲ್ಲಿ ವಾಸವಾಗಿದ್ದಳು. ಕಳೆದ ಹಲವು ತಿಂಗಳುಗಳಿಂದ ಶಾಲೆಗೆ ಹೋಗುತ್ತಿರಲಿಲ್ಲ.  ಹೀಗಾಗಿ ಈ ಬಗ್ಗೆ ಶಾಲೆಯ ಶಿಕ್ಷಕರು (Teachers) ಪ್ರಶ್ನಿಸಿದಾಗ ಆಕೆಯ ಪೋಷಕರು ಮದುವೆ ಮಾಡಲು ಮುಂದಾಗಿದ್ದಾರೆ ಎಂದು ವಿಷಯ ತಿಳಿದು ಬಂತು.

ಕೂಡಲೇ ಎಚ್ಚೆತ್ತ ಶಾಲೆಯ ಶಿಕ್ಷಕರು ಗ್ರಾಮಸ್ಥರ ಸಹಾಯದಿಂದ ಪೋಷಕರ ಮನವೊಲಿಸಿ ಮದುವೆ ಮಾಡದೆ ಶಿಕ್ಷಣ (education) ಕೊಡಿಸಿ ಎಂದು ಬುದ್ದಿ ಹೇಳಿದ್ದಾರೆ. ವಿದ್ಯಾರ್ಥಿನಿಯ ತಂದೆ ವಿಜಯಪುರದವರಾಗಿದ್ದು ತಾಯಿ ಸಂತೆಬೆನ್ನೂರಿನ ಗೊಲ್ಲರಹಳ್ಳಿ ಗ್ರಾಮದವರು. ಇಬ್ಬರೂ ಕೂಡ ದಿನಗೂಲಿ ನೌಕರರು (daily wage workers). ಬಡವರಾಗಿದ್ದು ತಮ್ಮ ಮಗಳನ್ನು ಸಾಕಿ, ಸಲಹಿ ಶಾಲೆಗೆ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಮದುವೆ ಮಾಡಲು ಮುಂದಾಗಿದ್ದರು ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ. ಏನೇ ಆಗಲಿ ತಮ್ಮ ವಿದ್ಯಾರ್ಥಿಯ ಸುಂದರ ಬಾಲ್ಯ ಜೀವನವು ನರಕದ ಬಾಲ್ಯವಾಗದೆ ಇರಲಿ ಎಂಬ ಶಿಕ್ಷಕರ ನಿಲುವಿಗೆ ಧನ್ಯವಾದ ಹೇಳಲೇ ಬೇಕು.

NGO Renovate HD Kote Rural School: ಬೆಂಗಳೂರಿನ ಎನ್‌ಜಿಒ ನಿಂದ ಮೈಸೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ನವೀಕರಣ!

ವಿವಾಹ ವಯಸ್ಸು 21, ಬಾಲ್ಯ ವಿವಾಹ ಹೆಚ್ಚಾಗುವ ಆತಂಕ: ಹೆಣ್ಣು ಮಕ್ಕಳ ವಿವಾಹ  ವಯಸ್ಸು ಹೆಚ್ಚಳ ಮಾಡುವ ಬಗ್ಗೆ ಕೇಂದ್ರ ಸರ್ಕಾರದ ಕಳೆದ ಡಿಸೆಂಬರ್‌ನಲ್ಲಿ ಇಟ್ಟ ಪ್ರಸ್ತಾಪಕ್ಕೆ ರಾಜ್ಯದ ಹಲವು ಜಿಲ್ಲೆಯಲ್ಲಿ ಸಾಕಷ್ಟು ಪರ, ವಿರೋಧ ಚರ್ಚೆಯಾಗಿತ್ತು. ಇದರ ಬೆನ್ನಲೇ ಕೇಂದ್ರದ ಈ ನಿರ್ಧಾರದಿಂದ ಜಿಲ್ಲಾದ್ಯಂತ ಬಾಲ್ಯ ವಿವಾಹ (Child Marriage)  ಪ್ರಕರಣಗಳು ಹೆಚ್ಚಾಗುವ ಆತಂಕ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. 

NHAI Recruitment 2022: ನವದೆಹಲಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ

ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಭಾಗದಲ್ಲಿ ಪ್ರಕರಣಗಳು ಹೆಚ್ಚು:
ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಇದುವರೆಗೂ ದಾಖಲಾಗಿರುವ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಅರ್ಧದಷ್ಟು ಜಿಲ್ಲೆಯ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿ, ಗೌರಿಬಿದನೂರು ತಾಲೂಕುಗಳಲ್ಲಿ ದಾಖಲಾಗಿವೆ. ಆದರಲ್ಲೂ ಕೊರೋನಾ (Corona) ಸಂದರ್ಭದಲ್ಲಿ ಸಾಕಷ್ಟು ಬಾಲ್ಯ ವಿವಾಹ ಪ್ರಕರಣಗಳನ್ನು ಅಧಿಕಾರಿಗಳು ಸಮಯೋಜಿತ ದಾಳಿಯಿಂದ ತಡೆಯಲಾಗಿದೆ. ಕೆಲ ಪೋಷಕರು ಕದ್ದು ಮುಚ್ಚಿ ಪೋಷಕರು ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿಸಿದ್ದಾರೆ.

Karnataka Admin Reforms Panel: ನಾನ್‌ ಗೆಜೆಟೆಡ್‌ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವಂತೆ ಶಿಫಾರಸು

ಆದರೆ ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ವಿವಾಹ 18 ರಿಂದ 21ಕ್ಕೆ ಏರಿಸುವುದು ಒಳ್ಳೆಯ ಉದ್ದೇಶವಾದರೂ ಕದ್ದುಮುಚ್ಚಿ ನಡೆಯುವ ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು ಹೇಗೆ ಎನ್ನುವ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ ಬರೋಬ್ಬರಿ 6 ವರ್ಷದಲ್ಲಿ 660 ಬಾಲ್ಯ ವಿವಾಹ ಪ್ರಕರಣಗಳು ನಡೆದಿದ್ದು ಆ ಪೈಕಿ 57 ಬಾಲ್ಯ ವಿವಾಹಗಳು ನಡೆದು  ಆ ಪೈಕಿ 603 ವಿವಾಹಗಳನ್ನು ಅಧಿಕಾರಿಗಳು, ಪೊಲೀಸರು (Police) ಕಾರ್ಯಾಚರಣೆ ನಡೆಸಿ ತಡೆಯಲಾಗಿದೆ. 

IGM Recruitment 2022: 10ನೇ ತರಗತಿಯಾದವರಿಗೆ ಬಂಗಾರದಂತಹ ಉದ್ಯೋಗವಕಾಶ!

Follow Us:
Download App:
  • android
  • ios